ಗೋವು ರೈತನಿಗೆ ಮಾತ್ರ ತಾಯಿಯೇ?

ಗೋಸಂತತಿಯ ಉಳಿವಿಗೆ ಸರ್ಕಾರದ ಕಾನೂನು ಮಾತ್ರ ಸಾಲದು, ಸಮಾಜದ ಬೆಂಬಲವೂ ಬೇಕು

ಬೀದಿನಾಯಿ / ಬೆಕ್ಕುಗಳಿಗೆ ತೊಂದರೆ ಮಾಡಿದರೆ ಅಥವಾ ಸಾಕಿದ ನಾಯಿ ಮುದಿಯಾಯಿತು ಅಂತ ಅದನ್ನು ಕಟುಕರಿಗೆ ಮಾರಿದರೆ, ಮನೆ ಮುಂದೆ ಪ್ರಾಣಿಪ್ರಿಯರು ಘೇರಾವ್ ಹಾಕಿ ಘೋಷಣೆ ಕೂಗಿ ಪ್ರತಿಭಟಿಸುತ್ತಾರೆ. ಕಾಡಿನಲ್ಲಿ ಬೇಟೆಯಾಡಿದರೆ ನಿಮಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ. ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಪ್ರಾಣಿಹಿಂಸೆ. ಇದೆಲ್ಲದರ ವಿರುದ್ಧ ಕಠಿಣ ಕಾನೂನು ಬೇಕೇ ಬೇಕು. ಆದರೆ ಗೋಹತ್ಯೆ ನಿಷೇಧ ಕಾನೂನು ಅಂದ ಕೂಡಲೇ ಪ್ರಾಣಿಪ್ರಿಯರೆಲ್ಲ ಆಹಾರಪ್ರಿಯರಾಗುತ್ತಾರೆ. ಪ್ರತಿ ಪ್ರಾಣಿಗೂ ಜೀವಿಸುವ ಹಕ್ಕಿದೆ ಅಂತ ಕೂಗಾಡುತ್ತಿದ್ದವರೆಲ್ಲಾ, ಆಹಾರ ನಮ್ಮ ಹಕ್ಕು ಅಂತಾರೆ. ಇದು ನಮ್ಮ ಹಕ್ಕಲ್ಲ, ಪ್ರಕೃತಿ ನಮಗೆ ನೀಡುವ ಭಿಕ್ಷೆ. ಹೊಟ್ಟೆ ತುಂಬಿದ ಮೇಲೆ ನಮ್ರತೆಯಿಂದ ತಲೆಬಾಗಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಬೇಕೇ ಹೊರತು ದೇವರು ಪ್ರತಿಯೊಂದನ್ನು ಸೃಷ್ಟಿ ಮಾಡುವುದು ಮನು?ನ ಅನುಕೂಲಕ್ಕೆ ಅನ್ನುವ ಅಹಂಕಾರ ಬೇಡ.

ಗೋವುಗಳಿಗೆ ಸ್ವಲ್ಪ ವಯಸ್ಸಾದರೆ ಸಾಕು, ಅವುಗಳನ್ನು ಕಸಾಯಿಖಾನೆಗೆ ದೂಡಿ ಕೈ ತೊಳೆದುಕೊಳ್ಳುವವರೇ ಹೆಚ್ಚು. ಇಲ್ಲಿ ಯಾವ ಪ್ರಾಣಿಪ್ರಿಯರೂ ತಮ್ಮ ಮೂಗು ತೂರಿಸುವುದಿಲ್ಲ. ಯಾಕೆ ಗೊತ್ತೇ? ಅವರ ಕಣ್ಣಿಗೆ ಅದು ಮುದಿ ದನ, ಪ್ರಾಣಿಯಲ್ಲ. ಗೋವಿನ ಬಗ್ಗೆ ಯಾಕೆ ಈ ತಾತ್ಸಾರ?

ಮನುಷ್ಯ ತಾನು ಸಾಕಿದ ಗೋವು ಪದೇ ಪದೇ ಕರು ಹಾಕುವ ಹಾಗೆ ಮಾಡುತ್ತಾನೆ, ಅದೂ ಕೂಡ ಕೃತಕವಾಗಿ ಗರ್ಭಧಾರಣೆ ಮಾಡುವ ಮೂಲಕ. ಆ ಕರುವಿಗೋಸ್ಕರ ಅದು ಕೊಡುವ ಹಾಲನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾನೆ. ಇಲ್ಲಿಗೆ ನಿಲ್ಲುತ್ತಾ ಅವನ ಆಸೆ? ಇಲ್ಲ, ಇನ್ನೂ ಲಾಭ ಬೇಕು, ಮತ್ತೂ ಲಾಭ ಬೇಕು. ಆ ಮುದ್ದು ಕರುವನ್ನು ಕಸಾಯಿಖಾನೆಗೆ ಹೊಡೆಯುತ್ತಾನೆ. ಇಷ್ಟೆಲ್ಲಾ ನೋವು ತಿಂದರೂ, ಆ ಕಾಮಧೇನು ಪುನಃ ಅವನಿಗಾಗಿ ಇನ್ನೊಂದು ಕರು ಹಾಕುತ್ತದೆ. ಆದರೆ, ಮನು? ಅದು ಹಾಲು ಕೊಡುವುದನ್ನು ನಿಲ್ಲಿಸಿದ ಕೂಡಲೇ ಅದನ್ನು ಮಾರುತ್ತಾನೆ. ಸಾಕಲು ಸಾಧ್ಯವಿಲ್ಲ ಎಂಬುದು ಹಲವರಿಗಿರುವ ಕಾರಣ. ಈ ಹಾಲನ್ನು ಸವಿದು ಬೆಳೆಯೋ ಮನು?, ಅದರ ಕೊಂಬಿನಿಂದಲೇ ತಯಾರಿಸಿದ ಪದಾರ್ಥಗಳಿಂದ ತನ್ನ ಮನೆ ಅಲಂಕರಿಸಿಕೊಳ್ತಾನೆ.

ಹೊಸ ಕಾನೂನಿನಲ್ಲಿ ಗೋಹಂತಕರಿಗೆ ಹೆಚ್ಚಿನ ಶಿಕ್ಷೆ

ಇತ್ತೀಚೆಗೆ ರಾಜ್ಯ ಸರ್ಕಾರ ಸಂಪೂರ್ಣ ಗೋಹತ್ಯೆ ನಿ?ಧ ಕಾನೂನನ್ನು ಜಾರಿಗೊಳಿಸಿದೆ. ಇದು ಸ್ವಾಗತಾರ್ಹ. ಇದಕ್ಕೆ ಹಿಂದೂ-ಮುಸ್ಲಿಂ ಬಣ್ಣ ಬಳಿಯುವ ಅವಿವೇಕ ಬೇಡ. ಈ ಕಾಯ್ದೆ ನಮಗೆ ಹೊಸದೇನಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ 1964ರಿಂದಲೇ ಜಾರಿಯಲ್ಲಿತ್ತು. ಅದರ ಪ್ರಕಾರ ೧೨ ವರ್ಷದೊಳಗಿನ ಗೋವುಗಳ ಹತ್ಯೆ ನಿ?ಧಿಸಲ್ಪಟ್ಟಿದೆ. ಪ್ರಾಯವಾದ ಅಥವಾ ನಿರುಪಯೋಗಿ ಜಾನುವಾರುಗಳನ್ನು ಕಸಾಯಿಖಾನೆಗೆ ತರಬಹುದು; ಅನುಮತಿ ಅಗತ್ಯವಿದೆ. ಆದರೆ ಗೋವಧೆ ಪ್ರಕರಣದಲ್ಲಿ ವಿಧಿಸುವ ದಂಡ ಅತ್ಯಲ್ಪ. ಹೊಸ ಕಾನೂನಿನ ಪ್ರಕಾರ ಸಂಪೂರ್ಣವಾಗಿ ಹಸು, ಕರು, ಎಮ್ಮೆ, ಎತ್ತು ಹಾಗೂ ೧೩ ವರ್ಷ ಕೆಳಗಿನ ಕೋಣಗಳ ಹತ್ಯೆ ನಿಷೇಧಿಸಲ್ಪಟ್ಟಿದೆ. ಈ ನಿಯಮ ಉಲ್ಲಂಘಿಸಿ ಗೋಹತ್ಯೆ ಮಾಡಿದ ಅಪರಾಧಿಗಳಿಗೆ ಮೂರರಿಂದ ಏಳು ವರ್ಷ ಸೆರೆವಾಸ ಹಾಗೂ ದಂಡ ೫೦ ಸಾವಿರದಿಂದ ರೂ. ಗಳಿಂದ ಗರಿ? ೫ ಲಕ್ಷ ರೂ. ವಿಧಿಸುವ ಅವಕಾಶವಿದೆ. ಎರಡನೇ ಬಾರಿ ಇದೇ ಅಪರಾಧ ಮಾಡಿದವರಿಗೆ ವಿಧಿಸುವ ಒಂದು ಲಕ್ಷದಿಂದ ಹತ್ತು ಲಕ್ಷ ರೂ. ಗಳವರೆಗೆ ಇರಲಿದೆ.

