ಗ್ರಾಮ ಪಂಚಾಯತ್ ಚುನಾವಣೆ – ನನಸಾಗಲಿ ಗ್ರಾಮಸ್ವರಾಜ್ಯದ ಕನಸು

Photo: mangalorean

ಮಹಾತ್ಮ ಗಾಂಧಿಯವರ ಬಹುಮುಖ್ಯ ಕನಸು ಗ್ರಾಮ ಸ್ವರಾಜ್ಯ. ಅಂದರೆ, ಸ್ವಾವಲಂಬಿಯಾದ, ತನ್ನ ಬೇಕುಬೇಡಗಳನ್ನು ತಾನೇ ನಿರ್ಧರಿಸುವ, ತನ್ನ ಆಡಳಿತವನ್ನು ತಾನೇ ನಡೆಸುವ, ತನಗೆ ಬೇಕಾದ್ದನ್ನು ತಾನೇ ಬೆಳೆಯುವ ಉತ್ಪಾದಿಸುವ ಗ್ರಾಮ. ಇದೇನೂ ಭಾರತಕ್ಕೆ ಹೊಸತಲ್ಲ. ಪ್ರಾಚೀನ ಕಾಲದಿಂದಲೂ ನಮ್ಮ ಗ್ರಾಮಗಳು ಇದ್ದಿದ್ದೇ ಹಾಗೆ. ಆದರೆ, ಬ್ರಿಟಿಷರ ಆಡಳಿತ ಭಾರತದಲ್ಲಿ ಪ್ರಾರಂಭವಾದ ಮೇಲೆ, ಸ್ಥಳೀಯವಾಗಿ ಸಂಗ್ರಹವಾಗಿ ಸ್ಥಳೀಯವಾಗಿಯೇ ವಿನಿಯೋಗವಾಗುತ್ತಿದ್ದ ತೆರಿಗೆಯೆಲ್ಲವೂ, ಬ್ರಿಟಿಷ್ ಸರ್ಕಾರಕ್ಕೆ ಮೊದಲು ಪಾವತಿಯಾಗಿ ಅಲ್ಲಿಂದ ಅನುದಾನರೂಪದಲ್ಲಿ ನಗರ, ಗ್ರಾಮಗಳಿಗೆ ಕೊಡುವ ಪದ್ಧತಿ ಪ್ರಾರಂಭವಾಯಿತು. ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇದು ಒಂದು ಬಹಳ ಮುಖ್ಯ ಅಂಶ ತಾನೇ? ಹಾಗಾಗಿ ವಸಾಹತುಷಾಹಿ ಆಡಳಿತ ನಡೆಸಿದ್ದ ಬ್ರಿಟಿಷರಿಗೆ ಇದೊಂದು ಅನಿವಾರ್ಯ ಕ್ರಮ ಎಂದು ಅವರು ಭಾವಿಸಿದರು. ಹಾಗೆಯೇ, ಕೇಂದ್ರೀಕೃತ ಆಡಳಿತದಿಂದಾಗಿ ಜನರು ಎಲ್ಲದಕ್ಕೂ ಸರ್ಕಾರದ ಮುಂದೆ ಕೈಯೊಡ್ಡುವಂತಾಯಿತು.

ಇದನ್ನು ಬದಲಿಸಿ, ಪುನಃ ಭಾರತದ ಪ್ರಾಚೀನ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿಯೇ ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಪ್ರಚುರಗೊಳಿಸಿದರು. ಬ್ರಿಟಿಷರು ಮಾಡಿಟ್ಟ ವ್ಯವಸ್ಥೆ ಸ್ವಾತಂತ್ರ್ಯ ಬಂದ ಮೇಲಾದರೂ ಬದಲಾಗಬೇಕಿತ್ತು. ಆದರೆ, ಸ್ವತಂತ್ರ ಭಾರತದಲ್ಲಿ ಮೊದಲು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷದ ನಾಯಕ ಪ್ರಧಾನಿ ನೆಹರೂ ಅವರಿಗೆ ಭಾರತೀಯ ಮಾದರಿಗಳಲ್ಲಿ ನಂಬಿಕೆಯಿರಲಿಲ್ಲ. ಹಾಗಾಗಿ, ಬ್ರಿಟಿಷ್ ಮಾದರಿಯೇ ಮುಂದುವರೆಯಿತು. ಕ್ರಮೇಣ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಪ್ರಾರಂಭವಾದರೂ 75 ವರ್ಷಗಳ ಬಳಿಕವೂ ಗ್ರಾಮ ಸ್ವರಾಜ್ಯವೆನ್ನುವುದು ಇನ್ನೂ ಬಹಳ ದೂರ ಕ್ರಮಿಸಬೇಕಾದ ಹಾದಿಯಾಗಿಯೇ ಉಳಿದಿದೆ.

