ಮಾರುಕಟ್ಟೆಗೆ ಬರಲಿದೆ ಸೆಗಣಿಯಿಂದ ತಯಾರಿಸಿದ ‘ವೇದಿಕ್ ಪೇಂಟ್ಸ್’

ಡಿ. 18, 2020, ಬೆಂಗಳೂರು: ಸೆಗಣಿಯಿಂದ ತಯಾರಿಸಿದ ‘ವೇದಿಕೆ ಪೇಂಟ್ಸ್’ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ‘ವೇದಿಕ್ ಪೇಂಟ್’ ಸಗಣಿಯಿಂದ ತಯಾರಿಸಲಾಗಿದೆ. ಇದರಿಂದ ಇದು ಬ್ಯಾಕ್ಟೀರಿಯಾವನ್ನು ತಡೆಯುತ್ತದೆ. ಪರಿಸರಸ್ನೇಹಿಯಾಗಿದ್ದು, ಬೇರೆ ರಾಸಾಯನಿಕಗಳಂತೆ ವಿಷಕಾರಿಯಲ್ಲ. ಇದನ್ನು ನೀರಿನಿಂದ ತೊಳೆದರೂ ಯಾವುದೇ ಹಾನಿಯಾಗುವುದಿಲ್ಲ. ಈ ಅಂಶಗಳಿಗಿಂತ ಹೆಚ್ಚಾಗಿ, ಹೈನುಗಾರಿಕೆ ಕೈಗೊಂಡಿರುವ ನಮ್ಮ ರೈತರು ಇದರಿಂದ ಹೆಚ್ಚುವರಿ ರೂ. 55,000 ವರೆಗೆ ಆದಾಯ ಪಡೆಯಲು ಸಾಧ್ಯವಿದೆ. ಇದರಿಂದ ಗ್ರಾಮೀಣ ಜೀವನಮಟ್ಟ ಸುಧಾರಿಸುವ ಸಹಕಾರಿಯಾಗಲಿದೆ ಎಂದರು.

ಖಾದಿ ಹಾಗೂ ಗ್ರಾಮೀಣ ಕೈಗಾರಿಕಾ ಮಿಷನ್ ಅಡಿಯಲ್ಲಿ ಖಾದಿ ಇಂಡಿಯಾ ವತಿಯಿಂದ ಈ ಪೇಂಟ್ ನ್ನು ಪರಿಚಯಿಸಲಾಗುತ್ತಿದೆ. ಕೃಷಿಯೊಂದಿಗೆ ರೈತರಿಗೆ ಹೆಚ್ಚಿನ ಮಟ್ಟದ ಆದಾಯವನ್ನೂ ಇದು ತಂದುಕೊಡಲಿದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.

ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಕಾಮಧೇನು ದೀಪಾವಳಿ, ನವರಾತ್ರಿ ಆಚರಿಸುವಂತೆ ಹಾಗೂ ಸೆಗಣಿಯಿಂದ ತಯಾರಿಸಿದ ದೀಪಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದನ್ನು ಸ್ಮರಿಸಬಹುದು. ಗೋ ಸಂರಕ್ಷಣೆಗೆ ಹಾಗೂ ಗೋಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸುವುದರ ಜೊತೆಗೆ ಆತ್ಮನಿರ್ಭರ ಭಾರತ ನಿರ್ಮಿಸುವ ಮೋದಿ ಆಶಯದ ಸಾಕಾರಕ್ಕೆ ದಿಟ್ಟ ಹೆಜ್ಜೆ ಎನ್ನಬಹುದು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಧರ್ಮ ಸಂರಕ್ಷಣೆಯ ಕಾರ್ಯಕ್ಕೆ ಮೈಸೂರು ಅರಸರ ಸಂಪೂರ್ಣ ಬೆಂಬಲವಿರುತ್ತದೆ: ಯದುವೀರ ಒಡೆಯರ್

Sat Dec 19 , 2020
ಧರ್ಮ ಸಂರಕ್ಷಣೆಯೇ ಮೈಸೂರು ಅರಮನೆಯ ಮೂಲ ಕರ್ತವ್ಯವಾಗಿದ್ದು, ಈ ಕಾರ್ಯದಲ್ಲಿ ಎಂದೆಂದಿಗೂ ತೊಡಗಿಸಿಕೊಳ್ಳುತ್ತೇವೆ ಎಂದು ಮೈಸೂರು ರಾಜಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಅವರು ಶೇಷಾದ್ರಿಪುರದ ಯಾದವ ಸ್ಮತಿಯಲ್ಲಿ ‘ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ’ ಬೆಂಗಳೂರು ಉತ್ತರ ವಿಭಾಗ ಕಚೇರಿ ಉದ್ಘಾಟಿಸಿ ಮಾತನಾಡಿದರು. ನನ್ನೆಲ್ಲ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದಾಗಿ ಆಯೋಜಕರು ತಿಳಿಸಿದರು. ಆದರೆ ಈ ಕಾರ್ಯಕ ಮೈಸೂರು ಅರಮನೆಯ ಆದ್ಯ […]