ಇಂದು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಈ ಪ್ರಯುಕ್ತ ವಿಶೇಷ ಲೇಖನ ಲೇಖಕ: ಅನಿಲ್ ಕುಮಾರ್ ಮೊಳಹಳ್ಳಿ ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್‌ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು. ಅಟಲ್‌ಜೀ, ಆಗಷ್ಟೇ ಲೋಕಸಭೆಯ ಮೆಟ್ಟಿಲು […]

ಜಪಾನಿ ಭಾಷೆಯಲ್ಲಿ ಸುಂದೋಕು(Tsundoku) ಎಂಬ ಪದ ಬಳಕೆ ಇದೆಯಂತೆ. ಪುಸ್ತಕಗಳನ್ನು ರಾಶಿ ರಾಶಿ ಕೊಂಡು ಪೇರಿಸಿಟ್ಟುಕೊಂಡು ಯಾವುದನ್ನೂ ಓದದ ಅಭ್ಯಾಸಕ್ಕೆ ಸುಂದೋಕು ಎಂಬ ಹೆಸರು. ಹಾಗೆ ಮಾರುಕಟ್ಟೆಗೆ ಬರುವ ಎಲ್ಲಾ ಪುಸ್ತಕಗಳು ಒಂದೆಡೆಯಾದರೆ ಅವುಗಳಲ್ಲಿ ಓದಲೇಬೇಕಾದ ಪುಸ್ತಕ ಯಾವುದು? ಓದಿ ತಿಳಿದುಕೊಳ್ಳಲು ಯಾವುದರಿಂದ ಆರಂಭಿಸಬೇಕು? ಎಂಥಹ ಪುಸ್ತಕ ನನಗಿಷ್ಟವಾಗಬಹುದು ಎಂದು ತಿಳಿಸಲು ಮಾರ್ಗೋಪಾಯಗಳಿವೆಯೇ?…. ಹೀಗೆ ಪ್ರಶ್ನೆಯ ಸುರಿಮಳೆಯೇ ಆದೀತು. ಸುಕೃತಿ ಯವರ ಪುಸ್ತಕ ಪರಿಚಯದ ಕೆಲಸದ ಬಗ್ಗೆ ತಿಳಿಯಿರಿ. ಕನ್ನಡ […]

ಪಾಕಿಸ್ತಾನ: ಇಸ್ಲಾಮಾಬಾದ್ ನಲ್ಲಿರುವ ಹಿಂದೂಗಳ ಬಹುದಿನಗಳ ಬೇಡಿಕೆಯಾಗಿರುವ ದೇವಾಲಯ ನಿರ್ಮಾಣಕ್ಕೆ ಪಾಕ್ ಸರ್ಕಾರ ಕೊನೆಗೂ ಅನುಮತಿ ನೀಡಿದೆ. ಇಸ್ಲಾಮಾಬಾದ್‌ನಲ್ಲಿ ಸುಮಾರು 800 ಮಂದಿ ಹಿಂದೂಗಳಿದ್ದು, ದೇವಾಲಯಗಳಿಲ್ಲದ ಕಾರಣ ಅವರೆಲ್ಲರೂ ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನೂ ಮನೆಯಲ್ಲೇ ಆಚರಿಸಬೇಕಾಗಿತ್ತು. ಸ್ಥಳೀಯ ಹಿಂದೂಗಳ ಬಹುಕಾಲದ ಬೇಡಿಕೆಯಂತೆ 2018ರಲ್ಲಿ ದೇವಾಲಯ ನಿರ್ಮಾಣಕ್ಕೆ ಸಮುದಾಯ ಭವನ ಮತ್ತು ಸ್ಮಶಾನಕ್ಕಾಗಿ ಸ್ಥಳೀಯಾಡಳಿತ ಅರ್ಧ ಎಕರೆ ಜಾಗ ನೀಡಿತ್ತು. ನಂತರ ಇಸ್ಲಾಂ ಸಮುದಾಯಗಳ ಒತ್ತಡಕ್ಕೆ ಮಣಿದು ಅನುಮತಿಯನ್ನು ಹಿಂದೆಗೆದುಕೊಂಡ […]

