ಶ್ರೀ ಎಂ ಪಿ ಕುಮಾರ್ ರಾಷ್ಟ್ರೋತ್ಥಾನ ಪರಿಷತ್ತಿನ ನೂತನ ಅಧ್ಯಕ್ಷರು, ಶ್ರೀ ದ್ವಾರಕಾನಾಥ್ ಉಪಾಧ್ಯಕ್ಷರು


ಸೆಪ್ಟೆಂಬರ್ 27, ಬೆಂಗಳೂರು : ಇಂದು ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿಯ ಸಭೆ ನಡೆಯಿತು. ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ್ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಇದೇ ವೇಳೆ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಎಸ್.ಆರ್. ರಾಮಸ್ವಾಮಿ ಅವರು ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ಇದೀಗ ವಿವಿಧ ಮುಖಗಳಲ್ಲಿ ಬೆಳೆಯುತ್ತಿದೆ. ಇದಕ್ಕೆ ವೃತ್ತಿಪರತೆಯ ಸ್ಪರ್ಶ ಸಿಗಬೇಕಾಗಿದೆ. ಹೀಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೋತ್ಥಾನ ಪರಿಷತ್‍ನಂತಹ ಸಾಮಾಜಿಕ ಸಂಘಟನೆಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಹಾಗೂ ಗ್ಲೋಬಲ್ ಎಡ್ಜ್‍ನಂತಹ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಕಟ್ಟಿಬೆಳೆಸಿರುವ ಅನುಭವವಿರುವ ಎಂ.ಪಿ. ಕುಮಾರ್ ಅವರನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಮುಂದಿನ ಅಧ್ಯಕ್ಷರಾಗಿ ಸೂಚಿಸುತ್ತಿದ್ದೇನೆ ಎಂದರು.


ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ್ ಅವರು ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್‍ನ ಮುಂದಿನ ದಿನಗಳಲ್ಲಿ ವಿಶೇಷ ಗಮನ ಹರಿಸಬೇಕಾದ ಸಂಗತಿಗಳ ಕುರಿತು ಮಾರ್ಗದರ್ಶನ ಮಾಡಿದರು. ಶಿಕ್ಷಣದಲ್ಲಿ ಭಾರತೀಯತೆಯನ್ನು ತರಲು ಒತ್ತು ನೀಡಬೇಕು. ಇಂದು ಭಾರತದಲ್ಲಿ ಭಾರತೀಯಚಿಂತನೆಯ ಇಂಗ್ಲಿಷ್ ಸಾಹಿತ್ಯಗಳ ಅಗತ್ಯವಿದೆ. ಈ ಕೊರತೆಯನ್ನು ತುಂಬುವ ಮಾತೃವಲ್ಲದೇ ಇಂಗ್ಲಿಷ್ ಸಾಹಿತ್ಯ ಪ್ರಕಾಶನದಲ್ಲಿ ನೇತೃತ್ವ ವಹಿಸುವಷ್ಟು ಉತ್ತಮ ಪ್ರಕಟಣೆಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯದಿಂದ ಹೊರಬರಬೇಕು. ಹಾಗೂ ಸಮಾಜದ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳಾದ ಶೈಕ್ಷಣ ಕ ಚಟುವಟಿಕೆಗಳು, ಯೋಗ ಮುಂತಾದವುಗಳು ಸಂಖ್ಯಾತ್ಮಕವಾಗಿ ಹೆಚ್ಚಾಗಬೇಕು ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ವಾರ್ಷಿಕ ಸಭೆ ನಡೆಯಿತು. ಸಭೆಯಲ್ಲಿ ಪರಿಷತ್‍ನ ವಿವಿಧ ಪ್ರಕಲ್ಪಗಳ ಪ್ರಮುಖರು ತಮ್ಮ ಚಟುವಟಿಕೆಗಳ ವರದಿ ನೀಡಿದರು.