ಸಶಕ್ತ, ಸ್ವಾವಲಂಬಿ ಗ್ರಾಮಗಳ ನಿರ್ಮಾಣದಲ್ಲಿ ಗ್ರಾಮಪಂಚಾಯಿತಿ ಗಳ ಪಾತ್ರ ಬಹಳ ದೊಡ್ಡದು. ತಮ್ಮ ತಮ್ಮ ಗ್ರಾಮಗಳಲ್ಲಿ ಆಗಬೇಕಾದ ಕೆಲಸಗಳನ್ನು ಅಲ್ಲಿನ ಗ್ರಾಮಸ್ಥರೇ ನಿರ್ಣಯಿಸುವ ಪ್ರಕ್ರಿಯೆ ಗ್ರಾಮ ಪಂಚಾಯತಿಗಳಿಂದ ಸಾಧ್ಯ. ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಕೊಡುತ್ತಿರುವ ಅನುದಾನವನ್ನು ಹೆಚ್ಚಿಸಿದೆ. ಹಾಗಾಗಿ, ಗ್ರಾಮ ಪಂಚಾಯತಿಗಳಿಗೆ ಬರುವ ಹಣದ ಸಮರ್ಪಕ ಬಳಕೆ ಹಾಗೂ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಮರ್ಥ ವ್ಯಕ್ತಿಗಳ ಆಯ್ಕೆ ಬಹಳ ಮುಖ್ಯ. ಅ ನಿಟ್ಟಿನಲ್ಲಿ ಈ ತಿಂಗಳ ನಡೆಯುವ ಗ್ರಾಮ ಪಂಚಾಯತಿ ಚುನಾವಣೆ ಮಹತ್ತ್ವದ್ದು. ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಲು ಇದೊಂದು ಸುವರ್ಣಾವಕಾಶ.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟಂತೆ ಕಾಣುತ್ತಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಗ್ರಾಮಗಳಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿನ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಗ್ರಾಮೀಣ ಜನರಿಗೆ ಉಪಯುಕ್ತ ಯೋಜನೆಗಳು

 • ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ತಿಂಗಳೂ 5 ಕೆ.ಜಿ. ಗೋಧಿ ಅಥವಾ ಅಕ್ಕಿಯನ್ನು ಮತ್ತು ಒಂದು ಕೆ.ಜಿ. ದ್ವಿದಳ ಧಾನ್ಯವಗಳನ್ನು2020 ನವೆಂಬರ್‌ ವರೆಗೆ 80 ಕೋಟಿ ಬಡವರಿಗೆ ಉಚಿತ ಸರಬರಾಜು.
 • ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಣೆ.
 • ಮಹಿಳಾ ಜನಧನ್ ಖಾತೆಗಳಿಗೆ ಪ್ರತಿ ತಿಂಗಳು 500 ರೂಪಾಯಿ ಜಮೆ, ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಮತ್ತು ದಿವ್ಯಾಂಗರ ಖಾತೆಗಳಿಗೆ ರೂ. 10000/- ಜಮೆ.
 • ಪ್ರಧಾನಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ) ಬಡವರ ಖಾತೆಗಳಿಗೆ ನೇರ ನಗದು ವರ್ಗಾವಣೆಗಾಗಿ 2014ರಲ್ಲಿ ಪ್ರಾರಂಭಿಸಲಾದ ಜನ್‌ಧನ್ ಯೋಜನೆ. 38.33 ಕೋಟಿಗೂ ಹೆಚ್ಚು ಫಲಾನುಭವಿಗಳಿಂದ ಬ್ಯಾಂಕ್ ಖಾತೆ. ಇದರಲ್ಲಿ 53% ರಷ್ಟು ಫಲಾನುಭವಿಗಳು ಮಹಿಳೆಯರು.

