ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯ ಮೂಲದ ಮಣ್ಣಿನ ವಿಜ್ಞಾನಿ ಡಾ.ರತ್ತನ್‌ ಲಾಲ್

ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯ ಮೂಲದ ಮಣ್ಣಿನ ವಿಜ್ಞಾನಿ ಡಾ.ರತ್ತನ್‌ ಲಾಲ್

ಕೃಪೆ : news13.in

ನವದೆಹಲಿ: ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವಂತಹ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣು ಕೇಂದ್ರಿತ ವಿಧಾನವನ್ನು ಅಭಿವೃದ್ಧಿಪಡಿಸಿದ ಮತ್ತು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ  ಭಾರತೀಯ-ಅಮೆರಿಕದ ಮಣ್ಣಿನ ವಿಜ್ಞಾನಿ ಡಾ. ರತ್ತನ್ ಲಾಲ್ ಅವರು ಈ ವರ್ಷದ ವಿಶ್ವ ಆಹಾರ ಪ್ರಶಸ್ತಿಗೆ ಬಾಜನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.


ವಿಶ್ವ ಆಹಾರ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಸಮನಾಗಿ ಪರಿಗಣಿಸಲಾಗುತ್ತದೆ ಮತ್ತು ಆಹಾರದ ಗುಣಮಟ್ಟ ಮತ್ತು ಲಭ್ಯತೆಯನ್ನು ಸುಧಾರಿಸಲು ಪ್ರಶಸ್ತಿ ಸ್ವೀಕರಿಸುವವರಿಗೆ $250,000 ನೀಡಲಾಗುತ್ತದೆ.
ಮಣ್ಣಿನ ಸಂರಕ್ಷಣೆಗೆ ಡಾ. ರತ್ತನ್ ಲಾಲ್ ಅವರು ನೀಡಿರುವ ಕೊಡುಗೆ ಸಣ್ಣ ರೈತರಿಗೆ ತಮ್ಮ ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಜಾಗತಿಕ ಆಹಾರ ಪೂರೈಕೆಯನ್ನು ಹೆಚ್ಚಿಸಿದೆ.
ವಾಷಿಂಗ್ಟನ್ ಡಿಸಿಯಲ್ಲಿ ಗುರುವಾರ ನಡೆದ ಆನ್‌ಲೈನ್ ಸಮಾರಂಭದಲ್ಲಿ ವಿಶ್ವ ಆಹಾರ ಪ್ರಶಸ್ತಿ ಪ್ರತಿಷ್ಠಾನದ ಅಧ್ಯಕ್ಷ ಬಾರ್ಬರಾ ಸ್ಟಿನ್ಸನ್ ಅವರು ಲಾಲ್ ಅವರನ್ನು ವಿಜೇತರೆಂದು ಘೋಷಿಸಿದರು. ಸಮಾರಂಭವು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ಯುಎಸ್ ಕೃಷಿ ಕಾರ್ಯದರ್ಶಿ ಸೋನಿ ಪರ್ಡ್ಯೂ ಅವರ ರೆಕಾರ್ಡೆಡ್‌ ಭಾಷಣವನ್ನು ಒಳಗೊಂಡಿತ್ತು.
“ಮಣ್ಣಿನ ವಿಜ್ಞಾನದಲ್ಲಿ ಡಾ. ಲಾಲ್ ಅವರ ಸಂಶೋಧನೆಯು ಸಮಸ್ಯೆಗೆ ಪರಿಹಾರ ನಮ್ಮ ಕಾಲುಗಳ ಕೆಳಗೆ ಇದೆ ಎಂಬುದನ್ನು ತೋರಿಸುತ್ತದೆ. ಸುಧಾರಿತ ನಿರ್ವಹಣೆ,  ಮಣ್ಣಿನ ಕಡಿಮೆ ಸವೆತ ಮತ್ತು ಪೋಷಕಾಂಶಗಳ ಮರುಬಳಕೆ ಮೂಲಕ ಅವರು ಭೂಮಿಯ ಅಂದಾಜು 500 ಮಿಲಿಯನ್ ಸಣ್ಣ ರೈತರಿಗೆ ತಮ್ಮ ಭೂಮಿಯ ನಿಷ್ಠಾವಂತ ಮೇಲ್ವಿಚಾರಕರಾಗಲು ಸಹಾಯ ಮಾಡುತ್ತಿದ್ದಾರೆ. ಕೃಷಿಯನ್ನು ಅವಲಂಬಿಸಿರುವ ಶತಕೋಟಿ ಜನರು ಅವರ ಕೆಲಸದಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ” ಎಂದು ಕಾರ್ಯದರ್ಶಿ ಪೊಂಪಿಯೊ ಹೇಳಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Gobbling Gomala land by Christian Missionaries

Sat Jun 13 , 2020
Gobbling Gomala land by Christian Missionaries 13 June 2020, Bengaluru: The common lands are resources accessible to the whole community of a village with no exclusive property rights to any individuals. Gomala can be translated as village pastures for cattle, livestock to graze. At Arikere of Chikkaballapura district in Karnataka, […]