ರಾಷ್ಟ್ರೋತ್ಥಾನ ಪರಿಷತ್ತಿನ ‘ತಪಸ್’ ಯೋಜನೆಯ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಾವಕಾಶ

ರಾಷ್ಟ್ರೋತ್ಥಾನ ಪರಿಷತ್ತಿನ ‘ತಪಸ್’ ಯೋಜನೆಯ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಾವಕಾಶ ಪಡೆದಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ಸಂಚಾಲಿತ ತಪಸ್‍ನ 14 ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟಗೊಂಡ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಐಟಿಗೆ ಪ್ರವೇಶಾವಕಾಶ ಪಡೆದಿದ್ದಾರೆ.

Rashtrotthana Parishat


ಆರ್ಥಿಕವಾಗಿ ಅತಿ ಹಿಂದುಳಿದ ಪರಿವಾರಗಳಿಂದ, ಸೆಕ್ಯುರಿಟಿ, ಹೌಸ್ ಕೀಪಿಂಗ್, ಗಾರ್ಮೆಂಟ್ಸ್, ರೈತ ಕೂಲಿಕಾರರು, ಸಂಚಾರಿ ವ್ಯಾಪಾರಿಗಳು ಇಂತಹ ಕುಟುಂಬಗಳಿಂದ ಬಂದಂತಹ ಮಕ್ಕಳ ಸಾಧನೆ ಪ್ರೇರಣೆ ನೀಡುವಂತಹುದು. ಅವಕಾಶ ವಂಚಿತ ಇಂತಹ ಮಕ್ಕಳಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಸಂಸ್ಥೆಗಳು ಉಚಿತವಾಗಿ ಶಿಕ್ಷಣ, ವಸತಿ, ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿ, ಐಐಟಿ-ಎನ್‍ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಶ್ರಮಿಸುತ್ತಿದೆ.


ಈ ವರ್ಷ ಒಟ್ಟು 32 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಅಡ್ವಾನ್ಸ್ ಪರೀಕ್ಷೆ ಬರೆದ 32 ಮಕ್ಕಳಲ್ಲಿ 14 ಮಕ್ಕಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.


ಸೆಕ್ಯುರಿಟಿ ಗಾರ್ಡ್ ಅವರ ಮಗನಾದ ಪೃಥ್ವಿರಾಜ್ ಎಸ್‍ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 70ನೇ ರ್ಯಾಂಕ್ ಪಡೆದಿದ್ದಾರೆ. ತಂದೆಯನ್ನು ಕಳೆದುಕೊಂಡು, ತಾಯಿ ಮನೆಗೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದ ನವೀನ್ ಗೌಡ ಅವರು ಒಬಿಸಿ ವಿಭಾಗದಲ್ಲಿ 745 ರ್ಯಾಂಕ್, ತಪಟೂರಿನಲ್ಲಿ ಬಳೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದಿಂದ ಬಂದ ಸಾತ್ವಿಕ್ ಇಎಡಬ್ಲ್ಯುಎಸ್ ವಿಭಾಗದಲ್ಲಿ 875ನೇ ರ್ಯಾಂಕ್, ಬೆಳಗಾವಿಯ ರೈತ ಕುಟುಂಬದ ಸಂಗ್ರಾಮ್ ಸಿಂಗ್ ಪಾಟೀಲ್ 1015 ರ್ಯಾಂಕ್, ಬಸ್ ಕಂಡೆಕ್ಟರ್ ಮಗನಾದ ಭವನ್ 1502 ರ್ಯಾಂಕ್, ಕಾಯಿಮಂಡಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ರಾಹುಲ್ ಟಿ.ಜಿ 1842 ರ್ಯಾಂಕ್, ಎಸ್.ಸಿ. ವಿಭಾಗದಲ್ಲಿ ನೀಲಕಂಠ ಚವ್ಹಾಣ್ 1217ನೇ ರ್ಯಾಂಕ್ ಪಡೆದಿದ್ದಾರೆ.
ರಾಜ್ಯದ ಸಾಮಾಜಿಕವಾಗಿ ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಹಾಗೂ ಐಐಟಿ ಪ್ರವೇಶಕ್ಕೆ ಅಗತ್ಯ ತರಬೇತಿ ನೀಡುವ ಸಲುವಾಗಿ ರಾಷ್ಟ್ರೋತ್ಥಾನ ಪರಿಷತ್ ತಪಸ್ ಯೋಜನೆಯನ್ನು 2012ರಲ್ಲಿ ಆರಂಬಿಸಿತು. ಈವರೆಗೆ 7 ತಂಡಗಳ ವಿದ್ಯಾರ್ಥಿಗಳು ತಪಸ್ ನಿಂದ ಹೊರಬಂದಿದ್ದು 284 ಮಂದಿ ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.
ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 14 ವಿದ್ಯಾರ್ಥಿಗಳ ವಿವರ

1.ಪೃಥ್ವಿರಾಜ್
ಮೂಲತಃ ಚಿಕ್ಕಬಳ್ಳಾಪುರ, ತಂದೆ – ಸೆಕ್ಯುರಿಟಿ, ತಾಯಿ – ಗಾಮೆಂಟ್ಸ್ ಕೆಲಸ
PU – 93%, CET – 1075 Rank,
JEE Main – ST – 66; JEE Advance – ST – 70

2.ನವೀನ್‍ಗೌಡ
ಬೆಂಗಳೂರು, ತಂದೆ – ನಿಧನರಾಗಿದ್ದಾರೆ, ತಾಯಿ – ಹೌಸ್ ಕೀಪಿಂಗ್
PU – 96%,CET – 442
JEE Main – OBC – 4308 JEE Advance-OBC– 745

3.ಸಾತ್ವಿಕ್
ತಿಪಟೂರು – ತಂದೆ : ಬಳೆ ವ್ಯಾಪಾರಿ, ತಾಯಿ – ಗೃಹಿಣಿ
PU – 94 % CET – 613
JEE Main – EWS – 2587 JEE Advance-EWS – 875

4.ಭವನ್
ಮೂಲತಃ ಬಿಜಾಪುರ, ತಂದೆ: ಪ್ರೈವೇಟ್ ಬಸ್ ಕಂಡಕ್ಟರ್, ತಾಯಿ : ಟೈಲರ್
PU – 94% CET – 2793
JEE Main – EWS – 4768 JEE Advance-EWS – 1502

5.ಸಂಗ್ರಾಮ್ ಸಿಂಗ್ ಪಾಟೀಲ್
ಮೂಲತಃ ನಿಪ್ಪಾಣಿ ತಾ|| ಬೆಳಗಾವಿ, ತಂದೆ – ತಾಯಿ : ರೈತರು
PU – 95% CET – 675
JEE Main – EWS – 1840 JEE Advance-EWS– 1015

6.ರಾಹುಲ್ – ತಿಪಟೂರು, ತಂದೆ : ಕಾಯಿಮಂಡಿ ಉದ್ಯೋಗಿ – ತಾಯಿ – ಗೃಹಿಣಿ
PU – 95% CET – 1328
JEE Main – EWS – 6923 JEE Advance-EWS – 1842

7.ಆದಿತ್ಯ ರಾಮ ಹೆಗ್ಡೆ
ಮೂಲತಃ ಉತ್ತರ ಕನ್ನಡ – ಯಲ್ಲಾಪುರ, ತಂದೆ- ತಾಯಿ- ಕೃಷಿ
PU – 95% CET – 719
JEE Main – EWS – 1246 JEE Advance-EWS – 2375

8.ಉಲ್ಲಾಸ್
ಮೂಲತಃ ಅರಸೀಕೆರೆ ತಾ|| ಹಾಸನ, ತಂದೆ-ತಾಯಿ – ಕೃಷಿ
PU – 95% CET – 391
JEE Main – EWS – 918 JEE Advance-EWS – 2468

