ಅಖಿಲ ಭಾರತೀಯ ಪ್ರತಿನಿಧಿ ಸಭೆ, ಸಂಘ ಕಾರ್ಯದ ವರದಿ ಪ್ರಕಟಣೆ

ಗ್ವಾಲಿಯರ್ , ಮಾರ್ಚ್ ೮: ಪ್ರತಿವರ್ಷವೂ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಈ ವರ್ಷ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ನಗರದಲ್ಲಿ ನಡೆಯುತ್ತಿದೆ. ಮಾರ್ಚ್ ೮,೯,೧೦ರಂದು ನಡೆಯುವ ಸಭೆಯಲ್ಲಿ ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿ, ಅಖಿಲ ಭಾರತೀಯ ಪದಾಧಿಕಾರಿಗಳು, ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಕಾರ್ಯಕರ್ತರು, ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಪ್ರತಿನಿಧಿಗಳು, ವಿಶೇಷ ಅಹ್ವಾನಿತ ಸದಸ್ಯರು ಸೇರಿದಂತೆ ಪ್ರಾಂತ, ಕ್ಷೇತ್ರಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

ಇಂದಿನ ಬೆಳಗ್ಗಿನ ಪ್ರತಿವೇದನದಲ್ಲಿ ಆರೆಸ್ಸೆಸ್ ನ ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿಯವರು ನಮ್ಮನ್ನಗಲಿದ ಮಾಜಿ ಕೇಂದ್ರ ಸಚಿವ ಶ್ರೀ ಅನಂತಕುಮಾರ್, ಮಾಜಿ ರೈಲು ಸಚಿವರಾದ ಸಿ ಕೆ ಜಾಫರ್ ಶರೀಫ್, ಸಿದ್ದಗಂಗಾ ಮಠದ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ, ರಾಮಕೃಷ್ಣಾಶ್ರಮದ ಪೂಜ್ಯ ಜಗದಾತ್ಮಾನಂದರು, ಮಾಜಿ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡಿಸ್ ರನ್ನು ಸೇರಿದಂತೆ ನಮ್ಮನ್ನಗಲಿದ ಹಿರಿಯರನ್ನು ಸ್ಮರಿಸಲಾಯಿತು. ಗಡಿಯನ್ನು ಕಾಯುವ ಕೆಲಸದಲ್ಲಿ ನಿರತ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರು, ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಸದ್ಗತಿ ಕೋರಿದರು.

೨೦೧೮-೧೯ ರ ಸಾಲಿನಲ್ಲಿ ಜರುಗಿದ ಸಂಘ ಶಿಕ್ಷಾ ವರ್ಗ, ಪ್ರಾಥಮಿಕ ಶಿಕ್ಷಾ ವರ್ಗ, ಶಾಖೆಗಳ ಸಂಖ್ಯೆ ಹಾಗೂ ಅವು ಬೆಳೆದಿರುವ ಅಂಕಿ ಅಂಶಗಳನ್ನು ಪ್ರಕಟಿಸಲಾಯಿತು. ಅದರನ್ವಯ,

ಸಂಘ ಶಿಕ್ಷಾ ವರ್ಗಗಳ, ಪ್ರಾಥಮಿಕ ಶಿಕ್ಷಾ ವರ್ಗಗಳ ವರದಿ :

ಸಂಘ ಶಿಕ್ಷಾ ವರ್ಗ :

 

ಸಾಮಾನ್ಯ ವರ್ಗಗಳು

ವಿಶೇಷ ವರ್ಗಗಳು

  ಒಟ್ಟು ಸ್ಥಾನಗಳು ಉಪಸ್ಥಿತರ ಸಂಖ್ಯೆ ಒಟ್ಟು ಸ್ಥಾನಗಳು ಉಪಸ್ಥಿತರ ಸಂಖ್ಯೆ
ಪ್ರಥಮ ವರ್ಷ 9512 15639 1779 2490
ದ್ವಿತೀಯ ವರ್ಷ 2673 3335 1504 2064
ತೃತೀಯ ವರ್ಷ 646 703

 ಪ್ರಾಥಮಿಕ ಶಿಕ್ಷಾ ವರ್ಗ

  ಒಟ್ಟು ವರ್ಗಗಳು ಶಾಖೆಗಳು ಪ್ರತಿನಿಧಿತ್ವ ಸಂಖ್ಯೆ
2017-18 1180 27814 95318
2018-19 1255 29524 93744

ಕಾರ್ಯ ಸ್ಥಿತಿ

  ಸ್ಥಾನಗಳು ಶಾಖೆಗಳು ಸಾಪ್ತಾಹಿಕ ಮಿಲನ್ ಮಾಸಿಕ ಮಿಲನ್
ಮಾರ್ಚ್-18 37190 58967 16405 7976
ಮಾರ್ಚ್-19 37011 59266 17229 8382
ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿ,

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Resolution 1 at ABPS, Gwalior: Bharatiya Family System: A Unique Contribution to humanity

Sat Mar 9 , 2019
  Rashtriya Swayamsewak Sangh Akhil Bhartiya Pratinidhi Sabha, Gwalior Phalgun Shukla 2-4 Yugabd 5120, 8-10 March 2019 Resolution- 1 Bharatiya Family System: A Unique Contribution to humanity Family system is the precious contribution of our society to the humanity. Due to its uniqueness, Hindu family functions as the basic unit […]