:: ಕೇರಳ ಕಮ್ಮ್ಯುನಿಸ್ಟ್  ಕುತಂತ್ರ ಕೃತ್ಯ ::

ಕೇರಳದಲ್ಲಿರುವ ತ್ರಾವೆಂಕೂರ್ ದೇವಸ್ವಮ್ ಬೋರ್ಡ್ ಸಂಪೂರ್ಣವಾಗಿ ಸರ್ಕಾರದ ಹಿಡಿತದಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆ. ಹಿಂದುಗಳು ಭಕ್ತಿಯಿಂದ ಅರ್ಪಿಸುತ್ತಿರುವ ಕಾಣಿಕೆಗಳಿಂದಲೇ ನಡೆಯುತ್ತಿರುವ ಈ ಸಂಸ್ಥೆ ಹಳೆಯ ತ್ರಾವೆಂಕೂರ್ ಸಂಸ್ಥಾನದ ಎಲ್ಲಾ ಹಿಂದೂ ದೇವಾಲಯಗಳ ಆಡಳಿತವನ್ನು ನಿಯಂತ್ರಿಸುವುದಲ್ಲದೆ ಸ್ವತಃ ಅನೇಕ ಶಾಲೆಗಳನ್ನೂ ನಡೆಸುತ್ತಿದೆ. ಹಿಂದೂ ಭಕ್ತರ ಕಾಣಿಕೆಯಿಂದಲೇ ನಡೆಯುತ್ತಿರುವ ಈ ಶಾಲೆಗಳಲ್ಲಿ ಅತ್ಯಾವಶ್ಯವಾಗಿ ಸಂಸ್ಕೃತವನ್ನು ಕಲಿಸಬೇಕು. ಅದಕ್ಕಾಗಿ ಸಂಸ್ಕೃತ ಪಂಡಿತರನ್ನು ನೇಮಿಸಿಕೊಳ್ಳಬೇಕು.

ಆದರೆ, ಇದರ ಬದಲು ಮತ್ತು ಇದಕ್ಕೆ ತದ್ವಿರುದ್ಧವಾಗಿ ತ್ರಾವೆಂಕೂರ್ ದೇವಸ್ವಮ್ ಬೋರ್ಡ್ ತಾನು ನಡೆಸುತ್ತಿರುವ ಶಾಲೆಗಳಲ್ಲಿ ಅರಾಬಿಕ್ ಪಂಡಿತರನ್ನು ನೇಮಿಸಿಕೊಳ್ಳಲು ನಿರ್ಧರಿಸಿರುವುದನ್ನು ವಿಶ್ವ ಹಿಂದೂ ಪರಿಷದ್ ಪ್ರಬಲವಾಗಿ ಖಂಡಿಸುತ್ತದೆ. ದೇವಸ್ವಮ್ ಬೋರ್ಡ್ ನ ಶಾಲೆಗಳಲ್ಲಿ ಅರಾಬಿಕ್ ಭಾಷೆಯನ್ನು ಕಲಿಸುವ ಯಾವುದೇ ಅಗತ್ಯವಿಲ್ಲ. ಈ ರೀತಿಯಾಗಿ ಹಿಂದೂ ಭಕ್ತರಿಂದ ಸಂಗ್ರಹವಾದ ಕಾಣಿಕೆ ಹಣವನ್ನು ದುರುಪಯೋಗ ಆಗುವುದನ್ನು ಕೂಡಲೇ ನಿಲ್ಲಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಆಗ್ರಹಿಸುತ್ತದೆ,

ಅಲೋಕ್ ಕುಮಾರ್,
ಅಖಿಲ ಭಾರತ ಕಾರ್ಯಾಧ್ಯಕ್ಷರು
ವಿಶ್ವ ಹಿಂದೂ ಪರಿಷದ್

press note from VHP

File photo of Sri Alok Kumar