ಪತ್ರಿಕಾ ಹೇಳಿಕೆ ಬಿಡುಗಡೆ.

Sri Prakash Raju at the press conference on Aug 10, 2020

ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪ್ರಾರಂಭವಾಗಿ 7ನೇ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ಏಳು ವರ್ಷಗಳಲ್ಲಿ, ಮಹಾನಗರದ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಗಳ ಮಧ್ಯೆ ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಇಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ಯಶಸ್ವಿಯಾಗಿ ಎಲ್ಲರ ಸಹಕಾರದಿಂದ ಬೆಳೆದು ನಿಂತಿದೆ. 2 ಸಾವಿರಕ್ಕೂ ಹೆಚ್ಚು ಸಮಿತಿಗಳ ಮಧ್ಯೆ ಇಂದು ಮಹಾನಗರ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ದೇಶಭಕ್ತಿ, ಧಾರ್ಮಿಕ ಜಾಗೃತಿ ಮತ್ತು ಸಂಸ್ಕೃತಿಯ ರಕ್ಷಣೆಯ ಗುರಿಯೊಂದಿಗೆ ಗಣೇಶೋತ್ಸವ ಆಚರಿಸುವ ವಾತಾವರಣ ಮೂಡಿಸಲು ಮಹಾನಗರ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ 21 ಸಾಮೂಹಿಕ ಮೆರವಣಿಗೆಗಳು ನಡೆದಿದ್ದು, ಸಾವಿರದ ಎಂಟುನೂರಕ್ಕೂ ಹೆಚ್ಚು ಸಮಿತಿಗಳು ಭಾಗವಹಿಸಿ, ಲಕ್ಷಾಂತರ ಗಣಪತಿಯ ಭಕ್ತರು ಏಕತೆಯ ಶಕ್ತಿಯನ್ನು ತೋರಿಸಿದ್ದಾರೆ.

ಈ ವರ್ಷ ಕೊವಿಡ್-19 ಕಾರಣದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು, ಮಹಾನಗರ ಸಮಿತಿ ಕಳೆದ ಮಾರ್ಚ ನಿಂದ ಆನೇಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು,ದಿನಸಿ ಪದಾರ್ಥಗಳು, ತರಕಾರಿ, ಹಾಲು, ಊಟದ ಪೊಟ್ಟಣದ ವಿತರಣೆ ,ರಕ್ತದಾನ, ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಮಿತಿಯು ಮಾಡುತ್ತ ಬಂದಿದೆ.

ಈ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಕರೋನ ಸೋಂಕು ಅಡ್ಡಿಯಾಗಿದ್ದು ಸರ್ಕಾರ ಸೂಚಿಸಿರುವ ಎಲ್ಲಾ ಆನ್ ಲಾಕ್ ನಿಯಮಗಳನ್ನು ಪಾಲಿಸಲು ಮಹಾನಗರ ಸಮಿತಿಯು ಎಲ್ಲಾ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಲ್ಲಿ ವಿನಂತಿಸಿದೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ವಚತೆ ಮತ್ತು ಹೆಚ್ಚು ಜನಸಂದಣಿ ಸೇರದಿರುವುದು ಒಳಗೊಂಡಂತೆ, ಈ ವರ್ಷ ಯಾವುದೇ ಸಾಮೂಹಿಕ ಮೆರವಣಿಗಳು ಮಾಡದಿರಲು ಮಹಾನಗರ ಸಮಿತಿ ನಿಶ್ಚಿಯಿಸಿದೆ.

