ಇಂದು ನಮ್ಮನ್ನಾಗಲಿದ ಹಿರಿಯ ಸಾಹಿತಿ ಡಾ. ಚಿದಾನಂದಮೂರ್ತಿ ಅವರನ್ನು ನೆನೆದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ     ಅವರು  ಶ್ರದ್ಧಾಂಜಲಿ  ಅರ್ಪಿಸಿದ್ದಾರೆ.

ಪ್ರಖರ ರಾಷ್ಟ್ರೀಯ ವಿಚಾರಧಾರೆಯ ಚಿಂತಕರು, ಹಿರಿಯ ಸಂಶೋಧಕರು, ಲೇಖಕರಾದ ಡಾ. ಚಿದಾನಂದ ಮೂರ್ತಿಯವರು ನಮ್ಮನ್ನು ಆಗಲಿರುವುದು ಬಹಳ ದುಃಖದ ಸಂಗತಿ. ನಾಡು, ನುಡಿ, ಭಾಷೆ, ಧರ್ಮ, ಸಂಸ್ಕೃತಿಗಳ ವಿಚಾರವಾಗಿ ಅಧಿಕೃತ ವಕ್ತಾರರಾಗಿ ಸಂಶೋಧನಾ ಬರಹಗಳನ್ನು ಬರೆದು ಸತ್ಯವನ್ನು ನಿರ್ಭಯವಾಗಿ ಬರೆದವರು ಇಂದು ನಮ್ಮೊಂದಿಗಿಲ್ಲ.

ತಿರುಪತಿಯಲ್ಲಿ ಮತಾಂತರ ವ್ಯಾಪಕವಾಗಿ ನಡೆಯುತ್ತಿದ್ದಾಗ ಅದರ ವಿರುದ್ಧ ದನಿಯೆತ್ತಿದವರಲ್ಲಿ ಚಿದಾನಂದಮೂರ್ತಿಗಳು ಒಬ್ಬರು. ಅಲ್ಲದೆ, ಹಿಂದೆ ಕರ್ನಾಟಕ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದಾಗ ಅದರ ವಿರುದ್ಧ ಮಾತನಾಡಿ ಟಿಪ್ಪು ಸುಲ್ತಾನನ ಪರ್ಷಿಯಾ ಭಾಷಾ ಪ್ರೇಮ ಹಾಗೂ ಕನ್ನಡ ಭಾಷೆಯ ವಿರುದ್ಧವಿದ್ದ ಆತನ ರೀತಿಗಳನ್ನು ಜನರ ಮುಂದಿಡುವಲ್ಲಿ ಚಿದಾನಂದಮೂ ರ್ತಿಗಳ ಪಾತ್ರ ಹಿರಿದಾದದ್ದು.

ಕೆಲ ವರ್ಷಗಳ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯುವ ಚರ್ಚೆಗಳು ನಡೆದಾಗ ಸಾಧಾರವಾಗಿ ವೀರಶೈವ ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದು ನಿರೂಪಿಸಿ ದನಿ ಎತ್ತಿದವರು ಅವರು.

ಅಗಲಿದ ಹಿರಿಯ ಚೇತನವನ್ನು ಸ್ಮರಿಸುತ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಹಾಗೂ ವಯಕ್ತಿಕವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ವಿ ನಾಗರಾಜ
ಕ್ಷೇತ್ರೀಯ ಸಂಘಚಾಲಕ
ದಕ್ಷಿಣ ಮಧ್ಯ ಕ್ಷೇತ್ರ, ಆರೆಸ್ಸೆಸ್.

File photo of Sri V Nagaraj