ಗ್ರಾಮ ಪಂಚಾಯತ್ ಚುನಾವಣೆನಮ್ಮ ಜವಾಬ್ದಾರಿ ಏನು?

 • ನಮ್ಮ ಗ್ರಾಮದ ಚುನಾವಣೆಯಲ್ಲಿ ಸಮರ್ಥ ವ್ಯಕ್ತಿಗಳು ಸ್ಫರ್ಧಿಸುವಂತೆ ಹಾಗೂ ಅವರು ಆಯ್ಕೆಯಾಗುವಂತೆ ಪ್ರಯತ್ನ ಮಾಡುವುದು ಬಹಳ ಮುಖ್ಯ.
 • ಯಾವುದೇ ಚುನಾವಣೆಯಿರಲಿ, ಜಾತಿ ಮತ್ತು ಹಣದ ಪ್ರಭಾವ ಬಳಸಿ ಗೆಲ್ಲುವ ಪ್ರಯತ್ನ ಮಾಡುವವರು ಇದ್ದೇ ಇರುತ್ತಾರೆ. ಹಣ ಬಳಸಿ ಚುನಾವಣೆಯಲ್ಲಿ ಗೆದ್ದವರು, ಭ್ರಷ್ಟಾಚಾರದಿಂದ ಹಣ ಗಳಿಸದಿದ್ದರೆ ಖರ್ಚು ಮಾಡಿದ ಹಣ ಹಿಂತಿರುಗಿ ಬರುವುದು ಹೇಗೆ? ಅಲ್ಲದೇ, ಪುನಃ ಗಳಿಸಬಹುದೆಂಬ ವಿಶ್ವಾಸ ಇಲ್ಲದಿದ್ದರೆ ಹಣ ಖರ್ಚು ಮಾಡಿ ಏಕೆ ಚುನಾವಣೆಗೆ ನಿಲ್ಲುತ್ತಾರೆ? ಹಾಗಾಗಿ, ಅಂತಹವರ ಬಗ್ಗೆ ಎಚ್ಚರ ಅಗತ್ಯ.
 • ಯಾರಾದರೂ ಅಭ್ಯರ್ಥಿಗಳು ಹಣ ಕೊಡಲು ಮನೆಗೆ ಬಂದರೆ, ಅವರ ಹಣವನ್ನು ತಿರಸ್ಕರಿಸಿ ಅವರಿಗೆ ಮತ ನೀಡುವುದಿಲ್ಲವೆಂದು ಎಚ್ಚರಿಸಿ ಕಳುಹಿಸಬೇಕಾದ್ದು ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕರ್ತವ್ಯ. ಇಲ್ಲವಾದರೆ, ಭ್ರಷ್ಟಾಚಾರವನ್ನು ನಾವೇ ಪ್ರೋತ್ಸಾಹಿಸಿ ದಂತಾಗುತ್ತದೆ.
 • ಮತ ಹಾಕಲು ಹಣ ತೆಗೆದುಕೊಂಡರೆ, ನಮಗೇನೋ ಒಂದು ಬಾರಿ ಹಣ ಸಿಗಬಹುದು. ಆದರೆ, ಮುಂದೆ ಗ್ರಾಮ ಪಂಚಾಯತಿಯ ಕೆಲಸದಲ್ಲಿ ಕಳಪೆ ಕಾಮಗಾರಿ ಆಗದೇ ಇರುತ್ತದೆಯೇ? ಹಣ ಖರ್ಚು ಮಾಡಿ ಗೆದ್ದ ಪಂಚಾಯತಿ ಸದಸ್ಯ, ಸರ್ಕಾರದ ಅನುದಾನದಲ್ಲಿ ಹಣ ಲಪಟಾಯಿಸದೇ ಇರಲು ಸಾಧ್ಯವೇ?
 • ಕೆಲವೊಮ್ಮೆ ನಮ್ಮ ಜಾತಿಯವ ಎಂದು ನಾವು ಮತ ನೀಡುವಂತೆ ಒತ್ತಡ, ಪ್ರಭಾವ ನಮ್ಮ ಮೇಲೆ ಆಗಬಹುದು. ಆದರೆ, ನಮ್ಮ ಜಾತಿಯವ ಎಂದ ಕೂಡಲೇ ಸಮರ್ಥನೇ ಆಗಿರಬೇಕು ಎಂದೇನೂ ಇಲ್ಲವಲ್ಲ! ನಮ್ಮ ಜಾತಿಯವ ಭ್ರಷ್ಟನಾಗಿದ್ದರೆ? ಅಥವಾ ತನ್ನ ಜಾತಿಯವರಿಗೆ ಮಾತ್ರ ಕೆಲಸ ಮಾಡಿಕೊಟ್ಟರೆ? ಉಳಿದ ಮನುಷ್ಯರ ಕಥೆಯೇನು?
 • ಜಾತಿ ನೋಡಿ ಮತ ಹಾಕುವವರೂ ನಾವೇ. ಜಾತಿಗಳ ನಡುವೆ ಭೇದವಿದೆ, ತಾರತಮ್ಯವಿದೆ ಎಂದು ಕೊರಗುವವರೂ ನಾವೇ. ಇದೊಂದು ರೀತಿಯ ವಿಪರ್ಯಾಸವಲ್ಲವೇ. ಇದು ನಾವು ಯೋಚಿಸಬೇಕಾದ ವಿ?ಯ.

