ಆರ್ಟಿಕಲ್ 370 ರದ್ದತಿಗೆ ವರ್ಷ: ಆತ್ಮನಿರ್ಭರ ಭಾರತದೆಡೆಗೆ ಜಮ್ಮು ಮತ್ತು ಕಾಶ್ಮೀರ

ವರದಿ: ಡಾ. ಶ್ರೀಧರ ಪಿ. ಡಿ, ಬೆಂಗಳೂರು.

9 ಆಗಸ್ಟ್  2020, ಬೆಂಗಳೂರು:  ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸೆಂಟರ್‌ ಕರ್ನಾಟಕ ಚಾಪ್ಟರ್‌, ಗ್ಲೋಬಲ್‌ ಕಾಶ್ಮೀರಿ ಪಂಡಿತ್ ಅಸೋಸಿಯೇಷನ್ ದಯಾಸ್‌ಪುರ, ಜಮ್ಮ ಕಾಶ್ಮೀರ ನೌ ಹೆಸರಿನ ಯುಟ್ಯೂಬ್ ಮತ್ತು ಫೇಸ್ಬುಕ್‌ ಗ್ರೂಪ್‌ಗಳ ಸಂಯುಕ್ತ ಆಶ್ರಯದಲ್ಲಿ ಇಂದು 11 ಗಂಟೆಗೆ, ಕಾರ್ಯಕ್ರಮ ಆಯೋಜಿಸಲಾಗಿತ್ತು. ಪತ್ರಕರ್ತರಾದ ಶ್ರೀ ಸಿದ್ಧಾರ್ಥ ಜರಬಿ, ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮಾಜಿ ಎಮ್ ಎಲ್ ಸಿ ಶ್ರೀ ಸುರೀಂದರ್‌ ಅಂಬರ್ದಾರ್, ಬಿಜೆಪಿಯ ಶ್ರೀ ಶೇಕ್ ಖಾಲಿದ್‌ ಜಹಂಗೀರ್ ಗೋಷ್ಠಿಯಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಮೊದಲು ಆರ್ಥಿಕ ಕ್ಷೇತ್ರದಲ್ಲಿ ಪರಿಣಿತ ಪತ್ರಕರ್ತರಾದ ಶ್ರೀ ಸಿದ್ಧಾರ್ಥ ಜರಬಿರವರು ಜಮ್ಮು ಕಾಶ್ಮೀರದ ಕುರಿತು ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದರು.

