24 ಜನವರಿ 2019: ಬೆಂಗಳೂರಿನ ಕೋರಮಂಗಲದ “ನೇತಾಜಿ ಯುವ ಮಿಲನ”ದ ವತಿಯಿಂದ ಲಕ್ಷ್ಮೀದೇವಿ ಉದ್ಯಾನವನದಲ್ಲಿ ಭಾರತ ಸ್ವತಂತ್ರ ಸಂಗ್ರಾಮದ ಅಗ್ರಗಣ್ಯ ನಾಯಕರಾದ ಸುಭಾಶ್ ಚಂದ್ರ ಬೋಸ್ ರವರ ೧೨೨ ನೆಯ  ಜಯಂತಿಯನ್ನು ವಿಜೃ಼ಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮೇಜರ್ ಕಪೂರ್, ಬೋಸ್ ರವರ ಸೈನಿಕ ಜೀವನದ ಇತಿಹಾಸ ಮತ್ತು ಇಂದಿನ ಭಾರತದ ಸೈನ್ಯದ ಕುರಿತಾದ ಹತ್ತು ಹಲವು ವಿಚಾರಗಳನ್ನು ಮಂಡಿಸಿದರು, ಮತ್ತೊಬ್ಬ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಪ್ರೊ. ವಿಷ್ಣುಮೂರ್ತಿಯವರು ಇಂದಿನ ಪೀಳಿಗೆಗೆ ಸುಭಾಶರನ್ನು ಪರಿಚಯಿಸುವ ಮಾತುಗಳತ್ತ ಬೆಳಕು ಚೆಲ್ಲಿದರು, ಆಯೋಜಕರಾದ ನೇತಾಜಿ ಯುವ ಮಿಲನದ ಅಧ್ಯಕ್ಷರಾದ ಶ್ರೀ ರಾಜು ಬುರೆ, ಉಪಾಧ್ಯಕ್ಷರಾದ ಶ್ರೀ ವಸಂತಕುಮಾರ್, ಶ್ರೀ ಮುನಿರಾಜು, ಶ್ರೀ ರವಿ ಪಿಸೆ, ಶ್ರೀ ಮುಕೇಶ್ ರೆಡ್ಡಿ ಜೊತೆಗೆ ವಿವಿಧ ಶಾಲೆಯ ನೂರಾರು ಮಕ್ಕಳು, ಕೋರಮಂಗಲದ ಪೋಲಿಸ್ ಸಿಬ್ಬಂದಿ, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಸೇರಿ ಕಾರ್ಯಕ್ರಮವನ್ನು ಪುಷ್ಪ ನಮನ ಮತ್ತು ಸಿಹಿ ವಿತರಣೆಯ ಮೂಲಕ ವಿಜೃ಼ಂಭಣೆಯಿಂದ ಆಚರಿಸಿದರು. ಶ್ರೀ ದಯಾನಂದ ನಿರೂಪಿಸಿದರು, ಶ್ರೀ ಪರಪ್ಪ ಶಾನವಾಡ ವಂದಿಸಿದರು.