ಆದ್ದರಿಂದ, ನಮ್ಮ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಕೆಲಸ ಆಗಬೇಕಾದರೆ, ಹಣ ಮತ್ತು ಜಾತಿಯ ಪ್ರಭಾವವಿಲ್ಲದೇ ಸಮರ್ಥ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವುದು ಬಹಳ ಮುಖ್ಯ.

 • ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಇದುವರೆಗೂ 1.25 ಕೋಟಿಗೂ ಹೆಚ್ಚು ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ಸೇವಾ ಯೋಜನೆ. 50 ಕೋಟಿ ಜನರನ್ನು ಒಳಗೊಂಡ 10 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷದವರೆಗೆ ಆರೋಗ್ಯ ರಕ್ಷಣೆಗಾಗಿ ಹಣ ಒದಗಿಸುತ್ತದೆ ಈ ಯೋಜನೆ.
 • ಬಹಿರ್ದೆಸೆಮುಕ್ತ ಭಾರತ – ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಅತಿ ಹೆಚ್ಚು ಶೌಚಾಲಯಗಳ ನಿರ್ಮಾಣ.
 • ಪಿಎಂ ಸ್ವನಿಧಿ ಯೋಜನೆ-ಮೋದಿ ಸರ್ಕಾರ ೨೦೨೦ರ ಜೂನ್ ೧ರಂದು ರಸ್ತೆ ಬದಿಯ ವ್ಯಾಪಾರಿಗಳಿಗಾಗಿ ಪಿಎಂ ಸ್ವನಿಧಿ (ಪ್ರಧಾನ್ ಮಂತ್ರಿ ಆತ್ಮನಿರ್ಭರ್ ನಿಧಿ) ಯೋಜನೆ ಪ್ರಾರಂಭ. ರಸ್ತೆ ಬದಿಯ ವ್ಯಾಪಾರಿಗಳಿಗೆ ಕೈಗೆಟಕುವ ಬಡ್ಡಿದರದಲ್ಲಿ ಸಾಲ. ಈ ಯೋಜನೆಯಡಿಯಲ್ಲಿ ವ್ಯಾಪಾರಸ್ಥರು ರೂ. ೧೦,೦೦೦ಗಳವರೆಗೆ ಸಾಲವನ್ನು ಪಡೆದು ಒಂದು ವರ್ಷದ ಅವಧಿಯಲ್ಲಿ ಮಾಸಿಕ ಕಂತುಗಳ ಮೂಲಕ ಮರುಪಾವತಿಗೆ ಅವಕಾಶ.
 • ಒಂದು ರಾಷ್ಟ್ರ, ಒಂದು ಪಡಿತರ ಚೀಟಿ – ಒನ್ ನೇ?ನ್, ಒನ್ ರೇ?ನ್ ಕಾರ್ಡ್ ಎಂಬ ವ್ಯವಸ್ಥೆಯು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
 • ಜಲ್ ಜೀವನ್ ಮಿಷನ್ – ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ೨೦೨೪ ರ ವೇಳೆಗೆ ನಲ್ಲಿಗಳ ಮೂಲಕ ಶುದ್ಧ, ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ‘ಜಲ ಜೀವನ್ ಮಿ?ನ್’ ಯೋಜನೆ. ಕಳೆದ ವ? ಸುಮಾರು ೨ ಕೋಟಿಗೂ ಹೆಚ್ಚು ಕುಟುಂಬಗಳಿಗೆ ಕುಡಿಯಲು ಯೋಗ್ಯವಾದ ಶುದ್ಧ ನೀರನ್ನು ನಲ್ಲಿಗಳ ಮೂಲಕ ಒದಗಿಸಿದೆ.
 • ಪ್ರಧಾನಮಂತ್ರಿ ವಯವಂದನಾ ಯೋಜನೆ – ೬೦ ವ? ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾದ ಪಿಂಚಣಿ ಯೋಜನೆ.
 • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೨ ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣದ ಗುರಿ. ಕೆಲಸದಲ್ಲಿ ಉತ್ತಮ ಪ್ರಗತಿ.
 • ದೇಶದಲ್ಲಿ ೫,೦೦೦ ಕ್ಕೂ ಹೆಚ್ಚು ಜನೌ?ಧಿ ಕೇಂದ್ರಗಳ ಸ್ಥಾಪನೆ. ಜನಸಾಮಾನ್ಯರಿಗೆ ೯೦% ಅಗ್ಗದ ದರದಲ್ಲಿ ಔ?ಧಿ ಪೂರೈಕೆ.
 • ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ – ಈ ಯೋಜನೆಯಡಿ ೧೫.೭೭ ಕೋಟಿ ಜನರಿಗೆ ವಾರ್ಷಿಕ ಕೇವಲ ೧೨ ರೂ. ವಿಮಾಕಂತಿನಲ್ಲಿ ೨ ಲಕ್ಷ ರೂಗಳ ಅಪಘಾತ ವಿಮೆ.
 • ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) – ಸುಮಾರು ೬ ಕೋಟಿಗೂ ಹೆಚ್ಚು ಕುಟುಂಬಗಳಿಗೆ ವಾರ್ಷಿಕ ೩೩೦ ರೂ. ವಿಮಾಕಂತಿನಲ್ಲಿ ೨ ಲಕ್ಷ ರೂಗಳ ಜೀವ ವಿಮೆ.
 • ಪ್ರತಿ ಹಳ್ಳಿಗೆ ವಿದ್ಯುತ್ ಸೌಲಭ್ಯ – ದೇಶದ ಸುಮಾರು ೧೮,೪೫೨ ಗ್ರಾಮಗಳಿಗೆ ವಿದ್ಯುತ್ ಒದಗಿಸುವ ’ಪಂಡಿತ್ ದೀನದಯಾಳ್ ಗ್ರಾಮಜ್ಯೋತಿ ಯೋಜನೆ’ ಅವಧಿಗೂ ೧೨ ದಿನಗಳ ಮೊದಲೇ ಪೂರ್ಣ. ಈಗ ದೇಶ ಎಲ್ಲ ಗ್ರಾಮಗಳಿಗೂ ವಿದ್ಯುತ್.
 • ೯೯%ರ? ಮನೆಗಳಿಗೆ ವಿದ್ಯುತ್ ಸಂಪರ್ಕ: ‘ಸೌಭಾಗ್ಯ’ ಯೋಜನೆ ಯಡಿ ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ.
 • ಸಾಮಾನ್ಯ ವರ್ಗದ ಆರ್ಥಿಕ ದುರ್ಬಲ ವರ್ಗಕ್ಕೆ ಮೀಸಲಾತಿ: ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ೧೦ ರ? ಮೀಸಲಾತಿಯನ್ನು ಸಾಮಾನ್ಯವರ್ಗದ ಬಡವರಿಗೆ ಮೀಸಲಾಗಿರಿಸುವ ನಿರ್ಧಾರ.
 • ದೇಶದ ಎಲ್ಲಾ ಗ್ರಾಮಪಂಚಾಯಿತಿಗಳಿಗೂ ಬ್ರಾಡ್‌ಬ್ಯಾಂಡ್ ಮೂಲಕ ಇಂಟರ್‌ನೆಟ್ ಸೌಲಭ್ಯ – ಈಗಾಗಲೇ ೧.೫ ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಲಾಗಿದೆ.
 • ಸ್ವಾಮಿತ್ವ – ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಭಾಗಿತ್ವದಲ್ಲಿ ಆಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ಎಲ್ಲಾ ಭೂದಾಖಲೆಗಳ ಪರಿವೀಕ್ಷಣೆ ಮತ್ತು ದಾಖಲೀಕರಣ. ಆನ್‌ಲೈನ್‌ನಲ್ಲೇ ಭೂಮಿ ಮತ್ತು ಕಟ್ಟಡ ನಕ್ಷೆ ಅನುಮೋದನೆ ನೀಡುವ ತಂತ್ರಾಂಶ ಮತ್ತು ವೆಬ್‌ಸೈಟ್‌ಗೆ ಚಾಲನೆ.