ಹಳೇ ಕಾನೂನಿನ ಪ್ರಕಾರ “ನಿರುಪಯೋಗಿ” ಗೋವುಗಳನ್ನು ಅನುಮತಿ ಪಡೆದ ನಂತರ ಕಸಾಯಿಖಾನೆಗೆ ತರಬಹುದು. ಈ ಅನುಮತಿಗೋಸ್ಕರ ಗೋವುಗಳ ಕೈಕಾಲು ಮುರಿದೋ ಹಿಂಸಿಸಿಯೋ ಅವುಗಳನ್ನು ಕಸಾಯಿಖಾನೆಗೊಯ್ದ ಪ್ರಕರಣಗಳ ಬಗ್ಗೆ ಓದುತ್ತಲೇ ಇರುತ್ತೇವೆ. ಇದಕ್ಕೆ ಪರಿಹಾರ ಸಂಪೂರ್ಣ ಗೋಹತ್ಯೆ ನಿಷೇಧ ಬೀದಿಯಲ್ಲಿ ಮೇಯುವ ಹಸುಗಳನ್ನು ಬಿಡಿ, ಕೊಟ್ಟಿಗೆಯಲ್ಲಿರುವ ಹಸುಗಳನ್ನೂ ಹೊತ್ತೊಯ್ಯವ ಗೋಕಳ್ಳರಿರುವಾಗ ಕಠಿಣ ಕಾನೂನಿನ ಅವಶ್ಯಕತೆ ಇಲ್ಲವೇ?

ಕೆಲವು ರಿಲಿಜನ್‌ಗಳಲ್ಲಿ ಗೋಮಾಂಸ ಸೇವನೆಗೆ ಅನುಮತಿ ಇರಬಹುದು, ಆದರೆ ಅದು ಕಡ್ಡಾಯವೇನಲ್ಲವಲ್ಲ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎನ್ನುವುದೆಲ್ಲ ಬರಿ ನೆಪ ಅ?. ಇನ್ನುಳಿದಂತೆ, ದಲಿತರು ಗೋಮಾಂಸ ತಿನ್ನುತ್ತಾರೆ ಎನ್ನುವುದೆಲ್ಲ ಎಡಪಂಥೀಯರು ಹುಟ್ಟುಹಾಕಿದ ವಾದವೇ ಹೊರತು, ಹಿಂದು ಸಮುದಾಯಗಳೆಲ್ಲವೂ ಗೋವನ್ನು ತಾಯಿಯೆಂದೇ ನೋಡುತ್ತವೆ ಎನ್ನುವುದು ನಮಗೆ ಕಾಣುವ ಸತ್ಯ.

ಗೋಸಂತತಿಯ ಅಳಿವಿಗೆ ಕಾರಣವಾದ ರಾಸಾಯನಿಕ ಕೃಷಿ

ವಿದೇಶದಿಂದ ಬಂದ ಕೃಷಿತಜ್ಞರಿಗೆ ಗೋವುಗಳ ಸಗಣಿಯಿಂದ ತಯಾರಾಗುವ ಸಾವಯವ ಗೊಬ್ಬರದ ಪರಿಚಯವೇ ಇರಲಿಲ್ಲ. ಇವರಿಂದ ವೈಜ್ಞಾನಿಕ ಅನ್ನುವ ಹೆಸರಿನಲ್ಲಿ ರಾಸಾಯನಿಕ ಗೊಬ್ಬರದ ಹೇರಿಕೆಯಾಯ್ತು. ಟ್ರ್ಯಾಕ್ಟರ್‌ಗಳು ಬಂದವು. ಅ?ದ ಮೇಲೆ, ಹಸುವಾಗಲೀ ಹೋರಿಯಾಗಲೀ ರೈತನಿಗೆ ಅಗತ್ಯವೆನಿಸಲಿಲ್ಲ. ಸಗಣಿ ಗೊಬ್ಬರವೂ ಬೇಡವಾಯಿತು, ಉಳುಮೆ ಮಾಡಲು ಎತ್ತುಗಳೂ ಬೇಡವಾದವು. ಹಾಗಾಗಿ, ಹಸು ಎನ್ನುವುದು ಹಾಲು ಕೊಡುವ ಪ್ರಾಣಿಯಾಗಿ ಮಾತ್ರ ಉಳಿಯಿತು. ಹೋರಿಗಂತೂ ಕೆಲಸವೇ ಇಲ್ಲ.

ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಬರಡಾಗುತ್ತಿರುವುದು ಮಾತ್ರವಲ್ಲದೇ, ಕಂಡುಕೇಳರಿಯದ ರೋಗಗಳು ಬರುತ್ತಿವೆ. ಡಯಾಬಿಟೀಸ್, ಕ್ಯಾನ್ಸರ್ ಎಲ್ಲವೂ ಇಂದು ಸಾಮಾನ್ಯವಾಗಿವೆ. ನಾವು ತಿನ್ನುವ ಆಹಾರ ವಿ?ವಾಗಿದ್ದರ ಪರಿಣಾಮವೇ ಇದು ಎಂಬುದು ಎಲ್ಲರಿಗೂ ಅರಿವಾಗುತ್ತಿದೆ. ಪುನಃ ಗೋ ಆಧರಿತ ಕೃಷಿಗೆ ಹಿಂತಿರುಗುವುದೇ ಇದಕ್ಕಿರುವ ಪರಿಹಾರ. ಗೋವೂ ಉಳಿಯುತ್ತದೆ, ನಾವೂ ಉಳಿಯುತ್ತೇವೆ. ಗೋವು ಉಳಿಯದಿದ್ದರೆ, ನಾವೂ ಉಳಿಯಲು ಸಾಧ್ಯವಿಲ್ಲ ಎಂಬ ಜಾಗೃತಿ ನಿಧಾನವಾಗಿಯಾದರೂ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ.

ಗೋಉತ್ಪನ್ನಗಳ ಬಳಕೆ ನಮ್ಮೆಲ್ಲರ ಜವಾಬ್ದಾರಿ

ಗೋಮೂತ್ರ, ಗೋಮಯದಿಂದ ಇಂದು ಸೋಪು, ಶಾಂಪೂ, ಹಲ್ಲುಪುಡಿಗಳು ಮಾತ್ರವಲ್ಲದೇ ಪೈಂಟ್ ಕೂಡಾ ತಯಾರಾಗುತ್ತಿದೆ. ಗೋ ಆಧರಿತ ಉದ್ಯಮ ನಿಧಾನವಾಗಿ ಬೆಳೆಯುತ್ತಿದೆ. ಪಂಚಗವ್ಯದಿಂದ ಕ್ಯಾನ್ಸರ್ ಮೂರೇ ತಿಂಗಳಲ್ಲಿ ಗುಣವಾದ ಉದಾಹರಣೆಗಳಿವೆ. ಇತ್ತೀಚೆಗೆ ಚಿಕ್ಕೋಡಿಯ ಯುವ ರೈತ ಕಸಾಯಿಖಾನೆಗೆ ಕಳುಹಿಸುವ ಗೋವುಗಳಿಂದ ಉಪ ಉತ್ಪನ್ನ ಮಾಡಿ ಪ್ರತಿ ವರ್ಷ ಸುಮಾರು ೧೪ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ಇಂತಹ ಅ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಗೋವುಗಳನ್ನು ಕಸಾಯಿಖಾನೆಗೆ ತಳ್ಳುವ ಬದಲು ಅದರಿಂದ ಬರುವ ಗೋಮೂತ್ರ, ಸಗಣಿ ಉಪಯೋಗಿಸಿ ಕೊಂಡು ಧೂಪ, ದಂತಮಂಜನ, ಕೀಟನಾಶಕ, ಗೋ ಅರ್ಕ, ವಿಭೂತಿ, ಸೊಳ್ಳೆ ಬತ್ತಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆದಾಯ ಗಳಿಸುವುದು ಹೆಚ್ಚು ಲಾಭದಾಯಕ ಅಲ್ಲವೇ?

ಆದರೆ, ಅದಕ್ಕೆ ಮಾರುಕಟ್ಟೆಯೂ ಬೇಕಲ್ಲವೇ? ಗೋವನ್ನು ಸಾಕುವ ರೈತರ ಸಂಖ್ಯೆ ಹೆಚ್ಚಬೇಕಾದರೆ, ಗೋ ಉತ್ಪನ್ನಗಳನ್ನು ಕೊಳ್ಳುವವರು ಹೆಚ್ಚಾಗಬೇಕ?. ಬರೀ ಗೋಹತ್ಯೆ ನಿಷೇಧಿಸಿ ಎಂದು ಹೋರಾಟ ಮಾಡಿದರೆ, ಗೋಸಂತತಿ ಉಳಿಯುವುದಿಲ್ಲ. ಗೋ ಉತ್ಪನ್ನಗಳನ್ನು ಖರೀದಿಸಿದರೆ, ಎಲ್ಲದಕ್ಕೂ ಮೆಡಿಕಲ್ ಶಾಪಿಗೆ ಹೋಗಿ ಮಾತ್ರೆ ತರುವ ಬದಲು, ಪಂಚಗವ್ಯ ಆಧರಿತ ಔ?ಧಿಗಳನ್ನೋ ಗೋ ಅರ್ಕವನ್ನೋ ಬಳಸಿದರೆ, ಗೋವನ್ನು ಸಾಕುವ ರೈತನಿಗೂ ಸ್ವಲ್ಪ ಲಾಭ ಬರುತ್ತದೆ. ಗೋಸಾಕಣೆಯಿಂದ ರೈತರ ಜೀವನ ನಿರ್ವಹಣೆಯೂ ಸಾಧ್ಯವಾಗುತ್ತದೆ. ಹಾಗಾದಾಗ, ತಾನಾಗಿಯೇ ರೈತರು ಗೋಸಾಕಣೆಗೆ ಒಲವು ತೋರುತ್ತಾರೆ. ಅದಕ್ಕೆ ಸಂಪೂರ್ಣ ಸಮಾಜದ ಬೆಂಬಲ ಬೇಕಿದೆ. ಗೋವನ್ನು ತಾಯಿಯೆಂದು ಪೂಜಿಸುವ ನಾವು, ಆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಾತ್ರ ರೈತನ ಮೇಲೆ ಹೊರಿಸಿದರೆ ಹೇಗೆ? ಅದಕ್ಕೆ ಎಲ್ಲರ ಸಹಕಾರವೂ ಬೇಕು. ಗೋವು ರೈತನಿಗೆ ಮಾತ್ರ ತಾಯಿಯಲ್ಲವರ್ಷ?!

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

‘ಸ್ವದೇಶೀ’- ಒಂದು ಜೀವನಶೈಲಿ

Thu Mar 4 , 2021
ನಮ್ಮ ದೇಶದ ಜ್ಞಾನಿಗಳು, ಯೋಗಿಗಳು ಸಹಸ್ರಾರು ವರ್ಷಗಳಿಂದ ನಡೆಸಿಕೊಂಡು ಬಂದಂಥ ಜೀವನ ನಡವಳಿಕೆಗಳೇ ಸ್ವದೇಶೀ ಜೀವನಶೈಲಿ. ನಮ್ಮ ನಂಬಿಕೆಯ ಪ್ರಕಾರ ನಮ್ಮ ಜೀವನದ ಉದ್ದೇಶವೆಂದರೆ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’. ಮೋಕ್ಷ ನಮ್ಮ ಮರಣಾನಂತರ ದೊರಕುವುದು ಎನ್ನುವುದೊಂದು ಮಿಥ್ಯಾಕಲ್ಪನೆ. ಎಲ್ಲ ಬಗೆಯ ರಾಗದ್ವೇಷಗಳನ್ನು ಬಿಟ್ಟರೆ ಅದೇ ಮೋಕ್ಷ. ಯಾರ ಜೀವನ ಸರಳವಾಗಿರುತ್ತದೆಯೋ ಅವನು ಸುಖಿಯಾಗಿರುತ್ತಾನೆ, ಶಾಂತವಾಗಿರುತ್ತಾನೆ ಎನ್ನುತ್ತಾರೆ ನಮ್ಮ ಜ್ಞಾನಿಗಳು. ಮನುಷ್ಯನ ಮನಸ್ಸು ಸದಾ ಏನನ್ನಾದರೂ ಬಯಸುತ್ತಲೇ ಇರುತ್ತದೆ; ಮನಸ್ಸು […]