‘ಕರ್ಣನ್‌’ ಇತ್ತೀಚಿನ ದಲಿತ ಒಡಲಳಾದ ದನಿ ಭೋರ್ಗರಿಸುವ ಚಲನಚಿತ್ರ

ಸಿನಿಮಾ ವಿಮರ್ಶೆ: ಮಹೇಂದ್ರ ಡಿ., ಅಧ್ಯಕ್ಷ – ಕರ್ನಾಟಕ ಲಲಿತಕಲಾ ಅಕಾಡೆಮಿ

ಕರ್ಣನ್‌ ಇತ್ತೀಚಿನ ದಲಿತ ಒಡಲಳಾದ ದನಿ ಭೋರ್ಗರಿಸುವ ದೃಶ್ಯರೂಪಕದ ಚಲನಚಿತ್ರವಾಗಿದೆ. ಇದೊಂದು ತಮಿಳುನಾಡಿನ ಗ್ರಾಮವೊಂದರ ನೈಜ ಘಟನೆಯನ್ನು ಆಧಾರಿಸಿದ್ದು ಅಂತ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಪ್ರಧಾನ ಅಂಶವೇ ಈ ವಿಷಯವಾಗಿದ್ದರೆ ಅದರ ಆಶಯವು ಸ್ವಲ್ಪ ನಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತವೆ.

ನಮ್ಮ ದೇಶದಲ್ಲಿ ದಲಿತರ ಮೇಲಿನ ದಬ್ಬಾಳಿಕೆ, ಆಕ್ರಮಣಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ಹಾಗೆ ಇನ್ನೊಂದೆಡೆ ಬಹು ಸಂಖ್ಯೆಯಲ್ಲಿ ಮೆಲ್ವರ್ಗದವರೂ ದಲಿತರ ಸಂವೇದನೆಗೆ ಮಿಡಿಯುತ ದಲಿತರ ಏಳಿಗೆಯಲ್ಲಿ ಕೈಜೊಡಿಸಿಕೊಂಡು ಬರುತ್ತಿದ್ದಾರೆ. ಒಂಭತ್ತನೇ ಶತಮಾನದಲ್ಲಿ ಶಂಕರಾಚಾರ್ಯರು ಶೂದ್ರನಲ್ಲಿ ಶಿವಸ್ವರೂಪ ಕಂಡು ನಮಸ್ಕರಿಸುವ ಘಟನೆಯಿಂದ ಹಿಡಿದು ಬಾಬಾ ಸಾಹೇಬ್‌ ಡಾ. ಅಂಬೇಡ್ಕರ್‌ ಅವರಿಗೆ ಶಾಲೆಗೆ ಸೇರಿಸಲು ಸ್ವತಃ ತಮ್ಮ ಹೆಸರನ್ನು ನೀಡಿ ಪ್ರೋತ್ಸಾಹಿಸಿದ ಅಧ್ಯಾಪಕರು ಮೆಲ್ವರ್ಗದವರೆ ಆಗಿದ್ದರು. ಮೆಲ್ವರ್ಗದವರೂ ದಲಿತರ ಸಂವೇದನೆ ಅವರ ಶೋಷಣೆಗಳ ಕೊನೆಗೊಳಿಸಿ ಸಮಾನತೆಯನ್ನು ತರುವ ನಿಟ್ಟಿನಲ್ಲಿ ದೇಶದಲ್ಲಿ ಬಹುದೊಡ್ಡ ಮಟ್ಟದ ಕೆಲಸಗಳು ನಡೆಯುತ್ತಿರವಾಗಲೇ ಈ ಶೋಷಣೆಯ ಕಂದಕವನ್ನು ಕಡಿಮೆಗೊಳಿಸದೇ ಅದರ ಅಂತರವನ್ನ ಹಿಗ್ಗಿಸುತ್ತಾ ತಮ್ಮ ಬೆಳೆ ಬೇಯಿಸಿಕೊಳ್ಳುವಂಥವರೂ ಅತ್ತ ದಲಿತರಿಗೂ ಸಹಕಾರಿಯಾಗದೇ ಇತ್ತ ಸಮಾಜದ ಈ ಪಾಪದ ಅಂಟು ಕೊನೆಯಾಗುವ ಬಗ್ಗೆ ಗಮನವೇ ನೀಡದ ನಾಯಕತ್ವ ವಹಿಸಿದವರಲ್ಲಿ ಕೆಲವರು ಇದ್ದಾರೆ ಎಂಬುದು ನಮ್ಮ ಅರಿವಿಗೆ ಇರುವ ಸಂಗತಿಯೇ ಆಗಿದೆ..

ಡಾ. ಅಂಬೇಡ್ಕರ್‌ ಅವರು ಚುನಾವಣೆ ನಿಂತು ಸೋತಾಗ, ಆಗ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಾರಾಯಣ ಸದೋಬ ಕಜ್ರೋಲ್ಕರ್‌ ಸ್ವತಃ ಅಂಬೇಡ್ಕರ್‌ ಅವರ ಆಪ್ತರೆ ಆಗಿದ್ದರು, ಮತ್ತು ಮೆಹಾರ್‌ ಪಂಗಡಕ್ಕೆ ಸೇರಿದವರೆ ಆಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿಯಲ್ಲಿದ್ದ ಕಜ್ರೋಲ್ಕರ್‌ ಅಧಿಕಾರ ಹಿಡಿವ ಸಂದರ್ಭದಲ್ಲಿ ಸ್ವತಃ ಅಂಬೇಡ್ಕರ್‌ ಅವರನ್ನು ಧಿಕ್ಕರಿಸಿದರು. ಅಂಬೇಡ್ಕರ್‌ ಅವರ ವಿರುದ್ಧ ಗೆಲುವು ಮಾತ್ರವಲ್ಲ ಮುಂದೆ 1970ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ದಲಿತರು ದಲಿತರಾಗಿಯೇ ಉಳಿಯಬೇಕೆ!

ಅದೇನೆ ಇರಲಿ ‘ಕರ್ಣನ್ʼ‌ ಚಲನಚಿತ್ರಕ್ಕೆ ಸ್ಫೂರ್ತಿಯಾದ 1995ರಲ್ಲಿ ನಡೆದ ಕೊಡಿಯಾಂಕುಲಂ ಘಟನೆ ಆಧಾರಿಸಿ. ‘ಕರ್ಣನ್‌ʼ ಚಿತ್ರ ನೈಜ ಘಟನೆ ಯೊಂದನ್ನು ಆಧಾರಿಸಿದ್ದು ಅಂದರು ಇಲ್ಲಿ ಕೊಂಚ ಭಿನ್ನ ಆಯಾಮ ನೀಡಿ ದಲಿತ ನೋವು ಹತಾಶೆಗಳನ್ನು ತಡೆ ಹಿಡಿದ ದುಃಖ-ದುಮ್ಮಾನಗಳ ಧ್ವನಿಯ ಭೋರ್ಗರೆತವನ್ನು ಬಹು ಪರಿಣಾಮಕಾರಿಯಾಗಿ ನಿರ್ದೇಶಕ ಮಣಿ ಸೆಲ್ವರಾಜ್‌ ಕಟ್ಟಿಕೊಟ್ಟಿದ್ದಾರೆ. ಕತ್ತೆಯೊಂದು ಕಾಲಿಗೆ ಕಟ್ಟಿದ ಹಗ್ಗವನ್ನು ತುಂಡರಿಸುವ ಮೂಲಕ ದಾಸ್ಯ ಸಂಕೋಲೆ ಹರಿದುಕೊಂಡು ಮುನ್ನುಗ್ಗವ ಸಾಂಕೇತಿಕ ದೃಶ್ಯರೂಪಕ ಗಮನ ಸೇಳೆಯುತ್ತದೆ.

ಕರ್ನನ್ ನಿರ್ಭಿತಿಯ ಹಳ್ಳಿಯುವಕ, ತನ್ನ ಗ್ರಾಮದ ಜನರ ಹಕ್ಕುಗಳಿಗಾಗಿ ಹೋರಾಡಬೇಕು ದಶಕಗಳಿಂದ ತುಳಿತಕ್ಕೊಳಗಾದ ಅಂಚಿನಲ್ಲಿರುವ ತನ್ನ ಸಮುದಾಯಕ್ಕೆ ರಕ್ಷಿಸಬೇಕೆಂದು ತುಡಿತದಲ್ಲಿರುವ ಯುವಕ. ಮುಂಗೋಪಿ, ಆದರೆ ತನ್ನ ಹಳ್ಳಿಯ ಜನರನ್ನು ಪ್ರಬಲ ಜಾತಿ ಗುಂಪುಗಳು ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ನೆರವಿನಿಂದ ಅವರನ್ನು ನಿಗ್ರಹಿಸಲು ಉದ್ದೇಶಿಸಿದೆ ಅದಕ್ಕಾಗಿ ಆತ ಸೈನ್ಯ ಸೇರಲು ಆಯ್ಕೆಯಾದರೂ ಆ ಅವಕಾಶವನ್ನು ಬದಿಗೊತ್ತಿ ತನ್ನ ದಾಸ್ಯ ಸಂಕೋಲೆಗಳ ತುಂಡರಸಿ ಹೋರಾಟಕ್ಕೆ ಅಣಿಯಾಗುತ್ತಾನೆ. ಹೋರಾಟಕ್ಕೆ ಧುಮುಕುತ್ತಾನೆ.‌ ಆಪ್ತವೇನಿಸುವ ಧನುಷ್‌ ನಟನೆ ಚಿತ್ರದ ಪ್ರಬಲ ಹೈಲೈಟ್‌,

ಕುಂತಿಯ ಮಕ್ಕಳಾದ ಪಾಂಡವರು ದ್ರೌಪದಿಯನ್ನು ಸಮಾನವಾಗಿ ಹಂಚಿಕೊಂಡರು, ಸೂತಪುತ್ರನೆಂದು ಹೊರಗಿಡಲಾದ ಕರ್ಣ ಕುಂತಿಯ ಸುತನೂ ಹೌದು, ದ್ರೌಪದಿ ಈ ಚಿತ್ರದಲ್ಲಿ ಕರ್ಣನಿಗೆ ನಾಯಕಿ, ಆ ಮೂಲಕ ಸಮಾನತೆಯ ಆಶಯವನ್ನು ಸೂಕ್ಷ್ಮತೆಯನ್ನು ಗಂಭೀರವಾಗಿ ಕದಕುತ್ತದೆ. ಚಿತ್ರಕಥೆಯೂ ಬಹುಪಾಲು ಜಾನಪದ ಮೋಟಿಫ್‌, ಸಂಕೇತಗಳ ಮೂಲಕವೆ ಚಿತ್ರಿಸಿರುವ ರೀತಿ ನಿಮ್ಮ ಮನರಂಜಿಸುತ್ತದೆ. ನಮ್ಮಲ್ಲಿ ಚಿತ್ರಕಲೆ, ಸಿನಿಮಾ ಎರಡೂ ಆಯಾಮದಲ್ಲಿ ದುಡಿಸಿಕೊಳ್ಳುವ ನಿರ್ದೆಶಕರು ಮೊಟಿಫ್‌ ಬಳಕೆ, ಜಾನಪದ ಸಂಕೇತ, ಚಿಹ್ನೆಗಳನ್ನು ಬಳಸಿದ ಬಗೆ ಗಮನಾರ್ಹ. ಚಿತ್ರದುದ್ದಕ್ಕೂ ವಿವಿಧ ಅಂಶಗಳನ್ನು ಮತ್ತು ಘಟನೆಗಳನ್ನು ಸೃಜನಶೀಲ ರೀತಿಯಲ್ಲಿ ರೂಪಿಸಿರುವ ಕಲಾನಿರ್ದೇಶಕ ರಾಮಲಿಂಗಮ್‌ ಕೆಲಸ ನಮ್ಮ ಮನಸ್ಸ ತಟ್ಟುತ್ತದೆ.

ಈ ಕಥೆಯು ಅವರ ಹೋರಾಟಗಳು, ಅನ್ಯಾಯ ಮತ್ತು ಅಂತಿಮವಾಗಿ ನಾಯಕ ಮತ್ತು ಇಡೀ ಹಳ್ಳಿಯಿಂದ ಜಾತಿವಾದ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧದ ಏರಿಕೆಯನ್ನು ಕುರಿತು ಮಾನವೀಯ ಸ್ಪಂಧನವುಳ್ಳ ನಮ್ಮಂಥವರ ಕಣ್ಣಂಚು ತೇವಗೊಳಿಸುತ್ತದೆ. ಈ ವ್ಯವಸ್ಥೆಯನ್ನು ಕೊನೆಗಾಣಿಸುವದೆಂತು? ಕಡೆಗೆ ಉಳಿವ ಪ್ರಶ್ನೆ ಮಹಾತ್ಮ ಗಾಂಧಿ, ಬುಧ್ಧ ಅಂಬೇಡ್ಕರ್‌ ನಾಡಿನಲ್ಲಿ ಪ್ರಜಾಪ್ರಭುತ್ವದ ಭದ್ರ ಬುನಾದಿಯಲ್ಲಿ ದಲಿತ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ರೂಪ ಯಾವುದಾಗಬೇಕು, ಆರಿಸಿಕೊಂಡ ಮಾರ್ಗ ಎಲ್ಲಿ ಹೋಗಿ ನಿಲ್ಲಲಿದೆ! ಈ ಎಲ್ಲದರ ಕುರಿತು ಆಲೋಚನೆ ಹಚ್ಚುವ ಈ ಚಿತ್ರವು ನಮ್ಮನ್ನು, ನಮ್ಮ ಸಮಾಜಿಕ ಜವಾಬ್ದಾರಿಯನ್ನೊಮ್ಮೆ ತಡಕಾಡಿಸಿಕೊಳ್ಳುವಂತೆ ಮಾಡುತ್ತದೆ.

* ****

ʼಕರ್ಣನ್ʼ‌ ಚಲನಚಿತ್ರಕ್ಕೆ ಸ್ಫೂರ್ತಿಯಾದ 1995ರಲ್ಲಿ ನಡೆದ ಕೊಡಿಯಾಂಕುಲಂ ಘಟನೆ ವಿವರ: ತೂತುಕುಡಿ ಜಿಲ್ಲೆಯ ಪಲ್ಲರ್ ಜಾತಿಗೆ ಸೇರಿದ 287 ಮನೆಗಳಿಂದ ಕೂಡಿದ ಕೊಡಿಯಾಂಕುಲಂ ಗ್ರಾಮ. ಬ್ರಿಟಿಷರ ಕಾಲದಲ್ಲೆ ನಿರ್ಮಿಸಲಾದ ನೀರಾವರಿ ವ್ಯವಸ್ಥೆಯಿಂದ ಕೃಷಿ ಇಲ್ಲಿ ಪ್ರಧಾನ ಆದಾಯ ಮೂಲವಾಯಿತು. ಜನರ ಜೀವನ ನೆಮ್ಮದಿಗೊಂಡಿತು. ಭಾರತ ಸ್ವಾತಂತ್ರ್ಯ ಬಂದ ನಂತರ ಇಲ್ಲಿನ ನೀರಾವರಿ ವ್ಯವಸ್ಥೆ ಇನ್ನಷ್ಟು ಅಭಿವೃದ್ದಿಗೊಂಡು ಕೃಷಿ ವರಮಾನ ಹೆಚ್ಚಿ ಗ್ರಾಮಸ್ಥರು ಸಮೃದ್ಧಿ ಬದುಕು ಕಂಡುಕೊಂಡರಲ್ಲದೆ, ಗ್ರಾಮದಲ್ಲಿ ಅಭಿವೃದ್ದಿಯ ಜೊತೆಗೆ ವಿದ್ಯಾವಂತರ ಸಂಖ್ಯೆ ಹೆಚ್ಚಿತು. ಹೆಚ್ಚಿನ ಓದು, ಉದ್ಯೋಗ ಅರಸಿ ಹೊರದೇಶಗಳಿಗೂ ಹೋದವರು ಅರಬ್ ದೇಶಗಳಲ್ಲಿ ಉದ್ಯೋಗ ಕಂಡುಕೊಂಡವರೇ ಹೆಚ್ಚು. ತಮ್ಮ ದುಡಿಮೆಯ ಹಣ ಹಳ್ಳಿಗೆ ಕಳಿಸತೊಡಗಿದ ಪರಿಣಾಮ ಹಳ್ಳಿಯ ಜನರಲ್ಲಿ ಹಣ, ಚಿನ್ನ,ಆಸ್ತಿಪಾಸ್ತಿಗಳು ಸಹಜವಾಗಿಯೇ ಹೆಚ್ಚಾದವು.

ಹ್ಯೂಮನ್ ರೈಟ್ಸ್ ವಾಚ್ ವರದಿ ಮಾಡಿರುವಂತೆ 1980ರಿಂದಲೂ ಕುವೈತ್, ದುಬೈ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಕೆಲಸ ಮಾಡುವ ಕುಟುಂಬ ಸದಸ್ಯರಿಂದ ಹಣಕಾಸಿನ ಸಂಪನ್ಮೂಲಗಳ ಒಳಹರಿವಿನಿಂದ ಗ್ರಾಮದ ದಲಿತರು ಲಾಭ ಪಡೆದಿದ್ದಾರೆ. ಹಾಗೆ ನೆಮ್ಮದಿ ಮತ್ತು ಸಮೃದ್ಧಿ ಜೀವನ ನಡೆಸುತ್ತಿದ್ದ ಈ ದಲಿತ ಕುಟುಂಬಗಳ ಮೇಲೆ ಮೇಲ್ವರ್ಗದ ಕಣ್ಣು ಬಿತ್ತು. ದಲಿತರನ್ನು ಮಟ್ಟ ಹಾಕಿಯೇ ವಿಕೃತ ಆನಂದ ಪಡುವ ಒಂದು ವರ್ಗಕ್ಕೆ ಒಂದು ನೆಪ ಬೇಕಾಗಿತ್ತು. ಈ ಪ್ರದೇಶದ ದಲಿತರ ವಿರುದ್ಧವೂ ತಾರತಮ್ಯವು ಮೇಲುಗೈ ಸಾಧಿಸಿತು, ಹಳ್ಳಿಯ ಅನೇಕ ದೇವಾಲಯಗಳು ಮತ್ತು ಬಾವಿಗಳಲ್ಲಿ ಪ್ರವೇಶಿಸುವುದನ್ನು ತಡೆಯಲಾಯಿತು, ಅವರಿಗೆ ಚಹಾ ಅಂಗಡಿಗಳಲ್ಲಿ ಪ್ರತ್ಯೇಕ ಲೋಟಗಳನ್ನು ಇರಿಸಲಾಯಿತು. ಮರಾವರ್ ಪ್ರಾಬಲ್ಯದ ಬೀದಿಗಳಲ್ಲಿ ನಡೆದು ಹೋಗಲು ಅವರಿಗೆ ಅವಕಾಶವಿರಲಿಲ್ಲ ಮತ್ತು ನೆಲದ ಮೇಲೆ ಕುಳಿತುಕೊಳ್ಳುವಂತೆ, ತಲೆಗೆ ರುಮಾಲು ಸುತ್ತದಂತೆ ನಿಯಮಗಳನ್ನು ಹೇರಲಾಯಿತು. ಗ್ರಾಮ ಪರಿಷತ್ ಸಭೆಗಳಲ್ಲಿ. ದಲಿತರು ಪ್ರತಿಪಾದಿಸಿದಾಗ ಅವರು ತಾರತಮ್ಯವನ್ನು ವಿರೋಧಿಸಲು ಪ್ರಾರಂಭಿಸಿದರು.

ಜುಲೈ 26, 1995 ರಂದು, ದಲಿತ ಬಸ್ ಚಾಲಕ ಮತ್ತು ಮರಾವರ್ ಜಾತಿಗೆ ಸೇರಿದ ಕೆಲವು ಶಾಲಾ ವಿದ್ಯಾರ್ಥಿಗಳ ನಡುವೆ ಜಗಳ ಪ್ರಾರಂಭಗೊಂಡು, ಬಸ್ ಚಾಲಕನನ್ನು ಮಾರವರ್‌ಗಳು ಥಳಿಸಿದರು. ಈ ಘಟನೆಯು ಮಾರವರ್‌ಗಳ ಪ್ರಾಬಲ್ಯವಿರುವ ವೀರಸಿಗಮಣಿ ಗ್ರಾಮದ ಮೇಲೆ ದಾಳಿ ಮಾಡಲು ಕಾರಣವಾಯಿತು. ನಿರಂತರವಾಗಿ ಗ್ರಾಮದ ಮೇಲೆ ದಾಳಿ ನಡೆದಾಗಲು ಪೋಲಿಸರು ಮೂಕಪ್ರೇಕ್ಷಕರಾಗಿದ್ದರು. ಕೊಡಿಯಾಂಕುಲಂ ಗ್ರಾಮಸ್ಥರ ಏಳಿಗೆಯಿಂದ ಸಹಿಸಲಾಗದೆ ಕಂಗೆಟ್ಟ ಮೇಲ್ವರ್ಗದವರು ದಲಿತರು ಮತ್ತು ಅವರ ಆಸ್ತಿಗಳ ವಿರುದ್ಧ ಹಿಂಸಾಚಾರ ಒಂದು ವಾರದವರೆಗೆ ನಡೆಯಿತು.

ಇಡಿ ಹಳ್ಳಿಯ ಸಂಪತ್ತನ್ನು ಕೊಳ್ಳೆ ಹೊಡೆಯುವ ಯೋಜನೆ ಆಗಿದ್ದಂತೆ ಕಾಣುವ ಘಟನೆ ಆಗಸ್ಟ್ 31, 1995 ರಂದು ಜರುಗಿತು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಅಂದು ಥೇವರ್ ಅಧಿಕಾರಿಗಳ ಸೂಚನೆಯ ಮೇರೆಗೆ 600 ಪೊಲೀಸರು ಕೊಡಿಯಾಂಕುಲಂ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಗಳನ್ನು ನಾಶಪಡಿಸಿದರು. ಟೆಲಿವಿಷನ್‌ಗಳು, ಟೇಪ್ ರೆಕಾರ್ಡರ್‌ಗಳು, ಅಭಿಮಾನಿಗಳು, ಹೊಲಿಗೆ, ಮೋಟಾರ್‌ ಸೈಕಲ್‌ಗಳು, ಯಂತ್ರಗಳು, ಟ್ರಾಕ್ಟರುಗಳು, ಕೃಷಿ ಉಪಕರಣಗಳು ಮತ್ತು ಆಹಾರ ಧಾನ್ಯ ಸಂಗ್ರಹಣೆಗಳು. ಅವರು ವಿದ್ಯಾವಂತ ದಲಿತ ಯುವಕರ ಪಾಸ್‌ಪೋರ್ಟ್‌ಗಳನ್ನು ದೀಪೋತ್ಸವದಲ್ಲಿ ಬಟ್ಟೆಯೊಂದಿಗೆ ಸುಟ್ಟುಹಾಕಿದರು. ಹಳ್ಳಿಯಲ್ಲಿರುವ ಏಕೈಕ ಬಾವಿಯು ವಿಷಪೂರಿತಗೊಳಿಸಲಾಯಿತು. ಅವರು ಮಹಿಳೆಯರಿಗೆ ಕಿರುಕುಳ ನೀಡಿ ಹಿರಿಯರ ಮೇಲೆ ಹಲ್ಲೆ ನಡೆಸಿದರು. ಬೆಳಿಗ್ಗೆ 10.45 ಕ್ಕೆ ದಾಳಿ ಪ್ರಾರಂಭವಾಯಿತು ಮತ್ತು ಮಧ್ಯಾಹ್ನ 3.15 ರವರೆಗೆ ಮುಂದುವರೆಯಿತು. ಹಲವಾರು ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ಸಹ ಪೊಲೀಸರು ತೆಗೆದುಕೊಂಡಿದ್ದಾರೆ. ಪಲ್ಲರ್‌ಗಳ ವಸ್ತು ಸಮೃದ್ಧಿಯನ್ನು ಗುರಿಯಾಗಿಸಲು ಪೊಲೀಸ್ ದಾಳಿಯಾಗಿದ್ದು ಎಂದು ವರದಿ ಹೇಳುತ್ತವೆ.

ಇಡಿ ರಾಷ್ಟ್ರದ ಗಮನ ಸೆಳೆದ ಈ ಘಟನೆಯನ್ನು ಕುರಿತು ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿತು. ಘಟನೆಯಲ್ಲಿ ಹಾನಿಗೀಡಾದವರಿಗೆ ನೆರವು ನೀಡಲು ಸುಮಾರು ₹ 17 ಲಕ್ಷ ಪಾವತಿಸಲು ತಮಿಳುನಾಡು ಸರ್ಕಾರ ಆದೇಶಿಸಿದೆ. ಮಾಜಿ ಜಿಲ್ಲಾ ನ್ಯಾಯಾಧೀಶರಾದ ಪಿ. ಗೋಮತಿನಾಯಗಂ ಅವರನ್ನು ಏಕ-ಸದಸ್ಯರ ತನಿಖಾ ಆಯೋಗ ಎಂದು ಸರ್ಕಾರ ನೇಮಿಸಿತು. ಗಮತಿನಾಯಗಂ ಅವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಅವರು ಕೊಡಿಯಾಂಕುಲಂನಲ್ಲಿ ಕೇವಲ ಒಂದು ಮನೆಯ ಬಗ್ಗೆ ತನಿಖೆ ನಡೆಸಿದರು ಮತ್ತು ಜನರು ಆಯೋಗವನ್ನು ಬಹಿಷ್ಕರಿಸುತ್ತಿದ್ದಾರೆಂದು ಹೇಳಿದಾಗ ತಕ್ಷಣ ಹೊರಟುಹೋದರು.

ಸಮಸ್ಯೆ ಪರಿಹರಿಸಲು ಸ್ವತಃ ಸರ್ಕಾರವೇ ಆಸಕ್ತಿ ವಹಿಸಿದ್ದರೂ ಗ್ರಾಮಸ್ಥರ ನಾಯಕತ್ವ ವಹಿಸಿದ್ದ ಕೆಲವರು ಆಯೋಗವನ್ನು ಒಪ್ಪದಂತೆ, ಸರ್ಕಾರದ ವಿರುದ್ದ ಸದಾ ನಿಲ್ಲುವಂತೆ ಗ್ರಾಮಸ್ಥರ ಮನಸ್ಸನ್ನು ಪರಿವರ್ತಿಸಲಾಯಿತು. ಮುಂದೆ ರಾಜಕೀಯ ಬದಲಾವಣೆಯಾಗಿ ಆ ಪ್ರದೇಶದ ಶಾಸಕರಾಗಿದ್ದ ಎಐಡಿಎಂಕೆ ಪಕ್ಷದ ಬದಲಿಗೆ ದೇವೇಂದ್ರಕುಲ ವೆಲ್ಲಲಾರ್ ಸಂಗಮ್ ಒಕ್ಕೂಟದ ಅಧ್ಯಕ್ಷ ಕೆ.ಕೃಷ್ಣಸ್ವಾಮಿ ಅವರನ್ನು ಆಯ್ಕೆ ಮಾಡಿದರು. ಆದರೂ ಆ ಗ್ರಾಮಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಕಾರಣ ಕೇವಲ ನಾಯಕತ್ವ ಬದಲಾವಣೆಗಳು ದಲಿತ ಸಮಸ್ಯೆಗಳನ್ನು ಪರಿಹರಿಸಲಾರದಷ್ಟೆ!!.

ಮಹೇಂದ್ರ ಡಿ

ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪತಿಯಂತೆ ನನ್ನ ಜೀವನವೂ ದೇಶಕ್ಕಾಗಿ ಮೀಸಲು ಎಂದು ಪುಲ್ವಾಮ ಹುತಾತ್ಮ ಯೋಧನ ಶವದ ಮುಂದೆ ಪಣ ತೊಟ್ಟಿದ್ದ ಪತ್ನಿ ಇಂದು ಲೆಫ್ಟಿನೆಂಟ್

Thu May 27 , 2021
ಹರಿಯಾಣ: ಭಾರತೀಯರಿಗೆ ಸೇನೆಗೆ ಸೇರುವುದು ಸಂಬಳಕ್ಕಾಗಿಯೋ ಹೊಟ್ಟೆಪಾಡಿಗಾಗಿಯೋ  ಅಲ್ಲ. ಅದು ಅವನ ಜೀವನಧ್ಯೇಯ. ತಾಯಿ ಭಾರತಿಯ ಸೇವೆ ಮಾಡುವ ಅವಕಾಶ. ಇದು ನಮ್ಮ ದೇಶದ ಸೋಕಾಲ್ಡ್ ಬುದ್ದಿಜೀವಿಗಳಿಗೆ ಯಾವಾಗ ಅರ್ಥವಾಗುವುದೋ ತಿಳಿಯದು. ಗಂಡ ಹುತಾತ್ಮನಾದ ದಿನವೇ ಸಂಕಲ್ಪ ಕೈಗೊಂಡು, 2 ವರ್ಷ ಕಳೆಯುವುದರಲ್ಲಿ ಅಂದುಕೊಂಡಿದ್ದನ್ನು ಸಾಕಾರಗೊಳಿಸಿದವರು ಹುತಾತ್ಮ ಯೋಧ ವಿಭೂತಿ ಶಂಕರ್‌ ಅವರ ಪತ್ನಿ ನಿಖಿತಾ ಡೊಂಡಿಯಾಲ. 2019ರ ಫೆಬ್ರುವರಿ 14. ಇಡೀ ದೇಶ ಬೆಚ್ಚಿ ಬೀಳುವಂಥ ಘಟನೆ ಪುಲ್ವಾಮಾದಲ್ಲಿ […]