ಕಲಬುರಗಿ: ರೋಗಗ್ರಸ್ತ, ನಿರಾಶ್ರಿತ ಹಾಗು ವಯಸ್ಸಾದ ಗೋವುಗಳ ಸೇವೆಯಲ್ಲಿ ತೊಡಗಿರುವ ಕಲಬುರಗಿಯ ಶ್ರೀ ಮಾಧವ ಗೋ ಶಾಲೆಗೆ ಪ್ರತಿಷ್ಠಿತ ಐಎಸ್‌ಒ ಪ್ರಮಾಣ ಪತ್ರ ದೊರಕಿದೆ. ಪ್ರತಿಷ್ಠಿತ ಸರ್ಟಿಫಿಕೇಟ್ ಪಡೆದ ರಾಜ್ಯದ 2ನೇ ಗೋಶಾಲೆ ಹೆಗ್ಗಳಿಕೆಗೆಪಾತ್ರವಾಗಿದೆ. ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಆರೈಕೆ, ಉಪಚಾರ, ದೇಸಿ ಗೋ ತಳಿಗಳ ಅಭಿವೃದ್ಧಿ ಮತ್ತು ಪಂಚಗವ್ಯ ಉತ್ಪನ್ನಗಳ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸಲು ಐ.ಎಸ್.ಓ. 9001-2015 ಪ್ರಮಾಣಪತ್ರನೀಡಲಾಗುತ್ತದೆ. ಕಲಬುರಗಿಯ ಶ್ರೀ ಮಾಧವ ಗೋಶಾಲೆಯು […]

ಮಹಾತ್ಮ ಗಾಂಧಿಯವರ ಬಹುಮುಖ್ಯ ಕನಸು ಗ್ರಾಮ ಸ್ವರಾಜ್ಯ. ಅಂದರೆ, ಸ್ವಾವಲಂಬಿಯಾದ, ತನ್ನ ಬೇಕುಬೇಡಗಳನ್ನು ತಾನೇ ನಿರ್ಧರಿಸುವ, ತನ್ನ ಆಡಳಿತವನ್ನು ತಾನೇ ನಡೆಸುವ, ತನಗೆ ಬೇಕಾದ್ದನ್ನು ತಾನೇ ಬೆಳೆಯುವ ಉತ್ಪಾದಿಸುವ ಗ್ರಾಮ. ಇದೇನೂ ಭಾರತಕ್ಕೆ ಹೊಸತಲ್ಲ. ಪ್ರಾಚೀನ ಕಾಲದಿಂದಲೂ ನಮ್ಮ ಗ್ರಾಮಗಳು ಇದ್ದಿದ್ದೇ ಹಾಗೆ. ಆದರೆ, ಬ್ರಿಟಿಷರ ಆಡಳಿತ ಭಾರತದಲ್ಲಿ ಪ್ರಾರಂಭವಾದ ಮೇಲೆ, ಸ್ಥಳೀಯವಾಗಿ ಸಂಗ್ರಹವಾಗಿ ಸ್ಥಳೀಯವಾಗಿಯೇ ವಿನಿಯೋಗವಾಗುತ್ತಿದ್ದ ತೆರಿಗೆಯೆಲ್ಲವೂ, ಬ್ರಿಟಿಷ್ ಸರ್ಕಾರಕ್ಕೆ ಮೊದಲು ಪಾವತಿಯಾಗಿ ಅಲ್ಲಿಂದ ಅನುದಾನರೂಪದಲ್ಲಿ ನಗರ, ಗ್ರಾಮಗಳಿಗೆ […]

