ತಿಂಗಳ ಐದನೆಯ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಾಖೆಗಳ ಸಾಂಘಿಕ್ ಸೇವಾ ಸಾಂಘಿಕ್ ಆಗಿರುತ್ತದೆ. ರಾಜ್ಯದ ಹಲವು ಕಡೆಗಳಲ್ಲಿ ಸೇವಾ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹಿ ಸ್ವಯಂಸೇವಕರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಇಂದು ಪುತ್ತೂರು ನಗರದಲ್ಲಿ ನಡೆದ ಸಾಂಘಿಕ್ ನಿಂದ ಗಿಡ ನೆಡುವ ಕಾರ್ಯಕ್ರಮ ಜರುಗಿತು. ಒಟ್ಟು 70 ಗಿಡಗಳನ್ನು ನೆಡಲಾಯಿತು. 30 ಗಿಡಗಳನ್ನು ವಿತರಿಸಲಾಯಿತು. ಒಟ್ಟು 61 ಸ್ವಯಂಸೇವಕರು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.

ಸೇವಾ ಸಾಂಘಿಕ್ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಸೇವಾಬಸ್ತಿಯಲ್ಲಿ (ಸ್ಲಮ್) ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಯಿತು.

ಸೇವಾ ಸಾಂಘಿಕ್ ನ ಅಂಗವಾಗಿ ಇಂದು ಚಿಕ್ಕಮಗಳೂರು ನಗರದ ರಾಮನಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ವಿಭಾಗ ಕಾರ್ಯವಾಹ ಶ್ರೀ ನರೇಂದ್ರ, ನಗರ ಸಂಘಚಾಲಕ್ ಶ್ರೀ ಗಿರಿಜಾ ಶಂಕರ, ಚಿಕ್ಕಮಗಳೂರು ಶಾಸಕ ಶ್ರೀ ಸಿ ಟಿ ರವಿ ಮುಂತಾದವರು ಉಪಸ್ಥಿತರಿದ್ದರು. ಸುಮಾರು 35 ಸ್ವಯಂಸೇವಕರು ಭಾಗವಹಿಸಿದರು.

ಬೆಂಗಳೂರಿನ ಕುಂದಲಹಳ್ಳಿ ನಗರದ ಸೇವಾ ಬಸ್ತಿಯಲ್ಲಿ 40 ಕ್ಕೂ ಹೆಚ್ಚು ಪರಿವಾರಗಳು, ಆರೆಸ್ಸೆಸ್ ಸ್ವಯಂಸೇವಕರು ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉಪಯೋಗವನ್ನು ಪಡೆದುಕೊಂಡರು.

ಬೆಂಗಳೂರಿನ ಯಲಹಂಕಾದ ಸೇವಾ ಬಸ್ತಿಯಲ್ಲೂ (ಸ್ಲಮ್) ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.