ನವ ದೆಹಲಿ:   ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕ ಶ್ರೀ ಮೋಹನ್ ಭಾಗವತರು ಇಂದು ನವ ದೆಹಲಿಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಮಾಧ್ಯಮ ಪ್ರತಿನಿಧಿಗಳೊಡನೆ  ಭೇಟಿ ನಡೆಸಿದರು.

ಈ ಸಂದರ್ಭದಲ್ಲಿ 50 ಕ್ಕೂ ಹೆಚ್ಚಿನ ಮಾಧ್ಯಮ ಸಂಘಟನೆಗಳ 80ಕ್ಕೂ ಹೆಚ್ಚು ಪತ್ರಕರ್ತರು ಉಪಸ್ಥಿತರಿದ್ದರು.


ಇಂದು ನಡೆದಿರುವ ಕಾರ್ಯಕ್ರಮ ಸತತವಾಗಿ ನಡೆಯುವ ಪ್ರಕ್ರಿಯೆಯ ಭಾಗವಾಗಿದ್ದು ಈ ಮೂಲಕ ಸರಸಂಘಚಾಲಕರು
ಸಮಾಜದ ವಿಭಿನ್ನ ವರ್ಗಗಳೊಡನೆ ನಿರಂತರ ರಚನಾತ್ಮಕ ಸಂವಾದವನ್ನು ನಡೆಸುತ್ತಾರೆ.

ಈ ಸಂವಾದ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು. ಶ್ರೀ ಮೋಹನ್ ಭಾಗವತರು ವಿದೇಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಘದ ದೃಷ್ಟಿಕೋನ ಮತ್ತು ಕಾರ್ಯದ ಕುರಿತಾದ  ಮಾಹಿತಿಯನ್ನು ಹಂಚಿಕೊಂಡರು.
ಇದರ ನಂತರ ನಡೆದ ಪ್ರಶ್ನೋತ್ತರದ ಅವಧಿಯಲ್ಲಿ ಅನೇಕ ವಿಷಯಗಳ ಮೇಲೆ ರಚನಾತ್ಮಕ ಚರ್ಚೆ ನಡೆಸಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಮಾನನೀಯ ಸುರೇಶ (ಭಯ್ಯಾಜೀ) ಜೋಶಿ , ಸಹ-ಸರಕಾರ್ಯವಾಹ ಡಾ.ಮನಮೋಹನ್ ವೈದ್ಯ, ಡಾ.ಕೃಷ್ಣಗೋಪಾಲ್  ಉತ್ತರ ಕ್ಷೇತ್ರದ ಸಂಘಚಾಲಕ ಡಾ.ಬಜರಂಗಲಾಲ್ ಗುಪ್ತ ಮತ್ತು ದೆಹಲಿಯ ಪ್ರಾಂತ ಸಂಘಚಾಲಕ ಕುಲಭೂಷಣ್ ಆಹುಜಾ ಜೀ ಯವರು ಉಪಸ್ಥಿತರಿದ್ದರು.

ಅರುಣ್ ಕುಮಾರ್
ಅಖಿಲ ಭಾರತೀಯ ಪ್ರಚಾರ ಪ್ರಮುಖ
ರಾಷ್ಟ್ರೀಯ ಸ್ವಯಂಸೇವಕ ಸಂಘ

24 ಸೆಪ್ಟೆಂಬರ್ ,2019