ಪಾಕ್ ನಲ್ಲಿ ಭಷ್ಟಾಚಾರ: ಸಿಪಿಇಸಿಯಿಂದ ಚೀನಾ ಹಿಂದಡಿ

ಚೀನಾದ ಮಹತ್ವಾಕಾಂಕ್ಷೆ ಹಾಗೂ ಭಾರತವನ್ನು ವ್ಯೂಹಾತ್ಮಕವಾಗಿ ಕಟ್ಟಿ ಹಾಕಲು ಉದ್ದೇಶದಿಂದ ಚಾಲನೆಗೊಂಡ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ನಿಂದ ಚೀನಾ ಹಿಂದೆ ಸರಿಯುತ್ತಿದೆ ಎನ್ನಲಾಗಿದೆ.

ಇದಕ್ಕೆ ಮುಖ್ಯ ಕಾರಣ ಸಿಪಿಇಸಿ ಯೋಜನೆಯಲ್ಲಿ ಪಾಕಿಸ್ತಾನ ಭಾರೀ ಭ್ರಷ್ಟಾಚಾರ ನಡೆಸುತ್ತಿದೆ. ಚೀನಾ ಹಣವು ಕಾಮಗಾರಿ ಪೂರ್ಣಗೊಳಿಸಲು ವ್ಯಯಿಸದೇ ಪಾಕ್ ಸೇನೆಯ ಜೇಬು ಸೇರುತ್ತಿದೆ ಎಂಬುದು ಚೀನಾದ ಆರೋಪ. ಮಾತ್ರವಲ್ಲದೇ ಚೀನಿ ಕಾರ್ಮಿಕರಿಗೆ ಭದ್ರತೆ ಒದಗಿಸಲು ಪಾಕಿಸ್ತಾನ ವಿಫಲವಾಗಿದೆ ಎನ್ನಲಾಗುತ್ತಿದೆ. ಯೋಜನೆಯ ಮೇಲೆ ನಿರಂತರ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು, ಹಲವು ಚೀನಿ ಎಂಜಿನಿಯರ್‌ಗಳು ಅಸುನೀಗಿದ್ದಾರೆ.

ಈ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಭಾರತ ಯೋಜನೆಯ ಕುರಿತು ಅನುಮಾನ-ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಈ ಸಿಪಿಇಸಿ ಯೋಜನೆಗೆ ಆರಂಭಿಕ ಹಂತದಲ್ಲಿ ಒಟ್ಟು 60 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಸಹಾಯ ಒದಗಿಸುವುದಾಗಿ ಚೀನಾ ವಾಗ್ದಾನ ಮಾಡಿತ್ತು. ಅದರ ಭಾಗವಾಗಿ ಚೀನಾ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಚೀನಾದ ರಫ್ತು-ಆಮದು ಬ್ಯಾಂಕ್ ಪಾಕಿಸ್ತಾನಕ್ಕೆ 2016 ರಲ್ಲಿ 75 ಬಿಲಿಯನ್ ಅಮೆರಿಕನ್ ಡಾಲರ್‌ ಸಾಲ ನೀಡಿತ್ತು. ಆದರೆ ಕಳೆದ ವರ್ಷ ಈ ಸಾಲದ ಮೊತ್ತವನ್ನು4 ಬಿಲಿಯನ್ ಡಾಲರ್‌ಗೆ ಇಳಿಸಿದೆ.

ಈ ಅಂಕಿ ಅಂಶಗಳಿಂದಾಗಿ ಪಾಕ್ ನಲ್ಲಿ ಸಿಪಿಇಸಿ ನಿರ್ಮಿಸಲು ಉತ್ಸುಕವಾಗಿಲ್ಲ ಎನ್ನುವುದು ಸ್ಷಷ್ಟವಾಗುತ್ತಿದೆ. ಪಾಕ್ ಗೆ ಹೊರತಾದ ಬೇರೆ ದೇಶಗಳಲ್ಲಿ ಈ ಯೋಜನೆಗೆ ವೇಗ ನೀಡಲು ಚೀನಾ ನಿರ್ಧರಿಸಿದೆ ಎನ್ನಲಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ

Fri Dec 25 , 2020
ಪುಸ್ತಕ ಪರಿಚಯ: ವಾದಿರಾಜ್, ಸಾಮಾಜಿಕ ಕಾರ್ಯಕರ್ತ ಮೂಲ ತೆಲಗು ಭಾಷಿಗ ದಲಿತ ಹೆಣ್ಣುಮಗಳು, ತಮಿಳುನಾಡಿನ ಶಿವಗಂಗೆ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಹೋರಾಟ, ಪ್ರಾಣಾರ್ಪಣೆಯ ಕಥನ ಇದೀಗ ಮೊದಲಬಾರಿಗೆ ಕನ್ನಡದಲ್ಲಿ ಪುಸ್ತಕವಾಗಿ ಹೊರಬರುತ್ತಿದೆ. ತಮಿಳುನಾಡಿನ ಕುಂಡಚವಾಡಿಯಲ್ಲಿ ಅರುಂಧತಿಯಾರ್ ಸಮಾಜದ ಪೆರಿಯಮುತ್ತನ್ – ರಾಕು ದಂಪತಿಗಳ ಮಗಳು ಕುಯಿಲಿ. ತಾಯಿ ರಾಕುವಿನದು ಕೊಬ್ಬಿದ ಗೂಳಿಗಳನ್ನು ಪಳಗಿಸುವ ಕಾಯಕ. ತಂದೆ ಪೆರಿಯಮುತ್ತನ್ ಕುದುರೆ ಲಾಯದಲ್ಲಿ ದುಡಿಯುವವನು . ಮಗಳು ಕುಯಿಲಿಗೆ ಸಾಹಸ ಪ್ರವೃತ್ತಿ ರಕ್ತದಲ್ಲೇ […]