ರೈತರ ಆದಾಯದಲ್ಲಿ ಹೆಚ್ಚಳ

 • ‘ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಳ.
 • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಕೃಷಿ ಕುಟುಂಬಗಳಿಗೆ ವ?ಕ್ಕೆ ೬,೦೦೦ ರೂಪಾಯಿಗಳ ನೆರವು.
 • ದೇಶದ ಅನ್ನದಾತರ ಹಗಲಿರುಳು ದುಡಿಮೆಯನ್ನು ಗುರುತಿಸಿ ಪಿಂಚಣಿ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಭಾರತದಲ್ಲೇ ಮೊದಲ ಬಾರಿಗೆ ಇಂತಹ ಪಿಂಚಣಿ ಸೌಲಭ್ಯ ಈಗ ರೈತರಿಗೆ ಸಿಗುತ್ತಿದೆ.
 • ೧೦,೦೦೦ ರೈತ ಉತ್ಪನ್ನ ಸಂಸ್ಥೆಗಳನ್ನು (ಎಫ್.ಪಿ.ಓ) ಪ್ರಾರಂಭಿಸಲಾಗಿದೆ. ಕೃಷಿ ಮೂಲಭೂತ ಸೌಕರ್ಯಗಳ ಆಧುನೀಕರಣಕ್ಕೆ ೧ ಲಕ್ಷ ಕೋಟಿಗಳ? ನಿಧಿ ಮೀಸಲು.
 • ಪಿಎಂ-ಕಿಸಾನ್, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವೇತನ, ಆರೋಗ್ಯ, ರಕ್ಷಣೆ, ಜೀವವಿಮಾ ರಕ್ಷಣೆ ಮತ್ತು ಸರ್ಕಾರದ ವಿವಿಧ ಯೋಜನೆಗಳಿಂದ ನೇರವಾಗಿ ಪಲಾನುಭವಿಗಳಿಗೆ ಹಣ ವರ್ಗಾವಣೆ. ಇದರಿಂದಾಗಿ ಈಗ ಮಧ್ಯವರ್ತಿಗಳಿಂದ ಆಗುತ್ತಿದ್ದ ಉಪಟಳವಿಲ್ಲ.
 • ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಗೆ ರಾಜ್ಯದ ಬಿಜೆಪಿ ಸರ್ಕಾರದಿಂದ ಹೆಚ್ಚುವರಿ ೪೦೦೦ ರೂಪಾಯಿಗಳ ಆರ್ಥಿಕ ನೆರವು. ಇದರಿಂದ ೫೦ ಲಕ್ಷ ರೈತ ಕುಟುಂಬಗಳಿಗೆ ಪ್ರಯೋಜನವಾಗಿದೆ.
 • ಅಟಲ್ ಪಿಂಚಣಿ ಯೋಜನೆ – ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ಒದಗಿಸುವ ಉದ್ದೇಶದಿಂದ ಮತ್ತು ೬೦ ವ?ದ ನಂತರ ಕನಿ? ಪಿಂಚಣಿ ಖಾತರಿಪಡಿಸುವ ಉದ್ದೇಶದ ಯೋಜನೆ. ೨೦೨೦ರ ಮೇ ೧೧ರವರೆಗೆ ಈ ಯೋಜನೆಯಡಿ ೨.೨೩ ಕೋಟಿ ಜನರ ನೋಂದಣಿ.

ನೆರೆಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ

 • ೪.೯೧ ಲಕ್ಷ ಜನರಿಗೆ ಆಶ್ರಯ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಆಹಾರ ಮತ್ತು ವೈದ್ಯಕೀಯ ಸೌಲಭ್ಯ.
 • ಸಂಪೂರ್ಣ ಹಾಳಾದ ಮನೆಗಳಿಗೆ ರೂ. ೫ ಲಕ್ಷ ಪರಿಹಾರ
 • ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ೯೧೪ ಕೋಟಿ. ಹಾಳಾದ ರಸ್ತೆ ದುರಸ್ತಿಗೆ ೫೦೦ ಕೋಟಿ.
 • ಪ್ರವಾಹದಿಂದ ಸಾವನ್ನಪ್ಪಿದ ಪ್ರತಿ ಕುಟುಂಬಕ್ಕೆ ೪೮ ಗಂಟೆಗಳೊಳಗಾಗಿ ರೂ. ೫ ಲಕ್ಷ ಪರಿಹಾರ ಧನ.

ಕೊರೋನ ನಿರ್ವಹಣೆ

 • ಲಾಕ್ಡೌನ್‌ದಿಂದಾಗಿ ರಾಜ್ಯದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ತವರು ರಾಜ್ಯಗಳಿಗೆ ಕಳುಹಿಸಲು ಉಚಿತ ಬಸ್ ಮತ್ತು ಶ್ರಮಿಕ ರೈಲುಗಳ ವ್ಯವಸ್ಥೆ. ೫ ಲಕ್ಷ ಜನರಿಗೆ ಇದರ ಪ್ರಯೋಜನ.
 • ೫೪ ಸಾವಿರ ಕೈಮಗ್ಗ ನೇಕಾರರಿಗೆ ಸಹಾಯ ಧನ.
 • ೧೧,೬೮೭ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ ೨೫,೦೦೦ ಸಹಾಯಧನ, ೨೭ ಲಕ್ಷ ಕುಟುಂಬಗಳಿಗೆ ಪ್ರಯೋಜನ.
 • ಮೆಕ್ಕೆಜೋಳ ಬೆಳೆದ ೧೦ ಲಕ್ಷ ರೈತರಿಗೆ ತಲಾ ೫ ಸಾವಿರ ಪರಿಹಾರ.
 • ೧೫.೮ ಲಕ್ಷ ನೋಂದಾಯಿತ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ.
 • ಆಟೋ-ಟ್ಯಾಕ್ಸಿ ಚಾಲಕರಿಗೆ, ಕ್ಷೌರಿಕರಿಗೆ, ಅಗಸ ವೃತ್ತಿ, ಛಾಯಗ್ರಾಹಕರು ಮುಂತಾದವರಿಗೆ ತಲಾ ೫ ಸಾವಿರ ಸಹಾಯಧನ
 • ಉದ್ದಿಮೆಗಳ ಪುನಶ್ಚೇತನಕ್ಕೆ ವಿದ್ಯುತ್ ಬಿಲ್ ಮೊತ್ತಕ್ಕೆ ವಿಧಿಸಲಾದ ಬಡ್ಡಿ ಮನ್ನಾ.
 • ಕೊರೋನ ವಾರಿಯರ್ಸ್ ಮೇಲಿನ ದೌರ್ಜನ್ಯ ತಡೆಗೆ ವಿಶೇ? ಕಾಯಿದೆ. ದೌರ್ಜನ್ಯ ಎಸಗುವ ಅಪರಾಧಿಗಳಿಗೆ ೩ ವ? ಶಿಕ್ಷೆ ಹಾಗೂ ೫೦ ಸಾವಿರ ದಂಡ ವಿಧಿಸುವ ಮಹತ್ತ್ವದ ಕಾನೂನು ತಿದ್ದುಪಡಿ.

ಜನಪರ ನಿರ್ಧಾರಗಳುಕೆಲಸದಲ್ಲಿ ಪ್ರಗತಿ

 • ರೈತರನ್ನು ಶೋ?ಣೆಗೊಳಪಡಿಸುತ್ತಿದ್ದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದಕ್ಕಾಗಿ ಎಪಿಎಂಸಿ ಕಾಯಿದೆ ತಿದ್ದುಪಡಿ.
 • ರೈತ ಪರವಾದ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ-೨೦೨೦.
 • ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-೨೦೨೦.
 • ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶಕ್ಕಾಗಿ ಕಲಂ ೭೯ಎ, ೭೯ಬಿ, ೭೯ಸಿ ಹಾಗೂ ೮೦ ರದ್ದು.
 • ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳ ರಚನೆ ಮತ್ತು ೫ ಲಕ್ಷಗಳವರೆಗೆ ಸಾಲ ಮತ್ತು ಸಹಾಯಧನ.
 • ಮಾತೃವಂದನಾ ಯೋಜನೆಯಡಿಯಲ್ಲಿ ೬,೭೭,೮೯೩ ಫಲಾನುಭವಿಗಳಿಗೆ ಆರೈಕೆ ಮತ್ತು ಆರ್ಥಿಕ ನೆರವು.
 • ಅಕ್ಟೋಬರ್ ೨೦೧೦ರ ಅಂತ್ಯಕ್ಕೆ ೯.೯೭ ಕೋಟಿಗಳ ಮಾನವ ದಿನಗಳ? ಉದ್ಯೋಗ ಸೃಷ್ಟಿ. ಇದು ಕಳೆದ ೫ ವ?ಗಳಲ್ಲೇ ಅತಿಹೆಚ್ಚು ಸಾಧನೆ. ೨೫.೧೨ ಲಕ್ಷ ಕುಟುಂಬಗಳಿಗೆ ಉದ್ಯೋಗ. ೩,೩೯೯ ಕೋಟಿ ರೂಪಾಯಿಗಳ ವ್ಯಯ.
 • ೨೫,೦೦೦ ಮೀನುಗಾರರಿಗೆ ೧೦೦ ಕೋಟಿ ರೂ. ಸಾಲಮನ್ನಾ
 • ‘ನಮ್ಮ ಗ್ರಾಮ – ನಮ್ಮ ರಸ್ತೆ’ ಯೋಜನೆಯಡಿ ೬,೪೬೮ ಕಿ.ಮೀ. ರಸ್ತೆಗಳ ನಿರ್ಮಾಣ
 • ೯೪ ಸಾವಿರ ಗ್ರಾ. ಪಂ. ಸದಸ್ಯರುಗಳಿಗೆ ಮೊಟ್ಟ ಮೊದಲ ಬಾರಿಗೆ ಗೌರವಧನ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಉಪನ್ಯಾಸಕನ ಗೋಶಾಲೆಗೆ ಪ್ರತಿಷ್ಠಿತ ಐಎಸ್ಒ ಪ್ರಮಾಣ ಪತ್ರ

Thu Dec 24 , 2020
ಕಲಬುರಗಿ: ರೋಗಗ್ರಸ್ತ, ನಿರಾಶ್ರಿತ ಹಾಗು ವಯಸ್ಸಾದ ಗೋವುಗಳ ಸೇವೆಯಲ್ಲಿ ತೊಡಗಿರುವ ಕಲಬುರಗಿಯ ಶ್ರೀ ಮಾಧವ ಗೋ ಶಾಲೆಗೆ ಪ್ರತಿಷ್ಠಿತ ಐಎಸ್‌ಒ ಪ್ರಮಾಣ ಪತ್ರ ದೊರಕಿದೆ. ಪ್ರತಿಷ್ಠಿತ ಸರ್ಟಿಫಿಕೇಟ್ ಪಡೆದ ರಾಜ್ಯದ 2ನೇ ಗೋಶಾಲೆ ಹೆಗ್ಗಳಿಕೆಗೆಪಾತ್ರವಾಗಿದೆ. ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಆರೈಕೆ, ಉಪಚಾರ, ದೇಸಿ ಗೋ ತಳಿಗಳ ಅಭಿವೃದ್ಧಿ ಮತ್ತು ಪಂಚಗವ್ಯ ಉತ್ಪನ್ನಗಳ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸಲು ಐ.ಎಸ್.ಓ. 9001-2015 ಪ್ರಮಾಣಪತ್ರನೀಡಲಾಗುತ್ತದೆ. ಕಲಬುರಗಿಯ ಶ್ರೀ ಮಾಧವ ಗೋಶಾಲೆಯು […]