ಶ್ರೀ ಎಂ ಪಿ ಕುಮಾರ್
ಶ್ರೀ ದ್ವಾರಕಾನಾಥ್

ರಾಷ್ಟ್ರೋತ್ಥಾನ ಪರಿಷತ್‍ನ ನೂತನ ಆಡಳಿತ ಮಂಡಳಿ
ಅಧ್ಯಕ್ಷರು : ಶ್ರೀ ಎಂ.ಪಿ. ಕುಮಾರ್, ಖ್ಯಾತ ಉದ್ಯಮಿಗಳು
ಉಪಾಧ್ಯಕ್ಷರು : ಶ್ರೀ ಎ.ಆರ್. ದ್ವಾರಕಾನಾಥ್, ವ್ಯವಸ್ಥಾಪಕರು (ನಿ) ಬಿಎಚ್‍ಇಎಲ್
ಪ್ರಧಾನ ಕಾರ್ಯದರ್ಶಿ : ಶ್ರೀ ನಾ. ದಿನೇಶ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತರು
ಖಜಾಂಚಿ : ಶ್ರೀ ಗಣಪತಿ ಹೆಗಡೆ, ಸಾಮಾಜಿಕ ಕಾರ್ಯಕರ್ತರು


ಸದಸ್ಯರು :
ಶ್ರೀ ಅಶೋಕ್ ಸೋನಕರ್, ಸಿನಿಯರ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್ (ನಿ)
ಶ್ರೀ ಕೆ.ಎಸ್. ನಾರಾಯಣ, ಸಾಮಾಜಿಕ ಕಾರ್ಯಕರ್ತರು
ಶ್ರೀ ಬಿ.ಎಸ್. ರವಿಕುಮಾರ್, ಸಾಮಾಜಿಕ ಕಾರ್ಯಕರ್ತರು
ಶ್ರೀಮತಿ ಮಾಲಿನಿ ಭಾಸ್ಕರ್, ಸಾಮಾಜಿಕ ಕಾರ್ಯಕರ್ತರು
ಶ್ರೀ ಗಜಾನನ ಲೋಂಢೆ, ನಿವೃತ್ತ ಅಧಿಕಾರಿಗಳು, ನೋಕಿಯಾ ಟೆಕ್ನಾಲಜಿ

ವಿಶೇಷ ಅಹ್ವಾನಿತರು :
ಶ್ರೀ ಎಸ್.ಆರ್. ರಾಮಸ್ವಾಮಿ, ಸಾಹಿತಿಗಳು
ಶ್ರೀ ಎ. ಗೋಪಾಲಕೃಷ್ಣ ನಾಯಕ್, ನಿವೃತ್ತ ಅಧಿಕಾರಿಗಳು, ಐಟಿಐ
ಶ್ರೀ ರಾಜಾರಾಮ್, ಸಾಮಾಜಿಕ ಕಾರ್ಯಕರ್ತರು
ಶ್ರೀ ಬಸವನಗೌಡ, ಸಾಮಾಜಿಕ ಕಾರ್ಯಕರ್ತರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತೀಯರ ಆತ್ಮಶಕ್ತಿಯನ್ನೇ ಬಡಿದೆಬ್ಬಿಸಿದ ಮಹಾನ್ ನೇತಾರ

Fri Oct 2 , 2020
ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತೀಯರ ಆತ್ಮಶಕ್ತಿಯನ್ನೇ ಬಡಿದೆಬ್ಬಿಸಿದ ಮಹಾನ್ ನೇತಾರಲೇಖಕರು: ಎಸ್.ಉಮೇಶ್, ಮೈಸೂರು 9742281766 ಅಕ್ಟೋಬರ್ 2, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಅಷ್ಟೇ ಅಲ್ಲ ಅದು ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನವೂ ಹೌದು. ಶಾಸ್ತ್ರೀಜಿ ಈ ದೇಶ ಕಂಡ ಮಹಾನ್ ನಾಯಕ. ಪ್ರಾಮಾಣಿಕತೆ, ಸರಳತೆ ಮತ್ತು ಸಜ್ಜನಿಕೆಯ ಪ್ರತೀಕ. ಅಂತಹ ಮೇರು ವ್ಯಕ್ತಿತ್ವದ ಶಾಸ್ತ್ರೀಜಿಯವರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾರ್ಥಕ ಬದುಕು, ಮಹೋನ್ನತ ಆದರ್ಶ […]