ಆರ್ಟಿಕಲ್ 370ನ್ನು ತೆಗೆದು ಒಂದು ವರ್ಷದ ನಂತರವೂ ಪ್ರಗತಿ ಏಕೆ ಕಾಣುತ್ತಿಲ್ಲ, ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಲು ಪ್ರಾರಂಭಿಸಬಹುದು. ಇದಕ್ಕೆ ಮೂಲ ಕಾರಣ ಇಲ್ಲಿರುವ ಲಂಚಗುಳಿತನ, ಇಲ್ಲಿ ಓದಿದ ಒಬ್ಬೊಬ್ಬ ವಿದ್ಯಾರ್ಥಿಯೂ ಕೂಡ ತನ್ನ ಅಂಕಪಟ್ಟಿ ಪಡೆದುಕೊಳ್ಳಲು ಹಣ ಕೊಡಬೇಕಾಗಿತ್ತು. ಜಮ್ಮು ಕಾಶ್ಮೀರದ ಶೇಕಡ 99 ಜನರಿಗೆ ದೆಹೆಲಿಯಿಂದ ಬರುವ ಯಾವ ಹಣವೂ ತಲುಪುತ್ತಿರಲಿಲ್ಲ. ರಾಜಕೀಯ ವಂಶಪರಂಪರೆಯ ನೇತೃತ್ವ ಹೊಂದಿದ ಜನರು ನಾನಾ ಪ್ರಕಾರದ ವಂಚನೆಗಳನ್ನು ಮಾಡಿ ಎಲ್ಲ ಕ್ಷೇತ್ರಗಳಲ್ಲಿ ಹಗಲು ದರೋಡೆ ಮಾಡುತ್ತಿದ್ದರು. ಜಮ್ಮು-ಕಾಶ್ಮೀರದ ಬ್ಯಾಂಕು “ಫ್ರಾಡ್ ಬ್ಯಾಂಕ್” ಎಂದು ಹೆಸರು ಪಡೆದಿತ್ತು. ಬ್ಯಾಂಕು ಮತ್ತು ಅಧಿಕಾರಿಗಳು ರಾಜಕೀಯ ನೇತಾರರ ಕೈಗೊಂಬೆಯಾಗಿ ಸರ್ಕಾರದ ಹಣವನ್ನು ರಾಜಕಾರಣಿಗಳ ಮನೆಗಳಿಗೆ ಹರಿಸುತ್ತಿದ್ದರು. ಹುರಿಯತ್ ಲೀಡರ್‌ಗಳಿಂದ ಹಿಡಿದು ಎಲ್ಲಾ ರಾಜಕೀಯ ನಾಯಕರ ಶ್ರೀನಗರದ ಬಂಗಲೆಗಳು ಮತ್ತು ಅವುಗಳ ಪಕ್ಕದಲ್ಲೇ ಇರುವ ಸಾಮಾನ್ಯ ಜನರ ಮನೆಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಶ್ರೀನಗರದ ಸರ್ಕಾರಿ ವಾಹನಗಳಿಗೆ ಪ್ರತಿದಿನ 500 ಲೀಟರ್‌ ಡೀಸಲ್‌ ಹಾಕಿಸುತ್ತಿದ್ದರು. 10 ಲೀಟರ್‌ ವಾಹನ ಓಡಿಸಿ 490 ಲೀಟರಿನ ಹಣವನ್ನು ಲೂಟಿ ಮಾಡಲು ಸರ್ಕಾರದ ಅಧಿಕಾರಿಗಳು ಯೋಜನೆಗಳನ್ನು ರೂಪಿಸುತ್ತಿದ್ದರು. ಆದರೆ 370 ನ್ನು ತೆಗೆದ ನಂತರ ಬಹುಪಾಲು ಹಣ ದೋಚುವುದು ನಿಂತುಹೋಗಿದೆ. ಅವರ ಅಂಗಡಿಗಲು ಬಂದಾಗಿವೆ. ಆದರೂ ಲಂಚಗುಳಿತನ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಕೇಂದ್ರ ಸರ್ಕಾರ ಇದರ ಕಡೆಗೆ ಶ್ರೀಘ್ರವಾಗಿ ಗಮನ ಹರಿಸಬೇಕಿದೆ ಎಂದು ಹೇಳಿದರು.

