ಒಬ್ಬ ಸ್ವಯಂಸೇವಕ ಇರುವ  ಮನೆ ಆತ ಇರುವ ಇಡೀ  ಬಡಾವಣೆಗೇ ರಕ್ಷಣೆ ನೀಡುತ್ತದೆ ಎಂದು ಧೃಡವಾಗಿ ಹೇಳಬಲ್ಲೆ: ಡಾ.ಸಲ್ಮಾ

ಶಿಕ್ಷಣ ತಜ್ಞೆ ಡಾ.ಸಲ್ಮಾ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಂಬಿ ಪಟ್ಟಣದ ಆರೆಸ್ಸೆಸ್ ವಿಜಯ ದಶಮಿ ಉತ್ಸವ -2018ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ್ದರು.

ಡಾ. ಸಲ್ಮಾ ಪಾಲಕ್ಕಾಡಿನ ಆರೆಸ್ಸೆಸ್ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಸಲ್ಮಾ ಭಾಷಣದ ಸಾರಾಂಶ ಇಲ್ಲಿದೆ: 

'ಸಂಘದ ಶಾಖೆಗಳ ಮೂಲಕ ಒಳ್ಳೆಯ ಸಂಸ್ಕಾರ ಸಿಗುತ್ತದೆ, ಆ ಸಂಸ್ಕಾರವು ಸಮಾಜದಲ್ಲಿ ಸ್ವಯಂಸೇವಕರ ನಡವಳಿಕೆಯಲ್ಲಿ ಪ್ರತಿಫಲಿಸುತ್ತದೆ. ಮಹಿಳೆಯರ ಕುರಿತು  ಸಂಘದ ಸ್ವಯಂ ಸೇವಕರಿಗೆ ಇರುವ ಸದ್ಭಾವನೆ ಇನ್ನಿತರ ಯಾವುದೇ ಸಂಘಟನೆಯಲ್ಲಿ ಕಾಣಸಿಗದು. ಇಂಥ ಸುಗುಣ, ಸಚ್ಛಕ್ತಿ ಯನ್ನು ಶಾಖೆಯ ಚಟುವಟಿಕೆಗಳ ಮೂಲಕ ಮೈಗೂಡಿಸಿಕೊಳ್ಳುತ್ತಾರೆಂದು ತಿಳಿದಾಗ ನನಗೆ ಸಂಘದ ಮೇಲಿನ ಅಭಿಮಾನ ದ್ವಿಗುಣವಾಯಿತು. ಒಬ್ಬ ಸ್ವಯಂಸೇವಕ ಇರುವ  ಮನೆ ಆತ ಇರುವ ಇಡೀ  ಬಡಾವಣೆಗೇ ರಕ್ಷಣೆ ನೀಡುತ್ತದೆ ಎಂದು ಧೃಡವಾಗಿ ಹೇಳಬಲ್ಲೆ. ನಾನು ಪಾಲಿಸುವ ಧರ್ಮ ಬೇರೆಯದಿರಬಹುದು ಆದರೆ ನನ್ನ ಮೂಲ ಈ ಮಣ್ಣಿನದೇ. ನಾನು ಭಾರತಮಾತೆಯ ಪುತ್ರಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಭಾರತ್ ಮಾತಾ ಕೀ ಜೈ'

ಮಾಹಿತಿ ಕೃಪೆ: ಶಿವಕೃಷ್ಣ ನಿಡುವಾಜೆ

ಪಟ್ಟಂಬಿ ಖಂಡ ಸಂಘಚಾಲಕ್ ಶ್ರೀ ವಿ ವಿ ರವೀಂದ್ರನ್, ಶಿಕ್ಷಣ ತಜ್ಞೆ ಡಾ. ಸಲ್ಮಾ, ಪಟ್ಟಂಬಿ ವಿಭಾಗ ಪ್ರಚಾರಕ್ ಆರ್ ಅನೀಶ್