ಬಿಬಿಎಂಪಿಗೆ ನಮ್ಮ ಸಂಪೂರ್ಣ ಬೆಂಬಲವಿದ್ದು. ಆದರೆ ಬಿಬಿಎಂಪಿಯ ಗಣೇಶೋತ್ಸವ ಆಚರಣೆಗೆ ಸಂಭಂದಿಸಿದಂತೆ ತೆಗೆದುಕೊಂಡಿರುವ ಕೆಲವು ನಿರ್ಣಯಗಳನ್ನು ಸಮಿತಿಯು ಆಕ್ಷೇಪಿಸುತ್ತದೆ. ಮೂರ್ತಿಯ ಎತ್ತರ, ಕೆರೆ/ಕಲ್ಯಾಣಿಗೆ ಮೂರ್ತಿ ಬಿಡಲು ನಿಷೇಧ, ಕೇಸ್ ಹಾಕುವ ಬೆದರಿಕೆ, ಯಾವುದೇ ವ್ಯವಸ್ಥೆ ಮಾಡದಿರುವ ನಿರ್ಣಯ, ಈ ಎಲ್ಲ ನಿರ್ಣಯಗಳನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸುತ್ತದೆ.
ಈ ವರ್ಷ ಪ್ರತಿ ಸಮಿತಿಯು ಹಬ್ಬವನ್ನು ಸಾಮಾಜಿಕ ಮತ್ತು ಸೇವಾ ಚಟುವಟಿಕೆಗಳನ್ನು ಮಾಡುವುದರ ಮುಖಾಂತರ ಅಚರಿಸಬೇಕೆಂದು ವಿನಂತಿಸಲಾಗಿದೆ. ಕೊವಿಡ್ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ನೆರವಾಗುವ ಸೇವಾ ಕಾರ್ಯಗಳು ಮತ್ತು ಪ್ರಕೃತಿ ರಕ್ಷಣೆಯ ಕಾರ್ಯಗಳನ್ನು ಮಾಡಲು ಪ್ರತಿ ಸಮಿತಿಯನ್ನು ಉತ್ತೇಜಿಸುವ ಕಾರ್ಯವನ್ನು ಮಾಡಲಾಗುತ್ತದೆ.

ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಿಂದ, ಭಾರತ ಸರ್ಕಾರದ ಅಯುಷ್ ಇಲಾಖೆ ಪ್ರಕಟಿಸಿರುವ ರೋಗ ನಿರೋಧಕ ಹೋಮಿಯೋಪತಿ ಅರ್ಸೆನಿಕ್ ಅಲ್ಬಂ 30 ಔಷಧವನ್ನು ಹಬ್ಬದ ದಿನದಂದು ಜನತೆಗೆ ಉಚಿತವಾಗಿ ಹಂಚಲು ಪ್ರಾರಂಭಿಸಲಾಗುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಔಷಧವನ್ನು ತಲುಪಿಸುವ ಯೋಜನೆಯನ್ನು ಸಮಿತಿ ರೂಪಿಸಿದ್ದು, 7 ಲಕ್ಷ ಜನರಿಗೆ ಔಷಧವನ್ನು ತಲುಪಿಸಲಾಗುತ್ತದೆ.

ನಮ್ಮ ಜೊತೆ ಕೈ ಜೊಡಿಸಿರುವ ಗಣೇಶೋತ್ಸವ ಸಮಿತಿಗಳು ಮತ್ತು ಆನೇಕ ಸಂಘ ಸಂಸ್ಥೆಗಳ ಸಹಕಾರದಿಂದ ಇದನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತದೆ. ಕರೋನವನ್ನು ಸಮರ್ಥವಾಗಿ ಎದುರಿಸಲು ಇದು ಉತ್ತಮವೆಂದು ಸಮಿತಿಯು ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಡಾ ಜಿವಿಸಿ ಹೋಮಿಯೋಪತಿ ಸೆಲ್ಪ್ ರಿಲಯನ್ಸ್ ಪೋರ್ಮ್ ನಮ್ಮ ಜೊತೆಗಿದ್ದು ಔಷದ ಬಗ್ಗೆ ಮಾರ್ಗದರ್ಶನವನ್ನು ಮಾಡಲಿದೆ.
ಶ್ರೀ ಗಣಪತಿಯ ಕೃಪೆಯಿಂದ ಸಮಸ್ತ ಜನರೂ ಕೊರೋನಾ ಆತಂಕದಿಂದ ಮುಕ್ತರಾಗಿ ಎಲ್ಲರಿಗೂ ಆರೋಗ್ಯಭಾಗ್ಯ ಸಿಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ.

ಪ್ರಕಾಶ್ ರಾಜು
ಪ್ರಧಾನ ಕಾರ್ಯದರ್ಶಿ
ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