Siddharth Zarabi

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮಾಜಿ ಎಮ್ ಎಲ್ ಸಿ ಶ್ರೀ ಸುರೀಂದರ್‌ ಅಂಬರ್ದಾರ್ ಅವರು ಮಾತನಾಡುತ್ತ, ಒಳ್ಳೆಯ ಉದ್ದೇಶಗಳನ್ನು ಇರಿಸಿಕೊಂಡು, ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಿದ್ದಾಗಿತ್ತು. ಆದರೆ, ಒಪ್ಪಂದದ ಸಮಯದಲ್ಲಿ ಕೊಟ್ಟ ಮಾತುಗಳಂತೆ ಯಾವ ನಾಯಕರೂ ವರ್ತಿಸಲೇ ಇಲ್ಲ ಎಂದು ನುಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ, ಸ್ವಾರ್ಥ ಚಿಂತನೆಗಳನ್ನೊಳಗೊಂಡ ಮಿಸ್ ಗರ್ವನಮೆಂಟ್‌ ಕಾಶ್ಮೀರಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿತು. ಮನಸ್ಸಿನಲ್ಲಿ ದ್ವಿ ರಾಷ್ಟ್ರ ಸಿದ್ಧಾಂತ ಇಟ್ಟುಕೊಂಡು ಶೇಕ್ ಅಬ್ದುಲ್ಲಾ ಮತ್ತು ನೆಹರು ಇಬ್ಬರೂ ಜನರಿಗೆ ಸುಳ್ಳು ಹೇಳಿದರು, ಭಾರತದಲ್ಲಿ ಅನೇಕ ಜಾತಿಗಳಿದ್ದರೂ, ಕೂಡಿ ಬಾಳುವ ವಿಶೇಷತೆಯನ್ನು ಮೈಗೂಡಿಸಿಕೊಂಡು ರಾಷ್ಟ್ರವಾಗಿ ಮುನ್ನೆಡೆಯುವತ್ತ ಸಾಗಿತ್ತು. ಆದರೆ ಕಾಶ್ಮೀರ ಸ್ವಾರ್ಥ ರಾಜಕಾರಣಿಗಳ ಕೈಯಲ್ಲಿ ಮುಸ್ಲಿಂ ಮತಾಂಧತೆಯ ಕೂಪವಾಗುತ್ತ, ವಹಾಬಿ ನಂಬಿಕೆಗಳನ್ನು ಜನರಲ್ಲಿ ತುಂಬುತ್ತ ತನ್ನ ಅವನತಿಯಡೆಗೆ ಸಾಗತೊಡಗಿತು. ಸಂಘದ ಕಾರ್ಯಕರ್ತರಾದ ಶ್ಯಾಮಾಪ್ರಸಾದ್‌ ಮುಖರ್ಜಿ ಅವರ ಬಲಿದಾನ ಮತ್ತು ಇಂದಿನ ಶ್ರೀಯುತ ಮೋದಿ ಹಾಗೂ ಅಮಿತ್‌ ಶಾ ಅವರ ಬಿಜೆಪಿ ಸರ್ಕಾರದ ನಿರ್ಣಯಗಳಿಂದ ಬದಲಾವಣೆಯೆಡೆಗೆ ಕಾಶ್ಮೀರ ತನ್ನನ್ನು ಹೊಂದಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ನಾವು ಅಬ್ದುಲ್ಲಾ, ಮುಫ್ತಿಗಳ ದುರಾಡಳಿತ ಅನೈತಿಕತೆಗಳಿಂದ ಕಾಶ್ಮೀರವನ್ನು