ಮಾ.ಗೋ. ವೈದ್ಯ ಆರೆಸ್ಸೆಸ್ಸ್ ನ encyclopedia : ಮೋಹನ್ ಭಾಗವತ್

ಮಾ. ಗೋ. ವೈದ್ಯ ಅವರು ಸಂಘದ ವಿಚಾರವನ್ನು ಸಂರಕ್ಷಿಸಿದರು ಮತ್ತು ಅದಕ್ಕಾಗಿ ಬದುಕಿದರು. ಅವರ ಸಂಪೂರ್ಣ ಜೀವನ ಸಂಘದ ಒಂದು ಶಬ್ದಕೋಶವಾಗಿತ್ತು. ಅವರು ಆರೆಸ್ಸೆಸ್ಸ್ ನ encyclopedia ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಜೀ ಭಾಗವತ್ ಅವರು ತಿಳಿಸಿದರು.

ಚಿಂತಕ, ಪತ್ರಕರ್ತ, ಹಿಂದುತ್ವದ ಪ್ರತಿಪಾದಕ, ಆರೆಸ್ಸೆಸ್ಸ್ ನ ಹಿರಿಯ ಕಾರ್ಯಕರ್ತ ಮಾ.ಗೋ. ವೈದ್ಯ ಅವರ ಅಂತಿಮ ದರ್ಶನ ಮಾಡಿದ ಭಾಗವತ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಅವರ ನಿಧನ ನಮಗೆಲ್ಲ ತುಂಬಲಾರದ ನಷ್ಟವಾಗಿದೆ. ದೇಶದ ಎಲ್ಲ ಪ್ರಾಂತ ಸ್ತರದ ಕಾರ್ಯಕರ್ತರೊಂದಿಗೆ ಅವರಿಗೆ ಘನಿಷ್ಠ ಸಂಬಂಧವಿತ್ತು. ಅವರೊಂದಿಗೆ ಸಲಹೆ-ಚರ್ಚೆಗಳು ನಿರಂತರವಾಗಿ ನಡೆಯುತ್ತಿದ್ದವು.

ನಮಗೆ ಏನಾದರೂ ವಿಚಾರ-ವಿಮರ್ಶೆ ಮಾಡಬೇಕಾದ ಸಂದರ್ಭದಲ್ಲಿ ನಮಗಿರುವ ಪ್ರಮುಖರಲ್ಲಿ ಹಿರಿಯ ಸ್ಥಾನ ಅವರದ್ದು.

ಅವರಿಂದು ನಮ್ಮನ್ನು ಅಗಲಿದ್ದಾರೆ. ಅವರ ಜೀವನ ಕೃತಾರ್ಥ ಜೀವನ. ಅದು ಶ್ಲೋಕಯೋಗ್ಯವಾದುದಲ್ಲ. ಜೀವನ ಹೇಗೆ ನಡೆಸಬೇಕು ಎನ್ನುವುದಕ್ಕೆ ಅವರು ನಮಗೆಲ್ಲ ಉದಾಹರಣೆಯಾಗಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅವರದು ರಕ್ತಸಿಕ್ತ ಕ್ರೌರ್ಯ, ಇವರದು ತಣ್ಣನೆಯ ಕ್ರೌರ್ಯ ಪರಂಪರೆ

Sun Dec 20 , 2020
ಕ್ರಿ.ಶ. 1590  ಮತ್ತು 1812ರ ನಡುವೆ ಗೋವಾದಲ್ಲಿ ಕ್ರೈಸ್ತರು ನಡೆಸಿದ ತಣ್ಣನೆಯ ಕ್ರೌರ್ಯದ ಚಿತ್ರಣ ಅಂದಿನ ಸಾಮಾಜಿಕ ಸನ್ನಿವೇಶವನ್ನು ಲೇಖಕ ಟಿ.ಎ.ಪಿ. ಶೆಣೈ ಅವರು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. ಪುಸ್ತಕ ಪರಿಚಯ: ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ ಸಾಮಾಜಿಕ, ರಾಜಕೀಯ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಸೂಕ್ಷ್ಮಜೀವಿಗಳ ಮನಸ್ಸಿಗೆ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅವರಲ್ಲಿ ಅನೇಕರು ಅವುಗಳ ದಾಖಲೀಕರಣದ ಕೆಲಸವನ್ನೂ ಮಾಡುತ್ತ ಸಾಗಿದ್ದಾರೆ ಕೂಡ. ಇಂತಹ ದಾಖಲೆಗಳೇ ಮುಂದಿನ […]