ಕೃಷಿ ವಲಯದ ಅಭಿವೃದ್ಧಿಗೆ ಖಾಸಗಿ ವಲಯದ ಹೂಡಿಕೆ ಅಗತ್ಯ

ಭಾಗ-2

ಲೇಖಕರು:  ಕೇಶವ ಪ್ರಸಾದ್ ಬಿ., ಪತ್ರಕರ್ತರು

ಕೃಷಿ ಮಾರುಕಟ್ಟೆ ಸುಧಾರಣೆಯ ಚಿಂತಕ ಪ್ರೊ. ಅಶೋಕ್ ಗುಲಾಟಿ: ಅಶೋಕ್ ಗುಲಾಟಿ ದೇಶದ ಹೆಸರಾಂತ ಕೃಷಿ ಮಾರುಕಟ್ಟೆ ವಿಜ್ಞಾನಿ ಮಾತ್ರವಲ್ಲದೆ, ಕೃಷಿ ವೆಚ್ಚ ಮತ್ತು ದರ ಆಯೋಗದ (ಸಿಎಸಿಪಿ) ಮಾಜಿ ಅಧ್ಯಕ್ಷರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಟಿ ಭಾರತೀಯ ಕೃಷಿ ಕಾಯಿದೆಗಳ ಇತ್ತೀಚಿನ ಬದಲಾವಣೆಗಳ ಪ್ರಬಲ ಸಮರ್ಥಕರು. ಆಹಾರ ಪೂರೈಕೆ ಮತ್ತು ದರ ನೀತಿಗಳಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಸಲಹೆಗಾರರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಕೇಂದ್ರ ಸರಕಾರ ರೈತರಿಗೆ ಅನುಕೂಲವಾಗುವಂತೆ ೨೩ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ವಿಸ್ತರಿಸಲು ಸಲಹೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್ (ಐಸಿಆರ್‌ಐಇಆರ್) ಸಂಸ್ಥೆಯಲ್ಲಿಪ್ರೊಫೆಸರ್. ನೀತಿ ಆಯೋಗದಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆ ಕುರಿತ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದವರು ಇವರೇ. ಭಾರತೀಯ ಆಹಾರ ನಿಗಮದ (ಎಫ್‌ಸಿಎ) ದಕ್ಷತೆ ಹೆಚ್ಚಿಸುವ ಸುಧಾರಣೆಗೆ ಮತ್ತು ಪುನಾರಚನೆಗೆ ಎನ್‌ಡಿಎ ಸರಕಾರಕ್ಕೆ ಇವರೇ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಕೃಷಿ ವೆಚ್ಚ ಮತ್ತು ದರ ಆಯೋಗದ (ಸಿಎಸಿಪಿ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಶೋಕ್ ಗುಲಾಟಿ ಅವರು ಕೃಷಿ ಉತ್ಪನ್ನ ದರ ನೀತಿಗಳಿಗೆ ಸಂಬAಧಿಸಿ ೧೭ ವರದಿಗಳನ್ನು ಸಲ್ಲಿಸಿದ್ದರು. ಅಂತಾರಾಷ್ಟಿçÃಯ ಆಹಾರ ನೀತಿ ಸಂಶೋಧನಾಲಯದಲ್ಲಿ (ಐಎಫ್‌ಪಿಆರ್‌ಐ) ೧೦ ವರ್ಷಗಳಿಗೂ ಹೆಚ್ಚು ಕಾಲ ನಿರ್ದೇಶಕರಾಗಿದ್ದರು. ಏಷ್ಯಾ, ಆಫ್ರಿಕಾ , ಲ್ಯಾಟಿನ್ ಅಮೆರಿಕದ ೩೫ ರಾಷ್ಟçಗಳಿಗೆ ಭೇಟಿ ನೀಡಿ ಕೃಷಿ ವಲಯದ ಅಧ್ಯಯನ ನಡೆಸಿದ್ದಾರೆ. ನ್ಯಾಶನಲ್ ಕೌನ್ಸಿಲ್ ಆಫ್ ಅಪ್ಲೆöÊಡ್ ಎಕನಾಮಿಕ್ ರಿಸರ್ಚ್ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದರು. ೧೩ ಪುಸ್ತಕಗಳನ್ನು ಬರೆದಿದ್ದಾರೆ.

