ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ

ಯುವ ಚಿಂತಕರಿಗೆ ಒಂದು ಸುವರ್ಣ ಅವಕಾಶ. ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಹೆಸರಿನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಧರ್ಮ, ಅರ್ಥಶಾಸ್ತ್ರ, ಶಿಕ್ಷಣ, ಕುಟುಂಬ ಮತ್ತು ಜೀವನ ಶೈಲಿ ವಿಷಯವಾಗಿ ಪ್ರಬಂಧವನ್ನು ಪ್ರಕಟಿಸಬಹುದಾಗಿದೆ. ವಿಷಯಗಳು ಹಾಗು ಉಪ ವಿಷಯಗಳ ಕುರಿತಾಗಿ ಕೆಳಗಿನ ಕೋಷ್ಟಕವನ್ನು ಗಮನಿಸಬಹುದು . ಪದವೀಧರ ಮತ್ತು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಬಂಧವನ್ನುಆಂಗ್ ಅಥವಾ ಕನ್ನಡ ಭಾಷೆಯಲ್ಲಿ(ನುಡಿ ತಂತ್ರಾಂಶ ಬಳಸಿ) ಬರೆಯಬಹುದು. ಪ್ರಬಂಧಗಳು 2000 ಪದಗಳನ್ನು ಮೀರಬಾರದು. ಪ್ರಬಂಧಗಳನ್ನು 1 ನೇ ಸೆಪ್ಟೆಂಬರ್ 2020 ರ ಒಳಗಾಗಿ Sailatam609@gmail.com ಮಿಂಚಂಚೆಗೆ ಸಲ್ಲಿಸಿಬೇಕು.

ಆಕರ್ಷಕ ಬಹುಮಾನ:

  • ಮೊದಲನೇ ಬಹುಮಾನ 10,000 ರೂ.
  • ದ್ವಿತೀಯ ಬಹುಮಾನ 5000 ರೂ.
  • ತೃತೀಯ ಬಹುಮಾನ 1000 ರೂ.
  • ಆಯ್ದ ಪ್ರಬಂಧಗಳನ್ನು ಪ್ರಕಟಿಸಲಾಗುವುದು ಮತ್ತು 2020ರ ಯುವ ಮಂಥನದಲ್ಲಿ ಪ್ರಬಂಧವನ್ನು ಮಂಡಿಸಲು ಅವಕಾಶ ಕಲ್ಪಿಸಲಾಗುವುದು.

ದೇಶಿ ಚಿಂತನೆ ಏಕೆ ?

ಕೋವಿಡ 19 ಸಾಂಕ್ರಾಮಿಕ, ವಿಶ್ವವು ಒಂದು ಹೊಸ ಜಗತ್ತಿನ ಬಗ್ಗೆ ಯೋಚಿಸುವಂತೆ ಮಾಡಿದೆ. ಲಾಕ್‍ಡೌನ್‍ನ ಭಯಾನಕ ಅವಧಿಯಲ್ಲಿ ಮನಃಶಾಂತಿ, ಸಮಾಧಾನ ಪಡೆಯಲು ಅಮೆರಿಕದ ಶ್ವೇತಭವನದಲ್ಲಿ ಯಜುರ್ವೇದದ ವೈದಿಕ ಪ್ರಾರ್ಥನೆ ‘ಶಾಂತಿಪಾಠʼದ ಜಪ, ಕೋವಿಡ್ ನಂತರದ ವಿಶ್ವವನ್ನು ಸೂಚಿಸುತ್ತದೆ. ಆರ್ಥಿಕ ಕುಸಿತ, ನಿರುದ್ಯೋಗ, ಬಡತನ ಮತ್ತು ಮಾನಸಿಕ ಒತ್ತಡ ದಂತಹ ಸವಾಲನ್ನು ಎದುರಿಸಲು ಆಂತರಿಕ ಶಕ್ತಿ ಮತ್ತು ಶಾಂತಿಯು ಅತ್ಯಂತ ಅವಶ್ಯಕ. ಯೋಗ, ಆಯುರ್ವೇದ, ಭಾರತೀಯ ಕುಟುಂಬ ವ್ಯವಸ್ಥೆ, ಭಾರತೀಯ ಚಿಂತನೆಗಳು ಮತ್ತು ಜೀವನ ಕ್ರಮವನ್ನು ಇಂದು ವಿಶ್ವ ಅನುಸರಿಸುವುದು ಅವಶ್ಯಕವಾಗಿದೆ. ಬೌದ್ಧಿಕ ಕ್ಷತ್ರಿಯರಾದ ನಮ್ಮ ಮೇಲೆ ಹೊಸ ಜಗತ್ತಿಗೆ ಹೊಸ ಚಿಂತನೆಗಳನ್ನು ಕೊಡುವ ಗುರುತರ ಜವಾಬ್ದಾರಿ ಇದೆ.

ಪ್ರಜ್ಞಾ ಪ್ರವಾಹ :

ಪ್ರಜ್ಞಾ ಪ್ರವಾಹ ಭಾರತೀಯ ಚಿಂತನೆಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಒಂದು ವೈಚಾರಿಕ ಆಂದೋಲನ. ವೈಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳನ್ನು, ವ್ಯಕ್ತಿಗಳನ್ನು ಸಂಯೋಜಿಸುವ ಕೆಲಸವನ್ನು ಪ್ರಜ್ಞಾಪ್ರವಾಹ ಮಾಡುತ್ತದೆ. ಸಂಶೋಧನೆ, ಪ್ರಬಂಧ, ಪುಸ್ತಕ ಪ್ರಕಟಣೆ, ಶೈಕ್ಷಣಿಕ ಗೋಷ್ಠಿ, ಸಾಂಸ್ಕøತಿಕ ಹಬ್ಬದ ಆಯೋಜನೆ, ಅಧ್ಯಯನ ಪೀಠ ನಡೆಸುವುದು, ಪ್ರಚಲಿತ ವಿಷಯಗಳ ಮೇಲೆ ಸಂವಾದ ನಡೆಸುವುದು ಇವು ಪ್ರಜ್ಞಾ ಪ್ರವಾಹದ ಕೆಲವು ಆಯಾಮಗಳು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :

ಚಂದ್ರಪ್ಪ ಬಾರಂಗಿ – 9008848676
ಸಾಯಿಲತಾ ಎಂ – 8867372609
Sailatam609@gmail.com

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Day7 : Western feminism in Bharat has damaged portrayal of women #MyBharat

Sat Aug 8 , 2020
Disha Bharat on the Day 7 of #MyBharat lecture series, aired the talk of Women’s role in Indian freedom struggle on their Facebook page. Dr. Arathi V B, Director of Vibhu Academy spoke on the occasion. Disha Bharat has organised a 15 day lecture series starting 1st Aug 2020 till […]