ಕುಮಟಾ, 06 ಜನವರಿ 2019:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರವಾರ ಜಿಲ್ಲೆಯ ಕುಮಟಾ ನಗರದಲ್ಲಿ ಮಹಾಸಾಂಘಿಕ್ ಆಯೋಜಿಸಲಾಗಿತ್ತು.

ವಕ್ತಾರರಾಗಿ ಆಗಮಿಸಿದ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖರಾದ ಶ್ರೀ ಡಾ.ರವೀಂದ್ರರು ಗುರಿ, ದಾರಿ ಮತ್ತು ಸಾಧನದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರವಾರ ಜಿಲ್ಲಾ ಸಂಘಚಾಲಕರಾದ ಶ್ರೀ ಹನುಮಂತ ಶಾನಭಾಗ ಮತ್ತು ಕುಮಟಾ ನಗರ ಸಂಘಚಾಲಕರಾದ ಶ್ರೀ ಅಶೋಕ ಬಾಳೇರಿ ಉಪಸ್ಥಿತರಿದ್ದರು‌. 10 ವಸತಿ ಹಾಗೂ 17 ಶಾಖೆಗಳಿಂದ 610 ಸ್ವಯಂಸೇವಕರು ಮಹಾಸಾಂಘಿಕದಲ್ಲಿ ಪಾಲ್ಗೊಂಡಿದ್ದರು.