“ಕೃಷಿ ಕಾಯಿದೆಗಳ ವಿರುದ್ಧದ ಪ್ರತಿಭಟನೆ ದುರದೃಷ್ಟಕರ, ಸರಕಾರ ಮತ್ತು ರೈತರ ನಡುವೆ ಸಂಪರ್ಕ, ಸಂವಹನದ ಕೊರತೆಯಿಂದ ಹೀಗಾಗಿದೆ. ಆದರೆ ಪ್ರತಿಪಕ್ಷಗಳು ಮತ್ತು ಆಕ್ಟಿವಿಸ್ಟ್ಗಳ ಗುಂಪು ಇದೇ ಸಂದರ್ಭದ ದುರ್ಲಾಭ ಪಡೆಯಲು, ಕಾಯಿದೆಗೆ ಸಂಬAಧಿಸಿ ರೈತರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿವೆ. ಕಾರ್ಪೊರೇಟ್ ಕುಳಗಳು ರೈತರ ಜಮೀನುಗಳನ್ನು ಕಿತ್ತುಕೊಳ್ಳಲಿವೆ, ಎಂಎಸ್‌ಪಿ ರದ್ದಾಗಲಿದೆ ಎಂಬಿತ್ಯಾದಿಯಾಗಿ ರೈತರನ್ನು ಹೆದರಿಸುತ್ತಿವೆ.
ಲಾಕ್‌ಡೌನ್ ಸಂದರ್ಭ ಸರಕಾರ ತಾತ್ಕಾಲಿಕವಾಗಿ ಎಪಿಎಂಸಿ ಕಾಯಿದೆಯನ್ನು ಹಿಂತೆಗೆದುಕೊAಡು ಎಪಿಎಂಸಿ ಮಂಡಿಗಳಲ್ಲಿಯೇ ಕಡ್ಡಾಯವಾಗಿ ವ್ಯಾಪಾರ ನಡೆಸಬೇಕೆಂಬ ನೀತಿಯನ್ನು ತೆರವುಗೊಳಿಸಿತ್ತು. ಮಂಡಿಗಳಲ್ಲಿ ಕೃಷಿಕರು ಧಾವಿಸಿ ಜನ ದಟ್ಟಣೆ ತಪ್ಪಿಸಲು ಸರಕಾರ ಬಯಸಿತ್ತು. ಲಾಕ್ ಡೌನ್ ಅವಧಿಯಲ್ಲಿ ಕೃಷಿ ಉತ್ಪನ್ನಗಳ ನೇರ ಖರೀದಿಯಿಂದ ರೈತರಿಗೆ ಅನುಕೂಲವೂ ಆಗಿತ್ತು. ಕಠಿಣ ಲಾಕ್ ಡೌನ್ ಅವಧಿಯಲ್ಲೂ ಸರಕಾರ ಕೃಷಿ ಉತ್ಪನ್ನಗಳ ನೇರ ಖರೀದಿಗೆ ಅವಕಾಶ ಮಾಡಿದ್ದರಿಂದ ಕೃಷಿ ಕ್ಷೇತ್ರಕ್ಕೆ ಮಾತ್ರ ತೊಂದರೆ ಆಗಿರಲಿಲ್ಲ. ಇದನ್ನು ಮನವರಿಕೆ ಮಾಡಿಕೊಂಡ ಸರಕಾರ ಕೃಷಿ ಕಾಯಿದೆಯನ್ನು ಜಾರಿಗೊಳಿಸಿತು.

17 ವರ್ಷಗಳಿಂದ ಚರ್ಚೆ ನಡೆದಿದೆ!

ಈ ಕಾನೂನು ಮೂಲತಃ ಕೃಷಿ ಮಾರುಕಟ್ಟೆಗೆ ಸಂಬAಧಿಸಿವೆ. ವಾಜಪೇಯಿ ಸರಕಾರದ ಅವಧಿಯಲಿಯೇ ೨೦೦೩ರಲ್ಲಿ ಕೃಷಿ ಮಾರುಕಟ್ಟೆಯನ್ನು ಉದಾರೀಕರಣಗೊಳಿಸಲು ಕರಡು ನೀತಿಯನ್ನು ರಾಜ್ಯಗಳಿಗೆ ರವಾನಿಸಲಾಗಿತ್ತು. ಕಳೆದ ೧೭ ವರ್ಷಗಳಿಂದ ಇದರ ಬಗ್ಗೆ ಹಲವಾರು ಸುತ್ತಿನಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ವಾಸ್ತವವಾಗಿ ೧೯೯೧ರ ಐತಿಹಾಸಿಕ ಉದಾರೀಕರಣದ ಬಗ್ಗೆಯೂ ಸರಿಯಾದ ಚರ್ಚೆ ನಡೆದಿರಲಿಲ್ಲ. ನಿಮಗೆ ಬಾಂಬೆ ಕ್ಲಬ್ ಗೊತ್ತಿದೆಯೇ? ಇದಕ್ಕಾಗಿ ಮುಂಬಯಿ ಮೂಲದ ಉದ್ಯಮಿಗಳ ವಲಯ ದೀರ್ಘಕಾಲ ವಿರೋಧಿಸಿಯೂ ಇತ್ತು. ಕೃಷಿ ಕಾಯದೆ ಬಗ್ಗೆ ಚರ್ಚೆ ಸಾಕಷ್ಟು ನಡೆದಿಲ್ಲ ಎಂದಿರುತ್ತಿದ್ದರೆ ಪ್ರತಿಪಕ್ಷಗಳು ಪ್ರತಿಭಟಿಸಲು ಹಕ್ಕಿರುತ್ತಿತ್ತು. ಆದರೆ ಅವುಗಳು ರೈತರಲ್ಲಿ ಭೀತಿಯನ್ನು ಹುಟ್ಟಿಸಿವೆ. ಜಿಎಸ್‌ಟಿ ನಂತರ ಅತಿ ದೊಡ್ಡ ಸುಧಾರಣೆಯ ಕ್ರಮಗಳು ಕೃಷಿ ಕ್ಷೇತ್ರದಲ್ಲಿ ನಡೆಯಬೇಕಿದ್ದು, ಅದಕ್ಕೀಗ ಚಾಲನೆ ನೀಡಲಾಗಿದೆ.

ಗುಲಾಟಿಯವರು ಹೀಗೆ ವಿವರಿಸುತ್ತಾರೆ: ಭಾರತದ ಕೃಷಿ ವಲಯದ ಭವಿಷ್ಯದ ಅಭಿವೃದ್ಧಿಗೆ ಭಾರಿ ಪ್ರಮಾಣದ ಹೂಡಿಕೆಯ ಅಗತ್ಯವೂ ಇದೆ. ಹೆಚ್ಚುವರಿ ಕೃಷಿ ಉತ್ಪಾದನೆಯ ಮಾರುಕಟ್ಟೆ, ರಫ್ತು, ಗೋದಾಮು, ಸಾಗಣೆ, ಮೂಲ ಸೌಕರ್ಯ ಅಭಿವೃದ್ಧಿಗೆ ಖಾಸಗಿ ವಲಯದ ಹೂಡಿಕೆ ಅಗತ್ಯ. ಇದಕ್ಕಾಗಿ ನೀತಿ ಸುಧಾರಣೆ ಬೇಕಿತ್ತು.

ಪಂಜಾಬ್ ಮತ್ತು ಹರಿಯಾಣ ರೈತರು ಹೊರತುಪಡಿಸಿ, ಉಳಿದ ಭಾಗಗಳಲ್ಲಿ ರೈತರು ಎಪಿಎಂಸಿ ಮಂಡಿಗಳನ್ನು ಮಾತ್ರ ಅವಲಂಬಿಸಿಲ್ಲ. ಶೇ.೯೦ ರಷ್ಟು ಕೃಷಿ ಉತ್ಪನ್ನಗಳು ಎಪಿಎಂಸಿ ಹೊರತಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಇಂಥ ಸಂದರ್ಭದಲ್ಲಿ ಮಂಡಿ ವ್ಯವಸ್ಥೆಗೆ ಖಾಸಗಿ ವಲಯ ಬಂದರೆ ಉಭಯ ಬಣಗಳ ನಡುವೆ ಪೈಪೋಟಿ ಏರ್ಪಡಲಿದೆ. ಹಳೆ ಕಾಲದ ಇಂಡಿಯನ್ ಏರ್‌ಲೈನ್ಸ್ಗೆ ಖಾಸಗಿ ಏರ್‌ಲೈನ್ಸ್ ಸ್ಪರ್ಧೆ ನೀಡಿದಂತಾಗಲಿದೆ. ಇಂಡಿಯನ್ ಏರ್‌ಲೈನ್ಸ್ ನಿರ್ವಹಣೆಗೆ ಸರಕಾರಕ್ಕೆ ತಗಲುವ ವಚ್ಚ ಅಧಿಕ ಆದರೆ ಅದಕ್ಕೆ ಸದಾ ನಷ್ಟ ಯಾಕೆ? ಕಾರಣ ಅದರ ದಕ್ಷತೆಯ ಕೊರತೆ.

ಕ್ಷೀರೋದ್ಯಮದ ಮಾದರಿ: ಹಾಲಿನ ಉದಾಹರಣೆ ಗಮನಿಸಿ. ಅಕ್ಕಿ ಮತ್ತು ಗೋಧಿಗಿಂತಲೂ ಇದರ ದರ ಹೆಚ್ಚು. ೧-೨ ಹಸು ಇರುವವರೂ ಹಾಲು ಮಾರುತ್ತಾರೆ. ಖಾಸಗಿ ಕಂಪನಿಗಳು, ಸೊಸೈಟಿಗಳು ಖರೀದಿಸುತ್ತವೆ. ಸಣ್ಣ ರೈತರನ್ನು ಖಾಸಗಿ ಉದ್ದಿಮೆಗಳು ಕ್ಷೀರೋದ್ಯಮದಲ್ಲಿ ವಂಚಿಸಿವೆಯೇ? ಸಣ್ಣ ರೈತರು ವಾಸ್ತವವಾಗಿ ವೈವಿಧ್ಯಮಯ ಬೆಳೆ, ಕಸುಬುಗಳನ್ನು ಮಾಡುತ್ತಾರೆ. ಹಾಲಿನ ಸೊಸೈಟಿ, ಎಫ್‌ಪಿಒಗಳು ಅವರಿಗೆ ಮಾರುಕಟ್ಟೆ ಒದಗಿಸುತ್ತಿವೆ.

ಆಹಾರೋತ್ಪಾದನೆಯ ಸಮೃದ್ಧಿ: ಪಂಜಾಬ್, ಹರಿಯಾಣದ ರೈತರು ದೇಶದ ಆಹಾರ ಭದ್ರತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಅವರನ್ನು ಗೌರವಿಸಬೇಕು. ಅವರ ಕಳವಳಕ್ಕೆ ಸ್ಪಂದಿಸಬೇಕು. ಹಲವು ದಶಕಗಳ ಹಿಂದೆ ಹಿಂದೆ ೧೦ ಮಿಲಿಯನ್ ಟನ್ ಗೋಧಿ ಆಮದು ಮಾಡುತ್ತಿದ್ದೆವು.  ಆದರೆ ೯೭ ಮಿಲಿಯನ್ ಟನ್ ಗೋಧಿ ದಾಸ್ತಾನು ಇದೆ. ಇದನ್ನು ಏನು ಮಾಡುವುದು? ಅತಿಯಾದ ರಸಗೊಬ್ಬರ ಬಳಕೆಯಿಂದ ಪಂಜಾಬ್ ನೆಲದ ಫಲವತ್ತತೆ ನಶಿಸುತ್ತಿದೆ. ಅಂತರ್ಜಲ ಹಾನಿಯಾಗಿದೆ. ಆದ್ದರಿಂದ ಅವರಿಗೂ ಬೆಳೆಯ ವೈವಿಧ್ಯತೆ ಅಳವಡಿಸಿಕೊಳ್ಳಲು ನೆರವು ನೀಡಬೇಕು. ಇದಕ್ಕೆ ೫-೬ ವರ್ಷ ಬೇಕಾಗಬಹುದು. ಆದರೆ ಇದರಿಂದ ಸ್ವತಃ ಪಂಜಾಬಿನ ರೈತರಿಗೆ ಅನುಕೂಲವಾಗಲಿದೆ. ಅವರ ಆದಾಯ ಇಮ್ಮಡಿಯಾಗಲಿದೆ.

ಧಾನ್ಯ ವಿತರಣೆಯಲ್ಲಿ ದಕ್ಷತೆ:

ದೇಶದಲ್ಲಿ ೮೦ ಕೋಟಿ ಮಂದಿ ಅಕ್ಕಿ ಮತ್ತು ಗೋಧಿಗೆ ರಾಷ್ಟಿಯ ಆಹಾರ ಭದ್ರತೆ ಕಾಯಿದೆಯನ್ನು ಅವಲಂಬಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ೮ ಕೋಟಿ ವಲಸೆ ಕಾರ್ಮಿಕರು ಪಡಿತರ ಧಾನ್ಯವನ್ನು ಅವಲಂಬಿಸಿದ್ದರು, ಹೀಗಿರುವಾಗ ಪಂಜಾಬ್‌ನಲ್ಲಿ ಆಹಾರ ವೈವಿಧ್ಯತೆಗೆ ಉತ್ತೇಜನ ಸರಿಯೇ?

ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸರಕಾರ ಆಹಾರ ಧಾನ್ಯಗಳ ಸಂಪಾದನೆ, ಸಾಗಣೆ, ಆಡಳಿತ, ನಿರ್ವಹಣೆಗೆ ಮಾಡುವ ಒಟ್ಟು ವೆಚ್ಚದ ಮೇಲೆ ಹೆಚ್ಚುವರಿ ೪೦ ಪರ್ಸೆಂಟ್ ಹೆಚ್ಚುವರಿ ಖರ್ಚಾಗುತ್ತದೆ. ಆದರೆ ಖಾಸಗಿ ಮಾರುಕಟ್ಟೆ ಶೇ.೧೫ರಷ್ಟು ಹೆಚ್ಚುವರಿ ವೆಚ್ಚದಲ್ಲಿ ಅದನ್ನು ನಿರ್ವಹಿಸಬಲ್ಲುದು. ಪಡಿತರ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಸೋರಿಕೆಯೂ ಆಗುತ್ತದೆ. ಆದ್ದರಿಂದ ದಕ್ಷತೆ ಹೆಚ್ಚಿಸುವುದು ರೈತರಿಗೂ ದೇಶಕ್ಕೂ ಒಳ್ಳೆಯದು.

ಸಿವಿಲ್ ಕೋರ್ಟ್ಗೆ ಹೋಗಲೂ ಅವಕಾಶ:

ಸಿವಿಲ್ ಕೋರ್ಟ್ಗಳಲ್ಲಿ ನ್ಯಾಯದಾನ ವಿಳಂಬವಾಗುವ ಸಾಧ್ಯತೆಗಳಿರುತ್ತವೆ. ಆದರೆ ರೈತರು ಬಯಸುತ್ತಿದ್ದರೆ ಇದನ್ನು ತಿದ್ದುಪಡಿ ಮಾಡಲಾಗುವುದು ಎಂದು ಕೃಷಿ ಸಚಿವರು ಹೇಳಿದ್ದಾರೆ. ಹೀಗಾಗಿ ಅದೀಗ ಗಂಭೀರ ವಿಷಯವಲ್ಲ. ರೈತರಿಗೆ ಈಗಲೂ ಸಿವಿಲ್ ಕೋರ್ಟ್ಗಳ ಮೇಲೆ ನಂಬಿಕೆ ಇದ್ದರೆ ಸಂತಸದ ಸಂಗತಿಯೇ.

ನೆಸ್ಲೆ ಕಂಪನಿಯ ಉದಾಹರಣೆ: ನಾನು ನೆಸ್ಲೆ ಕಂಪನಿಯನ್ನು ಉದಹರಿಸುತ್ತೇನೆ. ಲಕ್ಷಾಂತರ ರೈತರು ಈ ಕಂಪನಿಯೊAದಿಗೆ ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದಾರೆ. ನೆಸ್ಲೆ ರೈತರ ಸಹಕಾರ ಇಲ್ಲದೆ ಮುಂದುವರಿಯದು, ರೈತರೂ ಪ್ರಯೋಜನ, ಮಾರುಕಟ್ಟೆ ಗಳಿಸಿದ್ದಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಿಂದ ನೆಸ್ಲೆ ರೈತರ ಜತೆ ವ್ಯಾವಹಾರಿಕ ನಂಟನ್ನು ಹೊಂದಿದೆ. ನಮ್ಮ ರೈತರು ಉತ್ಪಾದನೆಯಲ್ಲಿ ಕ್ರಿಯಾಶೀಲರು, ವೈವಿಧ್ಯತೆಯನ್ನೂ ಮಾಡಬಲ್ಲರು. ಆದರೆ ಅವರಿಗೆ ದಕ್ಷತೆಯ, ವೈವಿಧ್ಯಮಯ ಆಯ್ಕೆಯ ಮಾರುಕಟ್ಟೆ ಸುಧಾರಣೆ ಬೇಕು.
————
೨೦೨೦ರ ಕೃಷಿ ಕಾಯಿದೆ ಸುಧಾರಣೆಯ ಹೆಜ್ಜೆಗಳು: ಮಹತ್ವದ ಮೂರು ಕೃಷಿ ಕಾಯಿದೆ ವಿಧೇಯಕಗಳು 2020ರ ಸೆಪ್ಟೆಂಬರ್ 17ರಂದು ಲೋಕಸಭೆಯಲ್ಲಿ ಅಂಗೀಕಾರವಾಯಿತು. ರಾಜ್ಯಸಭೆಯಲ್ಲಿ ಸೆಪ್ಟೆಂಬರ್ 20ರಂದು ಅಂಗೀಕಾರವಾಯಿತು. ಮೂರೂ ಕೃಷಿ ವಿಧೇಯಕಗಳಿಗೆ ರಾಷ್ಟçಪತಿಯುವರು ಸೆ. 27ರಂದು ಅಂಕಿತ ಹಾಕಿದರು. ಇದರೊಂದಿಗೆ ವಿಧೇಯಕವು ಕಾಯಿದೆಯಾಗಿ ಜಾರಿಗೆ ಬಂದಿತು.

ಹಿನ್ನೆಲೆ:
ಕೇಂದ್ರ ಸರಕಾರವು 2017ರಲ್ಲಿ ಮಾದರಿ ಕೃಷಿ ಕರಡು ಕಾಯಿದೆಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಹಲವಾರು ರಾಜ್ಯಗಳು ಇದನ್ನು ಅನುಷ್ಠಾನಗೊಳಿಸಿರಲಿಲ್ಲ. ನಂತರ 7 ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಿ ಅನುಷ್ಠಾನಕ್ಕೆ ಪರಾಮರ್ಶೆ ಮಾಡಲಾಯಿತು. ಈ ಸಮಿತಿ ಇನ್ನೂ ತನ್ನ ವರದಿ ಸಲ್ಲಿಸಿಲ್ಲ. ೨೦೨೦ರ ಜೂನ್ ಮೊದಲ ವಾರದಲ್ಲಿ ಸರಕಾರ ಸುಗ್ರೀವಾಜ್ಞೆ ಮೂಲಕ ಕಾಯಿದೆಯನ್ನು ಜಾರಿಗೊಳಿಸಿತು. ನಂತರ ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕರಿಸಲಾಯಿತು.

ಮೂರು ಕಾಯಿದೆಗಳು ಇಂತಿವೆ:

1. ಕೃಷಿಕರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ( ಉತ್ಪಾದನೆ ಮತ್ತು ಸೌಲಭ್ಯ) ಕಾಯಿದೆ ೨೦೨೦

  • ಈ ಕಾಯಿದೆಯು  ರೈತರ ಕೃಷಿ ಉತ್ಪನ್ನಗಳ ಮಾರಾಟ ಪ್ರದೇಶವನ್ನು ವಿಸ್ತರಿಸುತ್ತದೆ. ಎಪಿಎಂಸಿ ಹೊರತಾಗಿಯೂ ಎಲ್ಲಿ ಬೇಕಾದರೂ ಕೊಡು-ಕೊಳ್ಳುವಿಕೆಗೆ ಅವಕಾಶ ಕಲ್ಪಿಸುತ್ತದೆ.
  • ರೈತರು ಇ-ಕಾಮರ್ಸ್ ಮೂಲಕ ಕೂಡ ವ್ಯಾಪಾರ ಮಾಡಬಹುದು.
  • ಎಪಿಎಂಸಿಗಳ ಹೊರತಾದ ಪ್ರದೇಶಗಳಲ್ಲಿ ವ್ಯಾಪಾರಕ್ಕೆ ಸರಕಾರಗಳು ಮಂಡಿ ಶುಲ್ಕ ವಿದಿಸುವಂತಿಲ್ಲ.

2. ಕೃಷಿಕರ ಉತ್ಪನ್ನಗಳ ದರ ಖಾತರಿ ಮತ್ತು ಕೃಷಿ ಸೇವೆ ಕಾಯಿದೆ ೨೦೨೦

ಇದು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬAಧಿಸಿ ರೈತರು ಮ್ತು ವ್ಯಾಪಾರಿಗಳ ಅಥವಾ ಖರೀದಿದಾರರ ನಡುವಣ ಒಪ್ಪಂದಕ್ಕೆ ಸಂಬAಧಿಸಿದ್ದು. ಕೃಷಿ ವ್ಯಾಪಾರದ ಗುತ್ತಿಗೆ ಒಪ್ಪಂದಕ್ಕೆ ಕಾನೂನು ಚೌಕಟ್ಟು ನೀಡುತ್ತದೆ. ಉತ್ಪನ್ನದ ದರ, ಯಾವಾಗ ಪಾತಿಸಬೇಕು, ಪಾವತಿಸದಿದ್ದರೆ ಉದ್ಯಮಿಗಳಿಗೆ ದಂಡ ಇತ್ಯಾದಿ ರೈತಸ್ನೇಹಿ ನೀತಿಯನ್ನು ಇದು ಒಳಗೊಂಡಿದೆ.

3. ಅಗತ್ಯ ವಸ್ತುಗಳ ತಿದ್ದುಪಡಿ ಕಾಯಿದೆ ೨೦೨೦

ಇದು ದವಸ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ತೈಲಬೀಜ ಮುಂತಾದವುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ರದ್ದುಪಡಿಸಿದೆ. ಅಂದರೆ ಇವುಗಳ ದಾಸ್ತಾನಿಗೆ ಹೇರಳ ಅವಕಾಶ ಕಲ್ಪಿಸಿದೆ. ದರಗಳನ್ನು ಆಧರಿಸಿ ಮತ್ತೆ ಮಿತಿ ಹೇರಲು ಅವಕಾಶವೂ ಇದೆ. ಆದರೆ ಹಳೆಯ ಕಾಯಿದೆಯಷ್ಟು ಅಪ್ರಸ್ತುತವಾಗಿಲ್ಲ. ಇಒದರ ಪರಿಣಾಮ ಖಾಸಗಿ ವಲಯವು ಕೃಷಿ ಮಾರುಕಟ್ಟೆ, ಶೀತಲೀಕರಣ, ಪೂರೈಕೆಯ ಸರಣಿ ವ್ಯವಸ್ಥೆಗೆ ಹೂಡಿಕೆ ಮಾಡಲು ಮುಂದಾಗಲಿದೆ. ಕೃಷಿ ಉತ್ಪನ್ನ ಹಾಳಾಗುವುದು ತಪ್ಪಲಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪಾದರಾಯನಪುರದ ರಸ್ತೆಗಳ ಮರುನಾಮಕರಣಕ್ಕೆ ಸಾರ್ವಜನಿಕರ ಆಕ್ಷೇಪ

Wed Dec 30 , 2020
ಬೆಂಗಳೂರು: ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ನಡೆದ ಧ್ವಂಸ, ಡಿಜೆಹಳ್ಳಿ – ಕೆಜಿಹಳ್ಳಿ ಗಲಭೆ, ಕೊರೋನಾ ತಪಾಸಣೆಗೆ ಬಂದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ, ಕೊರೋನಾ ನಿಯಮ ಉಲ್ಲಂಘಿಸಿ ಕಾಂಗ್ರೇಸ್ ಕಾರ್ಪೋರೇಟರ್ ನಡೆಸಿದ ರೋಡ್ ಷೋ – ಹೀಗೆ ಕಿಡಿಗೇಡಿತನಕ್ಕೆ,  ಕಾನೂನು ವಿರೋಧಿ ಚಟುವಟಿಕೆಗೆ ಪಾದರಾಯನಪುರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ ಪಾದರಾಯನಪುರ ಇನ್ನೊಂದು ಘಟನೆಗೆ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯು […]