ಅಯೋಧ್ಯೆಯಲ್ಲಿ ಪುನರುಜ್ಜೀವನಗೊಳ್ಳಲಿದೆ ರಾಮಾಯಣ ಕಾಲದ 5 ಜಲಮೂಲಗಳು

ಉತ್ತರ ಪ್ರದೇಶ: ಅಯೋಧ್ಯೆಯಲ್ಲಿರುವ ರಾಮಾಯಣ ಕಾಲದ 5 ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಕೇಂದ್ರ  ಜಲಶಕ್ತಿ ಇಲಾಖೆ ಮುಂದಾಗಿದೆ.

ಅಯೋಧ್ಯೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಸ್ವಚ್ಛ ಗಂಗಾ ಯೋಜನೆಯ ಭಾಗವಾಗಿ ಅಯೋಧ್ಯೆಗೆ 10 ಕೋಟಿ ರೂ.ಯನ್ನು ತೆಗೆದಿರಿಸಿದೆ.

ಇದರ ಮೂಲಕ ಅಯೋಧ್ಯೆಯಲ್ಲಿ5 ಜಲಮೂಲಗಳನ್ನು ಪುನರುಜ್ಜೀವನ, ಸಾರ್ವಜನಿಕ ಕಲಾ ಯೋಜನೆ ಮುಂತಾದವುಗಳು  ಸಮುದಾಯ ಸಹಬಾಗಿತ್ವದಲ್ಲಿ ನಡೆಯಲಿದೆ. ಇದು 18 ತಿಂಗಳ ಯೋಜನೆಯಾಗಿದೆ ಎಂದು  ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ.

ಅಯೋಧ್ಯೆಯ ಅಭಿವೃದ್ಧಿ ಪ್ರಾಧಿಕಾರವು ‘ಜಲ-ಧಾರಾ’ ಯೋಜನೆಯ ಮೂಲಕ ರಾಮಾಯಣ ಕಾಲದ 108 ಜಲಮೂಲಗಳನ್ನು ಗುರುತಿಸಿದೆ. ಮೊದಲ ಹಂತವಾಗಿ ಪ್ರಮುಖ 5 ಜಲಮೂಲಗಳನ್ನು ‘ನಮಾಮಿ ಗಂಗಾ’ ಯೋಜನೆಯಲ್ಲಿ ಪುನರುಜ್ಜೀವನಗೊಳಿಸಲು ನಿರ್ಧರಿಸಿದೆ.

ಪುನರುಜ್ಜೀವನಗೊಳ್ಳಲಿರುವ ಪ್ರಮುಖ 5 ಜಲಮೂಲಗಳು:

1. ಲಾಲ್ ದಿಗ್ಗಿ

2. ಫತೇಗಂಗ್

3. ಸೀತಾ ರಾಮ್ ಮಂಡಿ ಕುಂಡ್

4. ಬ್ರಹ್ಮ ಕುಂಡ್

5. ರಾಮ್ಜಿ ದಾಸ್ ಆಶ್ರಮ ತಲಾಬ್

ಈ ಯೋಜನೆಯ ಮೂಲಕ ಜನರಲ್ಲಿ ಪರಿಸರ ಮತ್ತು  ತಮ್ಮ ಪರಂಪರೆಗಳನ್ನು ಸಂರಕ್ಷಿಸಲು ಪ್ರೋತ್ಸಾಹಿಸಲಾಗುವುದು ಎಂದು ಅಯೋಧ್ಯೆ ಅಭಿವೃದ್ದಿ ಪ್ರಾಧಿಕಾರ ತಿಳಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಸ್ತೆ ನಿರ್ಮಾಣದಲ್ಲಿ ಹಿಂದಿನ 66 ವರ್ಷ ಮೀರಿಸಿದ ಮೋದಿ ಸರ್ಕಾರ. ದೂರ ಮತ್ತು ವೇಗದಲ್ಲಿ ಮೋದಿಗೆ ಸಾಟಿಯಿಲ್ಲ

Fri Mar 26 , 2021
ರಸ್ತೆ ನಿರ್ಮಾಣದಲ್ಲಿ ಹಿಂದಿನ 66 ವರ್ಷ ಮೀರಿಸಿದ ಮೋದಿ ಸರ್ಕಾರ.  ಕಳೆದ 7 ವರ್ಷಗಳಲ್ಲಿ ಹಿಂದಿನ 66 ವರ್ಷಗಳಲ್ಲಿ ನಿರ್ಮಾಣವಾದ ರಸ್ತೆಗಳಿಗಿಂತ ಅಧಿಕ ರಸ್ತೆಗಳು ನಿರ್ಮಾಣವಾಗಿವೆ. ಭಾರತದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಉದ್ದ: 2013-14ರಲ್ಲಿ 91,287 KMs 2020-21ರಲ್ಲಿ 162,000 KMs ಅಂದರೆ 2013-14ರಲ್ಲಿ ಭಾರತದಲ್ಲಿದ್ದ 91,287 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಗಳಿದ್ದವು. ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಕಳೆದ 7 ವರ್ಷಗಳಲ್ಲಿ 71000 ಕಿ.ಮೀ. ಗೂ ಅಧಿಕ ದೂರದ […]