ಕಾಪಾಡಬೇಕಿದೆ. ಜಮ್ಮು-ಕಾಶ್ಮೀರದ ಲಕ್ಷಾಂತರ ಎಕರೆ ಸರ್ಕಾರಿ ಜಮೀನುಗಳನ್ನು ತಮ್ಮ ಮತ್ತು ತಮ್ಮವರ ಹೆಸರಿನಲ್ಲಿ ಅತಿಕ್ರಮಿಸಿಕೊಂಡಿದ್ದಾರೆ. ದಾಲ್‌ ಲೇಕ್‌ ಸೇರಿದಂತೆ ಅನೇಕ ನೀರಿನ ಮೂಲಗಳಿರುವ ಜಮೀನುಗಳನ್ನು ರಾಜಕೀಯ ವ್ಯಕ್ತಿಗಳು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ಸಾಮಾನ್ಯ ಕಾಶ್ಮೀರ ಯುವಕರ ಕೈಗಳಿಗೆ ಕಲ್ಲುಗಳನ್ನು ಕೊಟ್ಟ ರಾಜಕಾರಣಿಗಳು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ನೆಲೆಮಾಡಿದ್ದಾರೆ. ವಹಾಬಿ ಸಂಸ್ಕೃತಿಯನ್ನು ಪ್ರಚಾರ ಮಾಡಿ ಕಾಶ್ಮೀರಿ ಪಂಡಿತರ ನರಸಂಹಾರ ಮಾಡಿ, ಬ್ರಷ್ಟಾಚಾರ, ಲಂಚಗುಳಿತನ, ಹವಾಲಾ ಹಣ, ಉಗ್ರವಾದಕ್ಕೆ ನೆರವು ನೀಡಿ, ಪಾಕಿಸ್ತಾನದ ಪರ ಧೋರಣೆ ತೋರುತ್ತ, ಸರ್ಕಾರದ ಹಣ ಜಮೀನುಗಳನ್ನು ಅತಿಕ್ರಮಿಸಿಕೊಳ್ಳುವುದು. ಡ್ರಗ್ಸ್ ಮಾಫಿಯಾ ಮತ್ತು ಇತರೆ ದಂಧೆಗಳಲ್ಲಿ ತೊಡಗಿರುವುದು ಇವರ ಪ್ರಗತಿಪರ ಯೋಚನೆಗಳಾಗಿದ್ದವು. ಅವರೆಲ್ಲರ ಅನೈತಿಕ ಹಣವನ್ನು ವಾಪಸ್ ಪಡೆದುಕೊಂಡು ಜಮ್ಮು-ಕಾಶ್ಮೀರದ ಸಾಮಾನ್ಯ ಅಭಿವೃದ್ಧಿ ಕಡೆಗೆ ನಾವು ಗಮನ ಹರಿಸಬೇಕಿದೆ. ಪಂಚಾಯತ್ ರಾಜ್ ಪರಿಕಲ್ಪನೆಯಂತೆ ನಾವು ಕಾಶ್ಮೀರವನ್ನು ಅಭಿವೃದ್ಧಿ ಮಾಡುವುದು ಇಂದಿನ ಅನಿವಾರ್ಯತೆ. ಇದುವರೆಗೆ ಸರ್ಕಾರದ ಹಣವೆಲ್ಲ ಲೂಟಿಯಾಗಿ, ಮನೋವೈಜ್ಞಾನಿಕವಾಗಿ ಮೂಢರಾಗಿ ಕಲ್ಲು ತೂರುತ್ತಿದ್ದ ಕಾಶ್ಮೀರಿಗಳನ್ನು ಸರಿದಾರಿಗೆ ತರಲು ಆತ್ಮ ನಿರ್ಭರ ಭಾರತ ಸಹಾಯಕವಾಗುತ್ತದೆ. ಇಂದು ಹೊಸ ಜಮ್ಮು-ಕಾಶ್ಮೀರದ ನಿರ್ಮಾಣ ಮಾಡಬೇಕಾಗಿದೆ ಎಲ್ಲರೂ ಸೇರಿ ಜಮ್ಮು-ಕಾಶ್ಮೀರವನ್ನು ನಿರ್ಮಿಸಬೇಕಾಗಿದೆ ಎಂದು ಶ್ರೀ ಸಿದ್ಧಾರ್ಥ ಜರಬಿ ಅವರು ಹೇಳಿದರು.

