ನವದೆಹಲಿ: ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವುದರತ್ತ ಗಮನ ಹರಿಸಿ ಮತ್ತು ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದರು. ಇಂದು, ಜೂನ್ 24ರಂದು ‘ಟಾಯ್‌ಕಥಾನ್-2021ರ ಸ್ಪರ್ಧಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ನಮ್ಮ ಗಮನವು ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಇರಬೇಕು. ಭಾರತೀಯತೆಯ ಪ್ರತಿಯೊಂದು ಅಂಶವನ್ನೂ ಆಸಕ್ತಿದಾಯಕ, ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುವಂತಹ ಆಟಿಕೆಗಳನ್ನು ಸಿದ್ಧಪಡಿಸಿ’ ಎಂದರು. ಪ್ರಸ್ತುತ ಸುಮಾರು […]

ಈಚೆಗೆ ನಿಧನರಾದ ಕವಿ ಸಿದ್ದಲಿಂಗಯ್ಯ ಅವರ ಕುರಿತು ಅನೇಕ ಸಾಹಿತಿಗಳು, ಸಂಘಸಂಸ್ಥೆಗಳು ನುಡಿನಮನ ಸಲ್ಲಿಸಿ ಅವರ ಕುರಿತು ಒಂದು ಚಿತ್ರಣವನ್ನು ಕಟ್ಟಿಕೊಟ್ಟಿವೆ. ಈ ಒಮ್ಮುಖದ  ಚಿತ್ರಣಕ್ಕಿಂತ ಭಿನ್ನವಾಗಿಯೂ ಅವರು ಬದುಕಿದ್ದರು ಅನ್ನುವುದು ಗಮನಿಸತಕ್ಕ ಸಂಗತಿಯೆನಿಸುತ್ತದೆ. ಅವರೇ ಅಲ್ಲಿಲ್ಲಿ ಪದೇಪದೇ ಹೇಳಿಕೊಂಡಿರುವ ಅವರ ಬಾಲ್ಯದ ಕೆಲವು ಪ್ರಸಂಗಗಳನ್ನು ಈ ನಿಟ್ಟಿನಲ್ಲಿ ಇಲ್ಲಿ ಉಲ್ಲೇಖಿಸಬಹುದು. ಮೊದಲೆರಡು ಅನುಭವಗಳು ಆಗ ಅವರಿಗಿನ್ನೂ ನಾಲ್ಕರ ವಯಸ್ಸು. ಮಾಗಡಿಯ ಸಮೀಪದ ಹಳ್ಳಿಯ ಅವರ ಮನೆಯ ಪಕ್ಕದಲ್ಲಿ ಇದ್ದ […]

ಭಾರತದ ಖ್ಯಾತ ಉದ್ಯಮಿಗಳಲ್ಲೊಬ್ಬರಾಗಿದ್ದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ ಎಂದು ಹರೂನ್ ಮತ್ತು ಎಡೆಲ್‌ಗಿವ್ ಪ್ರತಿಷ್ಠಾನಗಳು ತಿಳಿಸಿವೆ. ಈ ಎರಡು ಸಂಸ್ಥೆಗಳು ಜೊತೆಗೂಡಿ ಜಗತ್ತಿನ ಐವತ್ತು ಜನ ಅತಿ ದೊಡ್ಡ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದವು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರೂನ್‌ ಸಂಸ್ಥೆಯ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್ ಹೂಗ್‌ವರ್ಫ್ ಅವರು “‘ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಅಮೆರಿಕ ಹಾಗೂ ಯುರೋಪಿನ […]

