ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪ್ರಾಂತ ಸಂಯೋಜಕರಾದ ಡಾ ಶ್ರೀನಿವಾಸ ರಾವ್ ನಿಧನ

ಬೆಂಗಳೂರು,15 ಜುಲೈ 2019: ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಪೂರ್ಣಕಾಲೀನ ಸ್ವಯಂಸೇವಕರು ಮತ್ತು ಪ್ರಾಂತ ಸಂಯೋಜಕರಾದ ಡಾ ಶ್ರೀನಿವಾಸ ರಾವ್ ಅವರು ಇಂದು ಮಧ್ಯಾಹ್ನ ಶಿವಮೊಗ್ಗದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 56 ವರ್ಷ  ವಯಸ್ಸಾಗಿತ್ತು. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.

ಶ್ರೀಯುತರು ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಕಾರ್ಯಕರ್ತರನ್ನು ಅಗಲಿದ್ದಾರೆ.
ಅವರು ಹರಿಹರಪುರದ ಗುರುಕುಲದಲ್ಲಿ ೭ ವರ್ಷಗಳ ಕಾಲ ಆಚಾರ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತೀಯ ಸಂಕಲನ ಸಮಿತಿ, ಕರ್ನಾಟಕ ದಲ್ಲಿ ೧೧ ವರ್ಷಗಳ ಕಾಲ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಇತಿಹಾಸ ಸಂಕಲನ ಸಂಬಂಧಿತ ನಾನಾ ಚಟುವಟಿಕೆಗಳನ್ನು ಏರ್ಪಡಿಸಿದ್ದರು.

ಅನೇಕ ಇತಿಹಾಸದ ವಿದ್ವಾಂಸರ ಹಾಗೂ ವಿಶ್ವವಿದ್ಯಾಲಯದ ಉಪಕುಲಪತಿಗಳ ನಿಕಟ ಸಂಪರ್ಕವನ್ನೂ ಹೊಂದಿದವರಾಗಿದ್ದರು.

‘ಇವರ ಅಕಾಲಿಕ ಮರಣ ಭರಿಸಲಾಗದ ನಷ್ಟವನ್ನು ಉಂಟುಮಾಡಿದೆ. ಅವರ ಸ್ಥಳವನ್ನು ಮತ್ತೊಬ್ಬರಿಂದ ತುಂಬಲು ಕಷ್ಟ ಸಾಧ್ಯ. ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಮೋಕ್ಷ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತೇವೆ’ ಎಂದು
ಭಾರತೀಯ ಸಂಕಲನ ಸಮಿತಿ, ಕರ್ನಾಟಕ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

‘ಸದಾ ಲವಲವಿಕೆಯಿಂದ ಕೂಡಿದ ಸ್ನೇಹ ಜೀವಿ ನಿರಂತರ
ಪರಿಶ್ರಮಿ ಶ್ರೀ ಶ್ರೀನಿವಾಸ ರಾವ್ ಅವರಿಗೆ ಅನಂತ    ನಮನಗಳು’ ಎಂದು ಆರೆಸ್ಸೆಸ್ ನ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ.ನಾಗರಾಜ್ಅವರು ತಮ್ಮ ಶ್ರದ್ಧಾಂಜಲಿ ಸಂದೇಶದಲ್ಲಿ ತಿಳಿಸಿದ್ದಾರೆ.

 

Dr. Srinivasa Rao of Bharatiya Itihasa sankalana Samiti, Karnataka

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಆನೆಗುಂದಿ ಸಮೀಪದ ವ್ಯಾಸರಾಜರ ಮೂಲ ಬೃಂದಾವನವನ್ನು ಧ್ವಂಸಗೊಳಿಸಿದವರನ್ನು ಶಿಕ್ಷಿಸಿ, ಹಾಗೂ ಬೃಂದಾವನವನ್ನು ಪುನರ್ನಿಮಿಸಿ : ವಿ ಎಚ್ ಪಿ ಆಗ್ರಹ

Fri Jul 19 , 2019
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಹುಬ್ಬಳ್ಳಿ 19 ಜುಲೈ 2019: ಹಂಪಿ – ಹೊಸಪೇಟೆ ಆನೆಗುಂದಿ ಸಮೀಪದ ನವಬೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜರ ಮೂಲ ಬೃಂದಾವನವನ್ನು ದಿನಾಂಕ ಜುಲೈ 17ರ ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಆಘಾತಕಾರಿಯಾಗಿದೆ. ವಿಶ್ವ ಹಿಂದೂ ಪರಿಷತ್ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ. ನವಬೃಂದಾವನ ಗಡ್ಡೆಯು ಹಂಪಿ ಪ್ರಾಧಿಕಾರದ ಕ್ಷೇತ್ರವ್ಯಾಪ್ತಿಯಲ್ಲಿದ್ದು ಪುರಾತತ್ತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳಾಗಿರುವ ಈ ಪುಣ್ಯ ಸ್ಮಾರಕವನ್ನು […]