Surinder Ambardar,Ex- MLC

ಫಾರುಕ್‌ ಅಬ್ದುಲ್ಲಾ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶ್ರೀ ಶೇಕ್ ಖಾಲಿದ್‌ ಜಹಂಗೀರ್ ರವರು ಮಾತನಾಡುತ್ತ ಸಾಮಾನ್ಯರ ಮನಸ್ಸಿನಲ್ಲಿ ರಾಜಕಾರಣಿಗಳು ಜಮ್ಮು-ಕಾಶ್ಮೀರ ಪ್ರಗತಿಯಡೆಗೆ ನೆಡೆಯುತ್ತಿತ್ತು, 370ರ ವಿಧಿಯನ್ನು ತೆರವು ಮಾಡಿದ್ದರಿಂದ ಎಲ್ಲವೂ ನಾಶವಾಗಿ ಹೋಯಿತು ಎಂಬ ಅಭಿಪ್ರಾಯಗಳನ್ನು ಮೂಡಿಸಲು ಪ್ರಯತ್ನಸುತ್ತಿದ್ದಾರೆ. 1947 ರಿಂದ ಕೇವಲ 4 ಪರ್ಸಂಟ್‌ ಓಟು ಪಡೆದು ಲೂಟಿ ಮಾಡಿದ ಅನೇಕ ರಾಜಕೀಯ ಪಕ್ಷಗಳು ಇಂದಿಗೂ ತಮ್ಮ ಅಸಹಾಯಕ ಗೋಳನ್ನು ತೋಡಿಕೊಳ್ಳುತ್ತಿವೆ. ಬೇರೆ ರಾಜ್ಯದ ರಾಜಕಾರಣಿಗಳು ತಮ್ಮ ರಾಜ್ಯದ ಏಳಿಗೆಗೆ ಕೆಲಸ ಮಾಡಿದರೆ ಇವರೆಲ್ಲರೂ ತಮ್ಮ ಮಕ್ಕಳ ಏಳಿಗೆಗೆ ಕೆಲಸ ಮಾಡಿ ಸಾಮಾನ್ಯ ಕಾಶ್ಮೀರಿಯರಿಗೆ ಯಾವುದೇ ನೌಕರಿ ಉದ್ಯೋಗಗಳನ್ನು ನೀಡದೇ ಹಣ ಜಮೀನುಗಳನ್ನು ಅತಿಕ್ರಮಿಸಿಕೊಂಡು ರಾಜ್ಯವನ್ನು ದುರಾಡಳಿತಕ್ಕೆ ತಳ್ಳಿದರು. ಸಮಗ್ರ ಭಾರತದ ಕಲ್ಪನೆಯನ್ನು ಹೊಂದಿದ ಎಲ್ಲರನ್ನೂ ಹತ್ತಿಕ್ಕುವ ಪ್ರಯತ್ನ ಮಾಡುತ್ತ, ಕಾಶ್ಮೀರಿಗಳಿಗೆ 370 ಬಿಟ್ಟು ಬೇರೇನನ್ನೂ ಯೋಚನೆ ಮಾಡಲು ಅವಕಾಶ ಕೊಡದಂತೆ ಎಲ್ಲರನ್ನು ಅಂಧಕಾರದಲ್ಲಿ ಇಟ್ಟರು. ಕೊರೋನಾ ರೋಗ ಮತ್ತು ಇತರೆ ಕಾರಣಗಳಿಂದ ಕಾಶ್ಮೀರದ ಪ್ರಗತಿಗೆ ಸ್ವಲ್ಪ ಅಡಚಣೆ ಮತ್ತು ತೊಂದರೆಯಾಗುತ್ತಿದೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಗತಿಪರ ಯೋಜನೆಗಳ ಬಗ್ಗೆ ವಿಚಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.

 

ಕಾಶ್ಮೀರದಲ್ಲಿ ಹೊಸ ಯುವ ನಾಯಕರನ್ನು ಸೃಷ್ಟಿಸಿ ಕಾಶ್ಮೀರದ ಪ್ರಗತಿಗೆ ಹೋರಾಡಬೇಕಾಗಿದೆ. ಕಾಶ್ಮೀರದ ದೇವಸ್ಥಾನಗಳಲ್ಲಿ ಗಂಟೆಗಳ ನಿನಾದ, ಮಸೀದಿಗಳಲ್ಲಿ ನಮಾಜು ಹಾಗೂ ಕಾಶ್ಮೀರದಲ್ಲಿ ಪ್ರವಾಸಿಗರ ಕಲರವ ಮತ್ತೆ ಕೇಳಿಬರಬೇಕಿದೆ. ನಮ್ಮ ದೃಷ್ಟಿಯಲ್ಲಿ ಆತ್ಮ ನಿರ್ಭರ ಭಾರತವೆಂದರೆ ಕಾಶ್ಮೀರಿ ಪಂಡಿತರ ಪುನರ್‌ ವಸತಿಯಾಗಬೇಕು. ಕಾಶ್ಮೀರದಲ್ಲಿ ಎಲ್ಲರೂ ಸಹಬಾಳ್ವೆಯಿಂದ ನೆಲಸಬೇಕು. ಗಡಿಯಾಚೆಯಿಂದ ಬರುವ ಉಗ್ರರ ಉಪಟಳ ಸಂಪೂರ್ಣವಾಗಿ ನಿಲ್ಲಬೇಕು. ದೆಹೆಲಿಯಲ್ಲಿ ಜೈ ಹಿಂದ್‌ ಎಂದು ಕೂಗಿ, ಕಾಶ್ಮೀರದಲ್ಲಿ ಆಜಾದ್ ಕಾಶ್ಮೀರ ಎಂದು ಕೂಗುವುದು ನಿಲ್ಲಬೇಕು. ಕಾಶ್ಮೀರದ ಬಗ್ಗೆ ಭಾರತದ ಅಭಿಪ್ರಾಯವನ್ನು ವಿಶ್ವಮಟ್ಟದಲ್ಲಿ ರೂಪಿಸಬೇಕು. ಸಿಎಎ ಮತ್ತು ಎನ್ಆರ್‌ಸಿ ಯೋಜನೆಗಳ ಕುರಿತು ಅಪಪ್ರಚಾರಗಳನ್ನು ನಿಲ್ಲಿಸಬೇಕು ಎಂದು ತಮ್ಮ ಭಾಷಣದಲ್ಲಿ ಶ್ರೀ ಶೇಕ್ ಖಾಲಿದ್‌ ಜಹಂಗೀರ್ ಮಂಡಿಸಿದರು.

 

Sheik Khalid Jehangir

ಕಾಶ್ಮೀರಿ ಪಂಡಿತರ ಪುನರ್ವಸತಿ, ಜಮ್ಮು-ಕಾಶ್ಮೀರದಲ್ಲಿ ಇರುವ ರೋಹಿಂಗ್ಯಾ ಮುಸ್ಲಿಮರು ಗಡಿಪಾರಿನ ಕುರಿತು ಭಾರತ ಸರ್ಕಾರ ಚಿಂತಿಸಬೇಕಿದೆ. ರೋಹಿಂಗ್ಯಾ ಅತಿಕ್ರಮಣ ಸೇರಿದಂತೆ, ಷರೀಯತ್‌, ವಹಾಬಿ ಸಂಸ್ಕೃತಿಯ ಪ್ರಚಾರಗಳು ಯೋಜನಾಬದ್ಧ ದುರಾಲೋಚನೆಗಳಾಗಿವೆ. ಇಂತಹ ದೇಶ ವಿರೋಧಿ ಚಟುವಟಿಕೆಗಳ ಕಡೆಗೆ ಕೇಂದ್ರ ಸರ್ಕಾರ ಗಮನಹರಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಮ್ಮು-ಕಾಶ್ಮೀರದ ಗೃಹ ಕೈಗಾರಿಕೆಗಳ ಅಭಿವೃದ್ಧಿ ಮಾಡಿ ದೊಡ್ಡ ದೊಡ್ಡ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಿ ಜಮ್ಮು ಮತ್ತು ಕಾಶ್ಮೀರದ ಯುವ ಜನತೆಗೆ ಸಕಲ ಅಭಿವೃದ್ಧಿ ಚಟುವಟಿಕೆಗಳಲ್ಲಿ ತರಬೇತಿಯನ್ನು ಕೊಡಬೇಕಾಗಿದೆ. ಸಂಪೂರ್ಣ ಭಾರತಕ್ಕೆ ಅನ್ವಯಿಸುವ ನಿಯಮಗಳೆ ಇಂದು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದರಿಂದ ಭಾರತದ ಎಲ್ಲಾ ಭಾಗದ ಜನರು ಕಾಶ್ಮೀರದ ಕುರಿತು ಯೋಚಿಸಬೇಕಿದೆ. ಕಾಶ್ಮೀರದಿಂದ ಹೊರಗಡೆ ಹೋದ ಎಲ್ಲರನ್ನು ಮತ್ತೆ ಒಗ್ಗೂಡಿಸಬೇಕಿದೆ ಎಂದು ತಿಳಿಸಿದರು.
ಅಂತಿಮವಾಗಿ ಕಾರ್ಯಕ್ರಮದ ನಿರ್ವಹಣೆ ಮಾಡಿದ ಆರ್‌ ಹೊಳ್ಳ ಅವರು ಪ್ರಶ್ನೋತ್ತರ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.