ಜಮ್ಮು-ಕಾಶ್ಮೀರ ಡಿಡಿಸಿಯ ನಾಲ್ವರು ಸದಸ್ಯರಿಂದ ಸಂಸ್ಕೃತದಲ್ಲಿ ಪ್ರಮಾಣವಚನ

ಶ್ರೀನಗರ: ಜಮ್ಮುಕಾಶ್ಮೀರ ಜಿಲ್ಲಾ ಅಭಿವೃದ್ದಿ ಮಂಡಳಿಯ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಾಲ್ವರು ಸದಸ್ಯರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಅಪರೂಪದ ಘಟನೆಗೆ ಸಾಕ್ಷಿಯಾಯಿತು.

ಜೊತೆಗೆ ಇದೇ ಮೊದಲ ಬಾರಿಗೆ ಚುನಾಯಿತ ಪ್ರತಿನಿಧಿಗಳು ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆಯಾ ಜಿಲ್ಲೆಗಳಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಜಮ್ಮುವಿನ 140 ಹಾಗೂ ಕಾಶ್ಮೀರದ 137 ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 277 ಮಂದಿ ಪ್ರಮಾಣವಚನ ಸ್ವೀಕರಿಸಿದರು. ಯಾವುದೇ ಪ್ರತಿನಿಧಿ ಜಮ್ಮುಕಾಶ್ಮೀರ ಸಂವಿಧಾನವನ್ನು ಉಲ್ಲೇಖಿಸಲಿಲ್ಲ. ಕೇವಲ ಭಾರತದ ಸಂವಿಧಾನವನ್ನು ಉಲ್ಲೇಖಿಸಿ ಪ್ರಮಾಣವಚನ ಸ್ವೀಕರಿಸಿರುವುದು ಜಮ್ಮು-ಕಾಶ್ಮೀರದ ಇತಿಹಾಸದಲ್ಲಿಯೇ ಅಪೂರ್ವ ಸಂಗತಿಯಾಗಿದೆ.

ಇತ್ತೀಚೆಗೆ ನಡೆದ ಜಮ್ಮುಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಬಿಜೆಪಿ 75 ಸ್ಥಾನಗಳನ್ನು ಹಾಗೂ 4.87ಲಕ್ಷ ಮತಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 7 ಪಕ್ಷಗಳ ಗುಪ್ಕರ್ ಮೈತ್ರಿಕೂಟ 110 ಸ್ಥಾನಗಳನ್ನು ಗಳಿಸಿದರೂ 3.37 ಲಕ್ಷ ಮತಗಳನ್ನು ಮಾತ್ರ ಪಡೆದಿತ್ತು.280 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 51.5% ಮತದಾನವಾಗಿತ್ತು. ಜಮ್ಮುಕಾಶ್ಮೀರದ ಜನತೆ ಭಾರತದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪಾದರಾಯನಪುರದ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳ ನಾಮಕರಣವನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತರ ಶಿಪಾರಸು.

Thu Dec 31 , 2020
ಬೆಂಗಳೂರು: ಪಾದರಾಯನಪುರದ 11 ಅಡ್ಡರಸ್ತೆ-ಮುಖ್ಯರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಮರುನಾಮಕರಣವನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಶಿಫಾರಸ್ಸು ಮಾಡಿದೆ. ಪಾದರಾಯನಪುರದ 11 ಅಡ್ಡರಸ್ತೆ-ಮುಖ್ಯರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಮರುನಾಮಕರಣ ಮಾಡುತ್ತಿರುವ ಸುದ್ದಿಯನ್ನು ಮೊದಲಬಾರಿಗೆ samvada.org  ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿದ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ನೇತಾರರು ಮರುನಾಮಕರಣವನ್ನು ರದ್ದುಗೊಳಿಸುವಂತೆ ಬಿಬಿಎಂಪಿಯನ್ನು ಆಗ್ರಹಿಸಿದರು. ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಬಿಬಿಎಂಪಿ ಮರುನಾಮಕರಣವನ್ನು ಏಕಪಕ್ಷೀಯವಾಗಿ ಕೈಗೊಳ್ಳಲಾಗಿದ್ದು, ಇದನ್ನು ರದ್ದುಪಡಿಸುವಂತೆ ರಾಜ್ಯ ನಗರಾಭಿವೃದ್ದಿ ಇಲಾಖೆಯನ್ನು ಕೋರಿದೆ. […]