29 ಜೂನ್ 2019, ದಾಂಡೇಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಂಡೇಲಿಯ ಪೂರ್ವ ಸಂಘಚಾಲಕರಾದ ಮಾನ್ಯ ಜವಾಹರ ಬಾಹೇತಿ ಇವರು ಇಂದು ಮಧ್ಯಾಹ್ನ 1:30ಕ್ಕೆ ಸ್ವರ್ಗಸ್ಥರಾದರು. ಇವರಿಗೆ 89 ವರ್ಷ ವಯಸ್ಸಾಗಿತ್ತು. ಮಾನ್ಯರು ಮೂಲತಃ ರಾಜಸ್ಥಾನದವರು. 60 ವರ್ಷಗಳಿಂದ ದಾಂಡೇಲಿಯ ನಿವಾಸಿಗಳಾಗಿದ್ದರು. ದಾಂಡೇಲಿಯ ಪೇಪರ್ ಮಿಲ್ ನಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ದಾಂಡೇಲಿಯ ಸಂಘದ ಕಾರ್ಯಕ್ಕೆ ಬೆನ್ನೆಲುಬಾಗಿ ಮತ್ತು ಅನೇಕ ಸಾಮಾಜಿಕ ಚಟುವಟಿಕೆಗಳಿಗೂ ಆಧಾರ ಸ್ತಂಭವಾಗಿದ್ದ ಇವರು ಇಂದು ನಮ್ಮನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವು ಇಂದು ಸಂಜೆ ದಾಂಡೇಲಿಯಲ್ಲಿ ನೆರವೇರಿತು.

ಮಾನ್ಯ ಜವಾಹರ್ ಬಾಹೇತಿಯವರ ನಿಧನಕ್ಕೆ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ತೀವ್ರ ಸಂತಾಪ ಸೂಚಿಸಿದ್ದಾರೆ.