ನಾಡಿನ ಹಿರಿಯ ಕವಿ ನಿಸ್ಸಾರ್ ಅಹಮದ್ ಅವರ ನಿಧನಕ್ಕೆ ಆರೆಸ್ಸೆಸ್ ಸಂತಾಪ.

ನಿಸ್ಸಾರ ಅಹಮದ್ ರ ನಿರ್ಗಮನವು ಕನ್ನಡದ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ : ವಿ ನಾಗರಾಜ್

ಕನ್ನಡ ಸಾಹಿತ್ಯ, ಕವಿತೆ, ಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಕವಿ ನಿಸ್ಸಾರ್ ಅಹಮದ್ ಅವರ ನಿಧನವು ಭರಿಸಲಾರದ ನಷ್ಟ. ನಿಸ್ಸಾರರ ನಿರ್ಗಮನವು ಕನ್ನಡದ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ. ಕುರಿಗಳು ಸಾರ್ ಕುರಿಗಳು, ಮತ್ತದೇ ಬೇಸರ‌ ಅದೆ ಸಂಜೆಯಂತಹ ಮಧುರ ಮತ್ತು ‌ಸಮೃದ್ಧ ಕವಿತೆಗಳ ರಚನರಕಾರರಾದ ನಿಸ್ಸಾರರು ಕನ್ನಡದ ಜನರ ಬಾಯಲ್ಲಿ ನಾಡಗೀತೆಯಂತೆ ರಾರಾಜಿಸುತ್ತಿರುವ ಜೋಗದ ಸಿರಿ ಬೆಳಕಿನಲ್ಲಿ ಕವಿತೆಯ ಮೂಲಕ ಅಮರರಾಗಿದ್ದಾರೆ.

ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ‌ಸಂಘವು ಪ್ರಾರ್ಥಿಸುತ್ತದೆ.

ವಿ. ನಾಗರಾಜ್
ಕ್ಷೇತ್ರೀಯ ಸಂಘಚಾಲಕ
ಆರೆಸ್ಸೆಸ್.

File photo of Sri V Nagaraj