ಶಿವಾಜಿ ಮಹಾರಾಜರ ಜನನ ಹಾಗೂ ಅವರು ಶೂನ್ಯದಿಂದ ಪ್ರಾರಂಭಿಸಿ ಆಕ್ರಮಣಕಾರಿಗಳ ಅಹಂಕಾರಕ್ಕೆ ಕೊಳ್ಳಿಯಿಟ್ಟು ಹಿಂದವಿ ಸ್ವರಾಜ್ಯ ವನ್ನು ಕಟ್ಟಿ ಬೆಳೆಸಿದ ರೀತಿಯನ್ನು ಇತಿಹಾಸಕಾರರು ‘ಯುಗಾವತಾರ’ ಎಂದೇ ದಾಖಲಿಸಿದರು. ಅವರ ಕಾಲಾನಂತರ ಸುಮಾರು ಇನ್ನೂರ ಹತ್ತು ವರ್ಷಗಳ ನಂತರ ಜನಿಸಿದ ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು. ಇವರನ್ನು ‘ಯುಗಪುರುಷ’ ಅಂತ ಕರೆದರು. ಈ ಇಬ್ಬರು ಮಹಾಪುರುಷರು ನಡೆದ ದಾರಿ, ಅವರಿಬ್ಬರ ಗುರಿ ಮತ್ತು ಕಾರ್ಯಶೈಲಿ ಇವುಗಳಲ್ಲಿ […]

ಜೂನ್ 20: ಸ್ವದೇಶಿ ಜಾಗರಣ್ ಮಂಚ್ ಇಂದು ವಿಶ್ವ ಜಾಗೃತಿ ದಿವಸ್ ಅನ್ನು ವಿಶಿಷ್ಟವಾಗಿ ಆಚರಿಸಿತು. ಪ್ರಪಂಚದ ಜನರು ಜಾಗೃತರಾಗಿದ್ದರೆ ಭವಿಷ್ಯದಲ್ಲಿ ಪ್ರಪಂಚ ಎದುರಿಸಬೇಕಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ . ಕರ್ನಾಟಕ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಕಡೆ ಸಾವಿರಾರು ಸ್ವದೇಶೀ ಜಾಗರಣ ಮಂಚ್ ಕಾರ್ಯಕರ್ತರು ಪ್ಲಕಾರ್ಡನ್ನು ಹಿಡಿದುಕೊಂಡು ‘ಪೇಟೆ೦ಟ್ ಮುಕ್ತ ವಾಕ್ಸಿನ್’ ಅಭಿಯಾನವನ್ನು ಆಯೋಜಿಸಿತ್ತು, ಈಗಾಗಲೆ ಸ್ವದೇಶಿ ಜಾಗರಣ್ ಮಂಚ್ ಆಯೋಜಿಸಿರುವ ಪೇಟೆ೦ಟ್ ಮುಕ್ತ ಆನ್ ಲೈನ್ ಅಭಿಯಾನದಲ್ಲಿ […]

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಯೋಧರಿಗೆ ಯುವ ಬರಹಗಾರರಿಂದ ಗೌರವ ನಮನ ಸಲ್ಲಿಸುವ ಹಾಗೂ ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಯುವ-ಪ್ರಧಾನಮಂತ್ರಿಗಳ ಕಾರ್ಯಕ್ರಮ’ವನ್ನು ಆಯೋಜಿಸಿದೆ. ದೇಶದಲ್ಲಿ ಓದುವುದು, ಬರೆಯುವುದು ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ಭಾರತದ ಬರಹಗಳನ್ನು ಜಾಗತಿಕವಾಗಿ ಜನಪ್ರಿಯಗೊಳಿಸುವ ಉದ್ದೇಶದಿಂದ ಯುವ ಮತ್ತು ಉದಯೋನ್ಮುಖ ಲೇಖಕರಿಗೆ (3೦ ವರ್ಷದೊಳಗಿನವರು) ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇದಾಗಿದೆ. […]

ಬೆಂಗಳೂರು, ಜೂನ್ 14: ರಾಷ್ಟ್ರೋತ್ಥಾನ ಪರಿಷತ್ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ಜೂನ್ 15ರಿಂದ 20ರ ತನಕ ಅಂತರ್ಜಾಲ  ಉಪನ್ಯಾಸ  ಸರಣಿಯನ್ನು ಆಯೋಜಿಸಿದೆ  ಎಂದು ರಾಷ್ಟ್ರೋತ್ಥಾನ ಯೋಗ ವಿಭಾಗದ ನಿರ್ದೇಶಕರಾದ ಎ. ನಾಗೇಂದ್ರ ಕಾಮತ್ ಅವರು ತಿಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ಕೊರೋನಾ ಕಾರಣದಿಂದ ಆನ್‌ಲೈನ್ ಮೂಲಕ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿಯ […]

ಕರ್ನಾಟಕದ ದಲಿತ ಚಳುವಳಿಯ ಮೊದಲ ಸಾಲಿನ ನಾಯಕರಾಗಿದ್ದ, ಒಳ್ಳೆಯ ಕವಿ, ಲೇಖಕರಾಗಿದ್ದ ಅದೆಲ್ಲಕ್ಕೂ ಮಿಗಿಲಾಗಿ ಹಲವು ವಿಚಾರಧಾರೆಯ ಸಾವಿರಾರು ಕಾರ್ಯಕರ್ತರಿಗೆ ಆತ್ಮೀಯ ಗೆಳೆಯರಾಗಿದ್ದವರು ಡಾ ಸಿದ್ಧಲಿಂಗಯ್ಯ . ವಿದ್ಯಾರ್ಥಿ ದೆಸೆಯಲ್ಲೇ ಮಾರ್ಕ್ಸ್ , ಅಂಬೇಡ್ಕರ್ ಪ್ರಭಾವ ಅವರನ್ನು ಆವರಿಸಿತ್ತು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಬಂದಾಗ ಅವರಿನ್ನೂ ಕನ್ನಡ ಎಂ.ಎ ವಿದ್ಯಾರ್ಥಿ. ಅವರ ಹಾಡುಗಳೆ ಹೋರಾಟಕ್ಕೆ ಸಾವಿರಾರು ಯುವಜನರನ್ನು ಸೆಳೆದಿದ್ದವು . ಕೇವಲ ದಲಿತ ಹೋರಾಟವಷ್ಟೆ ಅಲ್ಲ, […]

ಭಾರತೀಯ ವಿಜ್ಞಾನ-ತಂತ್ರಜ್ಞಾನದ ಅಮೋಘ ಸಾಧನೆಗೆ ಬೆಳಕು ಹಿಡಿದ ಸಂಶೋಧನೆ. ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಗಾಗುವ ಪೂರ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಏನು? ಎಂಬ ಪ್ರಶ್ನೆ ಕೆಲವರಿಗೆ ಕುತೂಹಲವಾಗಿ ಕಾಣಬಹುದು. ಅಷ್ಟಕ್ಕೂ 18ನೇ ಶತಮಾನದ ಭಾರತದಲ್ಲಿ ವಿಜ್ಞಾನವಾಗಲೀ ತಂತ್ರಜ್ಞಾನವಾಗಲೀ ಇದ್ದಿತೇ? ಎನ್ನುವ ಕುಹಕದ ಪ್ರಶ್ನೆಯೂ ಕೆಲವರಲ್ಲಿ ಹುಟ್ಟಬಹುದು. ಯಾಕೆಂದರೆ ನಾವು ಬಹುಕಾಲದಿಂದ ಭಾರತದ ಬಗೆಗೆ ನಕಾರಾತ್ಮಕವಾದ ಚಿತ್ರಣಗಳನ್ನು ನೀಡುವ ಚರಿತ್ರೆಯನ್ನೇ ಓದಿಕೊಂಡು ಬಂದಿದ್ದೇವೆ. ಅದರಲ್ಲೂ ಬ್ರಿಟಿಷರು ತಮ್ಮ […]

ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಶ್ರದ್ಧಾಂಜಲಿ ಸಂದೇಶ. “ಕನ್ನಡದ ಖ್ಯಾತ ಕವಿ ಹಾಗೂ ನನ್ನ ಗೆಳೆಯ ಸಿದ್ದಲಿಂಗಯ್ಯ ಇನ್ನಿಲ್ಲ ಎಂದು ತಿಳಿದು ಮಾತೇ ನಿಂತಂತಾಗಿದೆ. ಅವರ ನಿಧನ ಕನ್ನಡ ನಾಡು-ನುಡಿಗಳಿಗಾದ ಅಪಾರ ನಷ್ಟ; ವೈಯಕ್ತಿಕವಾಗಿ ನನಗೆ ಅತೀವ ಆಘಾತ. ಕೋವಿಡ್ ಮಹಾಮಾರಿಗೆ ಅವರು ಬಲಿಯಾದುದು ಮನವನ್ನು ಕಲಕುತ್ತಿದೆ. ಎಲ್ಲ ವಿಧದ ನೋವನ್ನುಂಡ ಸಮುದಾಯದ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು […]