ಅಮೆರಿಕದ ಮೂರನೇ ಅತಿ ದೊಡ್ಡ ನ್ಯಾಯಾಂಗ ಹುದ್ದೆಗೆ ಏರಿದ ಭಾರತ ಮೂಲದ ವನಿತಾ ಗುಪ್ತ

ಅಮೆರಿಕ : ಭಾರತೀಯ ಮೂಲದ ವನಿತಾ ಗುಪ್ತ (46) ಅವರು ಅಮೆರಿಕದ ಮೂರನೇ ಅತಿ ದೊಡ್ಡ ನ್ಯಾಯಾಂಗ ಹುದ್ದೆಯಾಗಿರುವ ಸಹ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್‌ ಹುದ್ದೆ ಬಹಳ ಪ್ರತಿಷ್ಠಿತವಾದುದಾಗಿದೆ. ಸಹ ಅಟಾರ್ನಿ ಜನರಲ್‌ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂರನೇ ಅತಿ ಪ್ರಮುಖ ಹುದ್ದೆಯಾಗಿದೆ.

ಅಮೆರಿಕದ ಸೆನೆಟ್ ನಲ್ಲಿನಡೆದ ಮತದಾನದ ಸಂಧರ್ಭದಲ್ಲಿ ಉಭಯ ಪಕ್ಷಗಳೂ ತಲಾ 50 ಸ್ಥಾನಗಳನ್ನು ಹೊಂದಿರುವುದರಿಂದ ಟೈ ಆಗಿದೆ. ಆಗ ರಿಪಬ್ಲಿಕನ್ ಸೆನೆಟ್‌ ಸದಸ್ಯೆ ಲಿಸಾ ಮಾರ್ಕೋವ್‌ಸ್ಕಿ ಅವರು ತಮ್ಮ ಪಕ್ಷದ ನಿಲುವಿನಿಂದ ಹೊರಬಂದು ವನಿತಾ ಗುಪ್ತ  ಅವರಿಗೆ ಮತ ಚಲಾಯಿಸಿದರು. ಹೀಗಾಗಿ 51–49 ಮತಗಳ ಅಂತರದಿಂದ ಅವರು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು.

ವನಿತಾ ಗುಪ್ತ ಅವರನ್ನು ಅಭಿನಂದಿಸಿರುವ ಅಧ್ಯಕ್ಷ ಜೋ ಬೈಡನ್‌, ‘ಜನಾಂಗೀಯ ಸಮಾನತೆ ಮತ್ತು ನ್ಯಾಯ ಕ್ಷೇತ್ರದಲ್ಲಿ ಅರ್ಪಣೆಯಿಂದ ಕೆಲಸ ಮಾಡುವ ಹೊಣೆಗಾರಿಕೆ ವನಿತಾ ಗುಪ್ತ ಮತ್ತು ಕ್ರಿಸ್ಟಿನ್ ಕ್ಲರ್ಕ್‌ ಅವರಿಗೆ ದೊರೆತಿದೆ. ಸೆನೆಟ್‌  ಇವರಿಗೆ ಸಹಕಾರ ನೀಡಬೇಕು’ ಎಂದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಚೀನಾ ಯೋಜನೆಯನ್ನು ರದ್ದುಗೊಳಿಸಿದ ಆಸ್ಟ್ರೇಲಿಯಾ

Thu Apr 22 , 2021
ಆಸ್ಟ್ರೇಲಿಯಾ: ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಆಸ್ಟ್ರೇಲಿಯಾ ಸರ್ಕಾರವು ಚೀನಾದೊಂದಿಗೆ ಮಾಡಿಕೊಂಡಿದ್ದ ಮೂಲಸೌಲಭ್ಯ ಅಭಿವೃದ್ಧಿ ಒಪ್ಪಂದಗಳನ್ನು  ರದ್ದುಗೊಳಿಸಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು ಚೀನಾದೊಂದಿಗೆ ‘ಬೆಲ್ಟ್‌ ಆ್ಯಂಡ್‌ ರೋಡ್‌‘ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗೆ 2018 ಮತ್ತು 2019ರಲ್ಲಿ ಸಹಿ ಹಾಕಿತ್ತು. 1999ರಲ್ಲಿ ಸಿರಿಯಾ ಮತ್ತು 2004ರಲ್ಲಿ ಇರಾನ್ ಜತೆಗೂ ವಿಕ್ಟೋರಿಯಾ ರಾಜ್ಯದ  ಶಿಕ್ಷಣ ಇಲಾಖೆಯು ಒಪ್ಪಂದ ಮಾಡಿಕೊಂಡಿತ್ತು. ಹೊಸ ಕಾನೂನುಗಳ ಅಡಿಯಲ್ಲಿ ಈ ನಾಲ್ಕೂ ಒಪ್ಪಂದಗಳು ರಾಷ್ಟ್ರೀಯ ಹಿತಾಸಕ್ತಿಗೆ […]