ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಅಡಿಪಾಯ ತುಂಬಿಸುವ ಪೂಜೆ

ಉತ್ತರ ಪ್ರದೇಶ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ವತಿಯಿಂದ  ಶ್ರೀ   ರಾಮಮಂದಿರ ನಿರ್ಮಾಣ  ಕಾರ್ಯ ಆರಂಭ,  ವೈದಿಕ ಸಂಪ್ರದಾಯದಂತೆ ಅಡಿಪಾಯ ತುಂಬಿಸುವ ಪೂಜೆ.

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಸ್ಥಾನದಲ್ಲಿ ಭಗವಾನ್ ಶ್ರೀ ರಾಮಚಂದ್ರನ ಭವ್ಯ ಮಂದಿರ ನಿರ್ಮಾಣದ ಕನಸನ್ನು ಹಿಂದೂ ಸಮಾಜ ಇರಿಸಿಕೊಂಡಿತ್ತು,  ಆ ಕನಸು ಸೋಮವಾರದಿಂದ ಸಂಪನ್ನವಾಗಲು  ಆರಂಭವಾಗಿದೆ. ಇಂದು 10:55ರ ಶುಭ ಮುಹೂರ್ತದಲ್ಲಿ ಟ್ರಸ್ಟ್ ನ  ಪದಾಧಿಕಾರಿಗಳು ಭೂಮಿ ಪೂಜೆಯನ್ನು ಸಲ್ಲಿಸಿದರು.

ಶುಭ ಸಂದರ್ಭದ ಜೊತೆಯಲ್ಲಿಯೇ ಭಗವಾನ್  ಶ್ರೀ ಗಣೇಶ,  ವಿಷ್ಣು ಹಾಗೂ ಶ್ರೀ ಲಕ್ಷ್ಮೀ ಮಾತೆಯ ಜೊತೆಗೆ ಭಗವಾನ್ ವಿಶ್ವಕರ್ಮರ ಪೂಜಾ ಕಾರ್ಯಕ್ರಮ ಹಾಗೆಯೇ 40 ಅಡಿ ಆಳದ ಅಡಿಪಾಯ ಭರ್ತಿ ಕಾರ್ಯವೂ ಆರಂಭವಾಯಿತು. ಶ್ರೀ ರಾಮಜನ್ಮಭೂಮಿ ಪರಿಷತ್ತಿನ 5 ಎಕರೇ ಭೂಮಿಯ 2.77 ಎಕರೆ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದೆ. ಇದರಲ್ಲಿ ಗರ್ಭಗುಡಿಯನ್ನು ಒಳಗೊಂಡಂತೆ ಪೂರ್ತಿ 2.77 ಎಕರೆ ಭೂಮಿಯನ್ನು 40 ಅಡಿ ಆಳದಷ್ಟು ಅಗೆಯಲಾಗಿದೆ. ಅದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಮುಹೂರ್ತವನ್ನು  ನಿಗದಿಪಡಿಸಲಾಗಿತ್ತು. ಅಡಿಪಾಯ ತುಂಬಿಸಿದ ನಂತರ ಶ್ರೀರಾಮ ಮಂದಿರವು ನಿಧಾನವಾಗಿ ತನ್ನ ಆಕಾರವನ್ನು ಪಡೆಯಲು ಪ್ರಾರಂಭವಾಗುವುದು. 

ಈ ಸಂದರ್ಭದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀ ಚಂಪತ್ ರಾಯ್, ಡಾ. ಅನಿಲ್ ಮಿಶ್ರ, ಮಹಂತ ದಿನೇಂದ್ರ ದಾಸರ ಜೊತೆಯಲ್ಲಿ ಹಲವು ಜನರು ಉಪಸ್ಥಿತರಿದ್ದರು. 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಜಮ್ಮು ಕಾಶ್ಮೀರದ 32 ಲಕ್ಷ ಜನರಿಗೆ ನಿವಾಸಿ ಪ್ರಮಾಣಪತ್ರ

Tue Mar 16 , 2021
ನವದೆಹಲಿ, ಮಾರ್ಚ್ 16: ಜಮ್ಮು ಕಾಶ್ಮೀರದಲ್ಲಿ 32.31 ಲಕ್ಷ ಜನರಿಗೆ ನಿವಾಸಿ ಪ್ರಮಾಣಪತ್ರ  ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು 2020ರ ಡಿಸೆಂಬರ್ ವೇಳೆಗೆ ಒಟ್ಟು 35,44,938 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 32,31,353 ಜನರಿಗೆ ನಿವಾಸಿ ಪ್ರಮಾಣಪತ್ರವನ್ನು ಒದಗಿಸಲಾಗಿದೆ ಮತ್ತು ನಿಗದಿತ ದಾಖಳೆಗಳ್ನನು ಸಲ್ಲಿಸದ 2,15438 ಜನರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು. […]