ಉಜಿರೆಯಲ್ಲಿ ಪಾಕಿಸ್ತಾನ್ ಜಿಂಧಾಬಾದ್ ಘೋಷಣೆ

ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತಎಣಿಕೆಯ ಸಂದರ್ಭ ಎಸ್ ಡಿಪಿಐ ಕಾರ್ಯಕರ್ತರು  ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ದೇಶವಿರೋಧಿ ಘಟನೆ ನಡೆದಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೇರಿದಂತೆ  ವಿವಿಧ ಸಂಘಟನೆಗಳಿಂದ ಈ ದೇಶದ್ರೋಹಿ ಘಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇಂದು ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ಪಂಚಾಯತ್ ಚುನಾವಣೆಯ ಮತೆಣಿಕೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಕೆಲ ಗ್ರಾಮಪಂಚಾಯತ್ ನಲ್ಲಿ ಎಸ್ ಡಿಪಿಐ ಅಭ್ಯರ್ಥಿಗಳು ಗೆದ್ದಿರುವ ಮಾಹಿತಿ ಪ್ರಕಟವಾಗುತ್ತಿದ್ದಂತೆ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ತಾನದ ಪರವಾದ ಷೋಷಣೆ ಕೂಗಿ ಜೈಕಾರ ಹಾಕಿದರು.

ಎಸ್ ಡಿಪಿಐನಂತಹ ಕೆಲವು ಮುಸ್ಲಿಂ ಸಂಘಟನೆಗಳು ಸದಾ ತಮ್ಮ ನಿಷ್ಠೆಯನ್ನು ಭಾರತವಿರೋಧಿ ಪಾಕಿಸ್ತಾನದ ಪರವಾಗಿ ಪ್ರಕಟಿಸುವುದು, ಪಾಕ್ ಪರ ಘೋಷಣೆ ಕೂಗುವುದು  ಆಗಾಗ್ಗೆ ವರದಿಯಾಗುತ್ತಲೇ ಇದೆ. ಜೊತೆಗೆ ದೇಶದ್ರೋಹಿ ಚಟುವಟಿಕೆಗಳಲ್ಲಿಯೂ ಈ ಸಂಘಟನೆಗಳ ಹೆಸರು ಕೇಳಿಬರುತ್ತಿರುತ್ತದೆ. ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು, ಚುನಾವಣೆ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ.  ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇನ್ನೊಂದೆಡೆ ಓಲೈಕೆಯ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳು ಈ ಕ್ರಮವನ್ನು ಖಂಡಿಸಲೂ ಹಿಂದೆಗೆಯುತ್ತಿರುವುದು ಈ ಸಂಘಟನೆಗಳಿಗೆ ಪ್ರೋತ್ಸಾಹ ದೊರೆತಂತಾಗಿದೆಯೇ?

ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ 15 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್ ರ ಅರ್ಹತೆ

Thu Dec 31 , 2020
ಅಮರ್ತ್ಯಸೇನ್ ದೇಶದ ಪ್ರತಿಷ‍್ಠಿತ ಯೋಜನೆಗಳಿಗೆ ಹಳ್ಳ ಹಿಡಿಸಿರುವುದಕ್ಕೇ ಹೆಸರುವಾಸಿ. ಯಾವುದೇ ಅರ್ಹತೆ ಇಲ್ಲದಿದ್ದರೂ ಪ್ರತಿಷ್ಠಿತ ಹುದ್ದೆಗಳು ಅಮರ್ತ್ಯಸೇನ್ ಗೆ ದೊರಕುತ್ತಿದ್ದವು. ಅಮರ್ತ್ಯಸೇನ್ ಅವರಿದ್ದ ಏಕೈಕ ಅರ್ಹತೆ ಅವರು ಗಾಂಧಿ ಕುಟುಂಬ ಅದರಲ್ಲಿಯೂ ಮುಖ್ಯವಾಗಿ ಸೋನಿಯಾ ಗಾಂಧಿಯವರಿಗೆ ನಿಕಟವರ್ತಿಯಾಗಿದ್ದರು ಎಂಬುದು. ಇದಕ್ಕೆ ತಾಜಾ ಉದಾಹರಣೆ ನಾಲಂದಾ ವಿಶ್ವವಿದ್ಯಾಲಯದ ಪುನರುಜ್ಜೀವನದಂತಹ ಉದಾತ್ತ ಯೋಜನೆ ಅಮರ್ತ್ಯಸೇನರಂತಹ ಅಡಕಸಬಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿರುವುದು. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕನಸಿನ […]