ಮನೆಯಿಂದ ಹೊರ ಜಗತ್ತಿಗೆ ತಲುಪಲು ಬಿದಿರಿನ ಸೇತುವೆ ನಿರ್ಮಿಸಿದ ಸೇವಾಭಾರತಿ

ಮನೆಯಿಂದ ಹೊರ ಜಗತ್ತಿಗೆ ತಲುಪಲು ಬಿದಿರಿನ ಸೇತುವೆ ನಿರ್ಮಿಸಿದ ಸೇವಾಭಾರತಿ

ಮೂಲಮಠಂ: ಕೇರಳದ ಇಡುಕ್ಕಿ ಜಿಲ್ಲೆಯ ಆರಪ್ಪುಳಂ‌ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಟುಂಬವೊಂದಕ್ಕೆ ಮಳೆಗಾಲದಲ್ಲಿ ಹೊರಜಗತ್ತಿಗೆ ಸಂಪರ್ಕ ಇಲ್ಲದಿರುವುದನ್ನು ತಿಳಿದ ಸೇವಾಭಾರತಿಯ ಕಾರ್ಯಕರ್ತರು ತಾತ್ಕಾಲಿಕವಾದ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ವಳಯಂತೊಟ್ಟಿ ಎಂಬಲ್ಲಿರುವ ಸನ್ನಿ ಅವರು ಊರ ಹೊರಭಾಗದ ಸರಕಾರೀ ಭೂಮಿಯಲ್ಲಿ ಸಣ್ಣ ಮನೆ ನಿರ್ಮಿಸಿ ಅವರ ತಾಯಿ ,ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಕಷ್ಟದ ಜೀವನ ಸಾಗಿಸುತ್ತಿದ್ದು ಸೇವಾಭಾರತಿ ನಿರ್ಮಿಸಿದ ತಾತ್ಕಾಲಿಕವಾದ ಸೇತುವೆಯಿಂದ ಮಳೆಗಾಲದಲ್ಲು ಇವರಿಗೆ ಮನೆಯಿಂದ ಹೊರಜಗತ್ತಿಗೆ ಸಂಪರ್ಕ ದೊರೆತಿದೆ. ಇವರ ಮನೆಯ ಸಮೀಪದಲ್ಲಿರುವ ತೋಡು ಮಳೆಗಾಲದಲ್ಲಿ ತುಂಬಿ ಹರಿದಾಗ ಈ ಮನೆಯವರಿಗೆ ಸಮೀಪದ ಮೂಲಮಠಂ ಎಂಬಲ್ಲಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲ ಮುಗಿದ ನಂತರ ನೀರಿನ ಹರಿವು ಕಡಿಮೆಯಾದ ನಂತರವೇ ಇವರು‌ ಇನ್ನೊಂದು ಭಾಗಕ್ಕೆ ಹೋಗುತ್ತಿದ್ದರು.

ಈ ಕುಟುಂಬದ ಕಷ್ಟದ ಪರಿಸ್ಥಿತಿಯನ್ನು ತಿಳಿದ ಸೇವಾಭಾರತಿಯ ಕಾರ್ಯಕರ್ತರು ಬಿದಿರಿನ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಟ್ಟರು. ಸೇವಾಭಾರತಿಯ ಕಾರ್ಯಕರ್ತರ ಜೊತೆ ಭಾಜಪ ದ ಕಾರ್ಯಕರ್ತರು ಕೈ ಜೋಡಿಸಿದ್ದರು. ಈ ಸೇತುವೆ ನಿರ್ಮಾಣದಿಂದಾಗಿ ಈ ಕುಟುಂಬಕ್ಕೆ ಮಳೆಗಾಲದಲ್ಲಿಯೂ ಅಗತ್ಯ ಕೆಲಸಕ್ಕೆ ಹೊರಗಿನ ಸಂಪರ್ಕ ಸಿಕ್ಕುವಂತಾಗಿದೆ.

Seva Bharati builds a bamboo bridge in a Kerala village to connect to the outside world during rainy season

Source: Organiser

The villagers near Moolamattom in Kerala are faced with a unique problem every year. The village is situated in Arappuzhalam panchayat in Idukki district of Kerala is surrounded by forests all around. Every year during the rainy season the water level raises and consequently the area around the village become difficult to tread, especially for the aged and the children. The village is practically cut-off from the outside world.

This year too as continuous rains lashed the region, several houses on the outskirts of Moolamattom were cutoff from the outside world. The area being a forested one with rocky terrain, it also becomes slippery and dangerous to walk. For several months, buying necessary goods and other essentials would become difficult for many living on the outskirts.

Many like Sunny are cut off from their families who has constructed a small house on the outskirts of the village. He stays with his aged mother, wife and three children but during rainy season they were unable to travel to the nearby town of Moolamattom to buy necessary items. He was also unable to go to his work place in the town during rainy season as they were cut-off.

Volunteers of Seva Bharati came to know about their difficulty they faced during the rainy season. A Seva Bharati team visited the village and arranged for the necessary materials to build a temporary bamboo bridge. The volunteers built the bamboo bridge which enables those on the outskirts to walk to the nearest town.

Every year, people like Sunny were forced to commute to the nearest town only after the rains stopped and the water levels subsided. However this year due to the efforts of the volunteers of Seva Bhratai, many like Sunny have a bridge on which they can commute and buy essential items from Moolamattom. Thanks to the bridge, Sunny can now go to the town to his workplace too.

The service of the volunteers of Seva Bharati has been acknowledged and appreciated by the people of Moolamattom and the surrounding villagers.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ : ಸಹ ಸರಕಾರ್ಯವಾಹ, ಡಾ. ಮನಮೋಹನ್ ವೈದ್ಯರ ಲೇಖನ

Mon Jul 13 , 2020
ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ ಲೇಖನ: ಡಾ. ಮನಮೋಹನ್ ವೈದ್ಯ. ಸಹ ಸರಕಾರ್ಯವಾಹ ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ಕನ್ನಡ ಲೇಖನ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೇಖನದ ಆಂಗ್ಲ ಮೂಲವನ್ನು ಇಲ್ಲಿ ಓದಬಹುದು. ಕೊರೋನಾ ಸಾಂಕ್ರಾಮಿಕ ರೋಗದೊಂದಿಗಿನ ಯುದ್ಧದ ಮಧ್ಯೆಯೇ ಲಡಾಖಿನ ಗಾಲ್ವಾನ್ನಿಲ್ಲಿನ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರ ಬಲಿದಾನದ ಸುದ್ದಿ ದೇಶಾದ್ಯಂತ ಕಳವಳ ಸೃಷ್ಟಿ ಮಾಡಿತು. 1962 ರ ನಂತರ ಮೊದಲ ಬಾರಿಗೆ ಸಂಭವಿಸಿದ ಚೀನಾದೊಂದಿಗಿನ […]