ಚುನಾವಣೆ ಎದುರಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಏಳುತ್ತಿರುವ ರಾಜಕೀಯ ಗಾಳಿ– ದೂಳಿನಲ್ಲಿ ಸಾಮಾಜಿಕ ತರಂಗಗಳಿವೆಯೇ? ವಾದಿರಾಜ್ ಜಾತಿ ಆಧಾರಿತ ಸಾಮಾಜಿಕ ತಲ್ಲಣಗಳಿಂದ ದೂರವಿರುವ ಪಶ್ಚಿಮ ಬಂಗಾಳದಲ್ಲಿ ಜಾತಿ ಲೆಕ್ಕಾಚಾರಗಳು ಅಪ್ರಸ್ತುತ. ಇದರಲ್ಲಿ ಸ್ವಾತಂತ್ರ್ಯಪೂರ್ವದ ಸಮಾಜ ಸುಧಾರಕರದ್ದು, ಕಮ್ಯುನಿಸ್ಟ್‌ ಆಳ್ವಿಕೆಯಲ್ಲಿ ನಡೆದ ಭೂ ಹಂಚಿಕೆಯದ್ದು ದೊಡ್ಡ ಪಾತ್ರ. ಮಂಡಲ್ ಚಳವಳಿಯ ಬಿಸಿಯೂ ಪಶ್ಚಿಮ ಬಂಗಾಳಕ್ಕೆ ತಟ್ಟಲಿಲ್ಲ. ಹಾಗಾಗಿಯೇ, ಅಂದು ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ‘ಭೂ ಸುಧಾರಣೆ ಕಾಯ್ದೆಯ ಪರಿಣಾಮಕಾರಿ ಜಾರಿಯ ನಂತರ ರಾಜ್ಯದಲ್ಲಿ ಜಾತಿ […]

ನವದೆಹಲಿ: ಮುಂದಿನ ವರ್ಷದ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಯೋಗ, ಕಳರಿಯಪಟ್ಟು, ಮಲ್ಲಕಂಬ, ಗಟ್ಕಾ ಮತ್ತು ತಂಗ್ಟಾಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯುವಕರನ್ನು ಕ್ರೀಡೆಗಳತ್ತ ಆಕರ್ಷಿಸಲು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ 2018ರಿಂದ ಪ್ರತೀ ವರ್ಷ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಮುಂದಿನ ವರ್ಷದಿಂದ ಯೋಗಾಸನವನ್ನು ಸೇರಿಸಲಾಗುವುದು. ಒಟ್ಟು ಏಳು ವಿಭಾಗದಲ್ಲಿನಾಲ್ಕು ವಿಧದ ಸ್ಪರ್ಧೆ ನಡೆಸಿ […]

ಮಂಗಳೂರು: ಕೊರೊನಾದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ನೆರವಾಗಲು ಪ್ರಾರಂಭವಾದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಿಂದ ಕಳೆದ 8 ತಿಂಗಳಲ್ಲಿ ಮಂಗಳೂರಿನ 1500ಕ್ಕೂ ಅಧಿಕ ಮಂದಿ ಉದ್ಯೋಗ ಪಡೆದಿದ್ಧಾರೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಗೋಸೇವಾ ಪ್ರಮುಖರಾದ ಪ್ರವೀಣ ಸರಳಾಯರು ಅವರು ತಿಳಿಸಿದರು. ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೆರ್ಲ ನಲಂದಾ ಕಾಲೇಜಿನಲ್ಲಿ ನಡೆದ ಆರು ದಿವಸಗಳ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 8 ತಿಂಗಳ ಹಿಂದೆ […]

22 Dec 2020, Bengaluru: Shri Alok Kumar, Supreme Court Advocate, Central Working President of the Vishva Hindu Parishad, Chief of Sri Rama Janmabhoomi Teerth Kshetra Trust’s Nidhi Samarpana Abhiyana addressed a press conference here in the city today. Sri Na Thippeswamy, Kshetriya Karyavah of the RSS’ Dakshina Madhya Kshetra comprising […]

ಮಂಗಳವಾರ, 22 ಡಿಸೆಂಬರ್ 2020ರಂದು ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಅಲೋಕ್ ಕುಮಾರ್ ಅವರ ಪತ್ರಿಕಾ ಗೋಷ್ಠಿಯ ವಿವರ ಬೆಂಗಳೂರು: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಯೋಜನೆಯಂತೆ  ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ ವಿಶ್ವ ಹಿಂದೂ ಪರಿಷದ್(ವಿಹಿಂಪ) ತನ್ನ ಸಂಪೂರ್ಣ ಸಹಯೋಗ ನೀಡಲಿದೆ. ವಿಹಿಂಪನ ಕಾರ್ಯಕರ್ತರು  ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕೆ ಹಾಗೂ ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುವಾಗುವಂತೆ […]