ವಿಶ್ವ ಹಿಂದೂ ಪರಿಷದ್ (ವಿಹಿಂಪ) ವತಿಯಿಂದ ಗೀತಾ ಜಯಂತಿಯ ಪ್ರಯುಕ್ತ ಬೆಂಗಳೂರು ಮಹಾನಗರದ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಯಜ್ಞ ಕಾರ್ಯಕ್ರಮ ನಡೆಯಿತು. 5,000ಕ್ಕೂ ಅಧಿಕ ಮಂದಿ ಭಾಗವಹಿಸಿ ಪಾರಾಯಣ ಮಾಡಿದರು. ವಿಹಿಂಪ ಕಳೆದ 28 ವರ್ಷಗಳಿಂದ ಗೀತಾ ಪಾರಾಯಣವನ್ನು ಏರ್ಪಡಿಸುತ್ತಿದೆ. ಪ್ರತೀ ಕಾರ್ಯಕ್ರಮದಲ್ಲಿ ಪ್ರಖಂಡ್, ಸತ್ಸಂಗ ಸೇರಿದಂತೆ 4 ಗಂಟೆಗಳ ಕಾರ್ಯಕ್ರಮವಿರುತ್ತದೆ. ಬೆಂಗಳೂರು ಮಾತ್ರವಲ್ಲದೇ ಮಾಲೂರು ಬಾಗೇಪಲ್ಲಿ, ಹೊಸಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದಿದೆ.

ಲೇಖಕರು:  ಡಾ.ರೋಹಿಣಾಕ್ಷ ಶಿರ್ಲಾಲು ಕುವೆಂಪು ಕನ್ನಡ ಸಾಹಿತ್ಯಲೋಕ ಕಂಡ ಶ್ರೇಷ್ಠ ಸಾಹಿತಿ, ದಾರ್ಶನಿಕ. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಸಣ್ಣ ಕಥೆ, ಮಹಾಕಾವ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಅನ್ಯಾನ್ಯ ಪ್ರಕಾರಗಳನ್ನು ಶ್ರೀಮಂತಗೊಳಿಸಿದ ಕೀರ್ತಿಗೆ ಪಾತ್ರರಾದವರು ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಕುವೆಂಪು ಅವರು ಬರವಣಿಗೆಯನ್ನು ನಡೆಸಿದ ಕಾಲ ಭಾರತದ ಇತಿಹಾಸದಲ್ಲಿ ಬಹುಮುಖ್ಯ ಸಂಘರ್ಷದ ಕಾಲಘಟ್ಟವದು. ಬ್ರಿಟಿಷ್ ಗುಲಾಮಿತನದಿಂದ ಪಾರಾಗಲು ನಡೆಯುತ್ತಿದ್ದ ಹೋರಾಟದ ನಿರ್ಣಾಯಕ ಕಾಲವದು. ಇನ್ನೊಂದೆಡೆ ಬ್ರಿಟಿಷರ ಒಡೆದು ಆಳುವ […]

ಲೇಖಕರು: ಸಂತೋಷ್ ಜಿ.ಆರ್., ತಾಂಜೇನಿಯಾ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠ ಕರ್ನಾಟಕದ ಸಾಮಾಜಿಕ ಜಿಂತನೆ ಮತ್ತು ಸಂರಚನೆಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದಕ್ಕೆ ಕಾರಣ  ಈ ಹಿಂದಿನ ಮಠಾಧೀಶರಾಗಿದ್ದ ಬೃಂದಾವನಸ್ಥ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು. ಶ್ರೀಗಳಿಗಿದ್ದ ಹಿಂದುತ್ವ ಕುರಿತ ಬದ್ಧತೆ ಎಲ್ಲರಿಗೂ ತಿಳಿದದ್ದೆ. ಹಿಂದು ಎನ್ನಲು ಸಂಕೋಚಗೊಳ್ಳುತ್ತಿದ್ದ, ಜಾತಿ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದ ಅನೇಕ ಸ್ವಾಮೀಜಿಗಳ ಮಧ್ಯೆ ವಿಶ್ವೇಶ ತೀರ್ಥರು ಧೈರ್ಯವಾಗಿ ಹಿಂದುತ್ವದ ಕೆಲಸಕ್ಕೆ ಧುಮಕಿದರು. ಸಾರ್ವಜನಿಕವಾಗಿ […]

