::ಆರೆಸ್ಸೆಸ್ ಸ್ಪಷ್ಟೀಕರಣ::

ಸರಸಂಘಚಾಲಕ ಶ್ರೀ ಮೋಹನ್ ಭಾಗವತಜೀಯವರ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ತುಣುಕೊಂದರ ಮೇಲೆ ಅನಾವಶ್ಯಕ ವಿವಾದವೆದ್ದಿರುವುದರ ಕುರಿತು ಅಖಿಲ ಭಾರತೀಯ ಪ್ರಚಾರ ಪ್ರಮುಖ ಶ್ರೀ ಅರುಣ್ ಕುಮಾರ್ ಜೀಯವರ ಸ್ಪಷ್ಟನೆ:

“ಸರಸಂಘಚಾಲಕ ಶ್ರೀ ಮೋಹನ್ ಭಾಗವತಜೀಯವರ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ತುಣುಕೊಂದರ ಮೇಲೆ ಅನಾವಶ್ಯಕ ವಿವಾದವೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದಲ್ಲಿ ಸದ್ಭಾವನಾಪೂರ್ಣವಾಗಿ ಪರಸ್ಪರರ ಮಧ್ಯೆ ಮಾತುಕತೆಯ ಆಧಾರದಲ್ಲಿ ಎಲ್ಲ ಪ್ರಶ್ನೆಗಳ ಸಮಾಧಾನದ ಮಹತ್ವವನ್ನು ತಿಳಿಯಪಡಿಸುತ್ತ ಅವರು ಮೀಸಲಾತಿಯಂತಹ ಸಂವೇದನಾಶೀಲ ವಿಷಯದ ಕುರಿತು ವಿಚಾರ ಮಾಡುವಂತೆ ಆಹ್ವಾನ ನೀಡಿದರು. ಮೀಸಲಾತಿ ಕುರಿತಾಗಿ ಸಂಘದ ನಿಲುವಿನ ವಿಷಯದಲ್ಲಿ ಅನೇಕ ಬಾರಿ ನೀಡಲಾಗಿರುವ ಸ್ಪಷ್ಟನೆಯಂತೆ , ಅನುಸೂಚಿತ ಜಾತಿ ,ಜನಜಾತಿ,ಓಬಿಸಿ ಮತ್ತು ಆರ್ಥಿಕ ಆಧಾರದಲ್ಲಿ ಹಿಂದುಳಿದವರ ಮೀಸಲಾತಿಗೆ ಸಂಪೂರ್ಣ ಸಮರ್ಥನೆ ಇರುತ್ತದೆ”

Arun Kumar, Akhila Bharatiya Prachar Pramukh

– ಅರುಣ್ ಕುಮಾರ್, ಅಖಿಲ ಭಾರತೀಯ ಪ್ರಚಾರ ಪ್ರಮುಖ
ರಾಷ್ಟ್ರೀಯ ಸ್ವಯಂಸೇವಕ ಸಂಘ