9.ಚೇತನ್‍ಕುಮಾರ್ ಕೆ
ಬೆಂಗಳೂರು, ತಂದೆ – ನಿರುದ್ಯೋಗಿ, ತಾಯಿ – ಗಾರ್ಮೆಂಟ್ಸ್
PU – 94% CET – 1696
JEE Main – EWS – 5306 JEE Advance-EWS – 2664

10.ಆಶಿಸ್ ಅರಕುಣಿ
ಬೈಲಹೊಂಗಲ ತಾ|| ಬೆಳಗಾವಿ, ತಂದೆ-ತಾಯಿ – ಕೃಷಿ
PU – 94% CET – 717
JEE Main – EWS – 2436 JEE Advance-EWS– 3649

11.ವಿವೇಕ್
ತುಮಕೂರು. ತಂದೆ : ಸೆಕ್ಯುರಿಟಿ, ತಾಯಿ – ಗಾರ್ಮೆಂಟ್ಸ್
PU – 95% CET – 1502
JEE Main – OBC – 4241 JEE Advance-OBC – 7586

12.ನೀಲಕಂಠ ಚವ್ಹಾಣ (SC)
ಬೀಳಗಿ ತಾ|| ಬಾಗಲಕೋಟೆ, ತಂದೆ – ತಾಯಿ : ಕೂಲಿ
PU – 82% CET – 20276
JEE Main – SC – 4996 JEE Advance-SC – 1217

13.ಶಶಾಂಕ್
ಬೆಂಗಳೂರು – ತಂದೆ : ಇಲ್ಲ, ತಾಯಿ : ಹೋಂಗಾರ್ಡ್
PU – 93% CET – 1004
JEE Main – OBC – 11572 JEE Advance-OBC – 9142

  1. ಬಾಳಪ್ಪ ಭಜಂತ್ರಿ (Sಅ) – ಬಾದಾಮಿ ತಾ|| ಬಾಗಲಕೋಟೆ, ತಂದೆ ; ತಾಯಿ – ಕೃಷಿ
    PU – 89% CET– 12913
    JEE Main – SC – 3655JEE Advance-SC – 2659

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಗಾಂಧೀಜಿ ಮತ್ತು ಗೋಮಾತೆ : ಮ ವೆಂಕಟರಾಮು ಲೇಖನ

Wed Oct 7 , 2020
ಗಾಂಧೀಜಿ ಮತ್ತು ಗೋಮಾತೆ ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಭಾರತದ ಮಾನಬಿಂದುಗಳಲ್ಲಿ ಗೋವೂ ಒಂದು. ಈ ಭೂಮಿಯಲ್ಲಿ ಗೋಸಂರಕ್ಷಣೆಗಾಗಿ ಜೀವವನ್ನೇ ತೆತ್ತ ಮಹಾತ್ಮರ ವಿವರ ಪುರಾಣ ಇತಿಹಾಸಗಳಲ್ಲೆಲ್ಲ ಬರುತ್ತದೆ. ಈ ಪ್ರಪಂಚದಲ್ಲಿ ಚರಾಚರಗಳಲ್ಲೆಲ್ಲ ದೇವರನ್ನು ಕಂಡ ಭೂಮಿ ಭಾರತ. ಗೋವಿನಲ್ಲಿ ಎಲ್ಲ ದೇವತೆಗಳೂ ವಾಸ ಮಾಡುತ್ತಾರೆ ಎನ್ನುವ ಶ್ರದ್ಧೆ ನಮ್ಮದು. ಗಾಂಧೀಜಿಯವರಲ್ಲಿಯೂ ಈ ಭಾವ ಈ ಶ್ರದ್ಧೆ ಉಚ್ಚಕೋಟಿಯದ್ದಾಗಿತ್ತು. ಗೋತಳಿಯ ಸಂರಕ್ಷಣೆ […]