ಪುಸ್ತಕ ಪರಿಚಯ: ಪ್ರವೀಣ್ ಪಟವರ್ಧನ್ “ಇದ್ದರಿಂಥವರೆಮ್ಮ ನಡುವಲಿ” ಎಂಬುದು ಹಿರಿಯ ಸಂಸ್ಕೃತ ವಿದ್ವಾಂಸರು ಹಾಗೂ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ನಾನಾ ಪುಸ್ತಕಗಳ ಕರ್ತೃ ಡಾ. ಎಚ್ ಆರ್ ವಿಶ್ವಾಸ ಅವರ ನೂತನ ಕೃತಿ. ತಮ್ಮನ್ನು ಹಲವು ರೀತಿಯಲ್ಲಿ ಪ್ರೇರೇಪಿಸಿರುವ  ಮಹನೀಯರ ಬಗೆಗಿನ ಬರಹಗಳುಳ್ಳ ಕೃತಿ “ಇದ್ದರಿಂಥವರೆಮ್ಮ ನಡುವಲಿ” ಆಗಿದೆ. ಪ್ರಸ್ತುತ, ಡಾ. ವಿಶ್ವಾಸರು ಸಂಸ್ಕೃತ ಭಾರತೀಯ ಅಖಿಲ ಭಾರತೀಯ ಶಿಕ್ಷಣ ಪ್ರಮುಖ್ ಜವಾಬ್ದಾರಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.  ಸಂಸ್ಕೃತ ಭಾರತಿ, ಹಿಂದೂ […]

ನವದೆಹಲಿ : ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ನ ಸಾಮಾಜಿಕ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 2020ರ ಕೊನೆಯ ಹಾಗೂ 72ನೇ ಮನ್ ಕಿ ಬಾತ್ (‘ಮನದ ಮಾತು’) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ತಂಡ ಶಿಥಿಲಗೊಂಡಿದ್ದ, ಅವ್ಯವಸ್ಥೆಗೀಡಾಗಿದ್ದ ವೀರಭದ್ರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿತ್ತು. ಈ ಜೀರ್ಣೋದ್ಧಾರ ಕಾಮಗಾರಿಯ ಫೋಟೋಗಳು […]

ಉತ್ತರ ಪ್ರದೇಶದ ನಂತರ ಇದೀಗ ಮಧ್ಯಪ್ರದೇಶ ಸರ್ಕಾರ ಲವ್ ಜಿಹಾದ್ ವಿರೋಧಿ ಕಾನೂನು ತರಲು ಮುಂದಾಗಿದೆ. ಈ ಮಸೂದೆಯು ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನು ವಿಧಿಸುವ ಅವಕಾಶವನ್ನು ನೀಡಿದೆ. ಇಂದು (ಡಿ.26, ಶನಿವಾರ) ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಲವಂತದ ಧಾರ್ಮಿಕ ಮತಾಂತರ ವಿರೋಧಿ ಮಸೂದೆ ‘ಧರ್ಮ ಸ್ವಾತಂತ್ರ್ಯ ಮಸೂದೆ-2020’ನ್ನು ಅಂಗೀಕರಿಸಲಾಯಿತು. ಈ […]

ಅಗರ್ತಲ: ತ್ರಿಪುರಾದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಾಗಿದ್ದು, ಗಂಡು ಹಾಗೂ ಹೆಣ್ಣುಮಕ್ಕಳ ಅನುಪಾತವು 1,000:1,011 ಇದೆ. ನೀತಿ ಆಯೋಗದ ಪ್ರಕಾರ, 2013–15ರ ಅವಧಿಯಲ್ಲಿ ಭಾರತದಲ್ಲಿ ಗಂಡು– ಹೆಣ್ಣು ಅನುಪಾತವು 1,000:900 ಇತ್ತು. ಜೊತೆಗೆ ದೇಶದಲ್ಲಿ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ತ್ರಿಪುರಾದಲ್ಲಿ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ರಿಸರ್ಚ್‌ ಸಂಸ್ಥೆಯು ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌–5) ಪ್ರಕಾರ, ತ್ರಿಪಾರದಲ್ಲಿ ಲಿಂಗಾನುಪಾತ […]

ಚಿಂತನ ಲೇಖಕಿ: ಸಿಂಚನ.ಎಂ.ಕೆ ಇಂದಿನ ಕಾಲದ ಮಕ್ಕಳು, ಯುವಜನರು ಯಾರನ್ನು ತಮ್ಮ ಆದರ್ಶವನ್ನಾಗಿಸಿಕೊಂಡಿದ್ದಾರೆ? ಯಾರ ಮೇಲೆ ಹೆಚ್ಚು ಅಭಿಮಾನವನ್ನು ಹೊಂದಿದ್ದಾರೆ? ಯಾರ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಿದ್ದಾರೆ? ಯಾರನ್ನು ತಮ್ಮ ನಾಯಕನ ಸ್ಥಾನದಲ್ಲಿ ಕೂರಿಸಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇಂದಿನ ಸಮಾಜ ಎತ್ತ ಸಾಗುತ್ತಿದೆ ಎಂದು ಗಾಬರಿಯಾಗುವುದು ಖಂಡಿತ. ಯಾವ ಹಿಂದುಸ್ಥಾನದ ಶಿಕ್ಷಣ ವ್ಯವಸ್ಥೆಯು ವಿಶ್ವದಲ್ಲೇ ಸರ್ವಶ್ರೇಷ್ಠವೆಂದು ಮೆಕಾಲೆ ಎಂಬಾತನು ಬ್ರಿಟಿಷ್ ಸಂಸತ್ತಿನಲ್ಲೇ ವಿವರಿಸಿದ್ದನೊ ಹಾಗೂ ಅದನ್ನು […]

ಪುಸ್ತಕ ಪರಿಚಯ: ವಾದಿರಾಜ್, ಸಾಮಾಜಿಕ ಕಾರ್ಯಕರ್ತ ಮೂಲ ತೆಲಗು ಭಾಷಿಗ ದಲಿತ ಹೆಣ್ಣುಮಗಳು, ತಮಿಳುನಾಡಿನ ಶಿವಗಂಗೆ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಹೋರಾಟ, ಪ್ರಾಣಾರ್ಪಣೆಯ ಕಥನ ಇದೀಗ ಮೊದಲಬಾರಿಗೆ ಕನ್ನಡದಲ್ಲಿ ಪುಸ್ತಕವಾಗಿ ಹೊರಬರುತ್ತಿದೆ. ತಮಿಳುನಾಡಿನ ಕುಂಡಚವಾಡಿಯಲ್ಲಿ ಅರುಂಧತಿಯಾರ್ ಸಮಾಜದ ಪೆರಿಯಮುತ್ತನ್ – ರಾಕು ದಂಪತಿಗಳ ಮಗಳು ಕುಯಿಲಿ. ತಾಯಿ ರಾಕುವಿನದು ಕೊಬ್ಬಿದ ಗೂಳಿಗಳನ್ನು ಪಳಗಿಸುವ ಕಾಯಕ. ತಂದೆ ಪೆರಿಯಮುತ್ತನ್ ಕುದುರೆ ಲಾಯದಲ್ಲಿ ದುಡಿಯುವವನು . ಮಗಳು ಕುಯಿಲಿಗೆ ಸಾಹಸ ಪ್ರವೃತ್ತಿ ರಕ್ತದಲ್ಲೇ […]

ಚೀನಾದ ಮಹತ್ವಾಕಾಂಕ್ಷೆ ಹಾಗೂ ಭಾರತವನ್ನು ವ್ಯೂಹಾತ್ಮಕವಾಗಿ ಕಟ್ಟಿ ಹಾಕಲು ಉದ್ದೇಶದಿಂದ ಚಾಲನೆಗೊಂಡ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ನಿಂದ ಚೀನಾ ಹಿಂದೆ ಸರಿಯುತ್ತಿದೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಸಿಪಿಇಸಿ ಯೋಜನೆಯಲ್ಲಿ ಪಾಕಿಸ್ತಾನ ಭಾರೀ ಭ್ರಷ್ಟಾಚಾರ ನಡೆಸುತ್ತಿದೆ. ಚೀನಾ ಹಣವು ಕಾಮಗಾರಿ ಪೂರ್ಣಗೊಳಿಸಲು ವ್ಯಯಿಸದೇ ಪಾಕ್ ಸೇನೆಯ ಜೇಬು ಸೇರುತ್ತಿದೆ ಎಂಬುದು ಚೀನಾದ ಆರೋಪ. ಮಾತ್ರವಲ್ಲದೇ ಚೀನಿ ಕಾರ್ಮಿಕರಿಗೆ ಭದ್ರತೆ ಒದಗಿಸಲು ಪಾಕಿಸ್ತಾನ ವಿಫಲವಾಗಿದೆ ಎನ್ನಲಾಗುತ್ತಿದೆ. ಯೋಜನೆಯ ಮೇಲೆ ನಿರಂತರ ಭಯೋತ್ಪಾದಕ […]