On the account of Swami Vivekananda Jayanti and Samartha Bharata initiative of #VivekBand campaign, various parts of the state observed the same by fanning out the message of Swami Vivekananda and distributing VivekBands and youth pleadging the message of Swamiji of #BeGood_DoGood

 

ಧಾರವಾಡ ಜಿಲ್ಲೆಯ ಜಿ.ಬಸವನಕೊಪ್ಪ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅ೦ಗವಾಗಿ ವಿವೇಕ ಬ್ಯಾಂಡ್ ಅಭಿಯಾನ ನಿಮಿತ್ತ ಗ್ರಾಮದ ಜನರಿಗೆ ಉಚಿತವಾಗಿ ಜನರಿಗೆ ಕಣ್ಣಿನ ಪೊರೆ ತಪಾಸಣಾ ಶಿಬಿರ ನಡೆಸಲಾಯಿತು.
100ಕ್ಕೂ ಹೆಚ್ಚಿನ ಜನ ತಪಾಸಣೆ ಮಾಡಿಸಿಕೊ೦ಡರು ಮತ್ತು ಹೆಚ್ಚಿನ ಪ್ರಮಾಣದ ಚಿಕಿತ್ಸೆ ಗಾಗಿ 20ಕ್ಕೂ ಹೆಚ್ಚು ಜನರನ್ನು ಡಾ .ಎಂ ಎಂ ಜೋಷಿ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಲಾಯಿತು.
#VivekBand

ಧಾರವಾಡ: ಕುರುಬಗಟ್ಟಿ ಗ್ರಾಮ:

ಸ್ವಾಮಿ ವಿವೇಕಾನಂದ 155 ನೆ ಜಯಂತಿಯಂದು ವಿವೇಕ್ ಬ್ಯಾಂಡ್ ಅಭಿಯಾನ ಪ್ರಯುಕ್ತ ಕುರುಬಗಟ್ಟಿ ಶಾಖೆಯಿಂದ 190 ಸಸಿಗಳಿಗೆ 53 ಸ್ವಯಂ ಸೇವಕರು  ನೀರು ಉಣಿಸಿದರು.

12.01.2018, ದೊಡ್ಡಬಳ್ಳಾಪುರ: ನಗರದ ಹಲವೆಡೆಗಳಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ನಿಮಿತ್ತ ಸಮರ್ಥ ಭಾರತದ ಕಾರ್ಯಕರ್ತರು ತರುಣರಿಗೆ, ವಿವೇಕ್ ಬ್ಯಾಂಡ್ ನೀಡಿ ವಿವೇಕಾನಂದರ ಸಂದೇಶವನ್ನು ಸಾರಿದರು.

ಧಾರವಾಡ: ಅಮ್ಮಿನಭಾವಿ:
ಸ್ವಾಮಿ ವಿವೇಕಾನಂದ ರ ಜನ್ಮದಿನ ನಿಮಿತ್ತ “ವಿವೇಕ ಬ್ಯಾಂಡ್” ಕಾರ್ಯಕ್ರಮ ವನ್ನು ಮಕ್ಕಳಿಗೆ ನೋಟ್ಬುಕ್ ವಿತರಣೆ ಮಾಡುವ ಮುಖೇನ ಆಚರಿಸಲಾಯಿತು.