ಆಕ್ಸಿಜನ್ Concentratorಗಳ ವಿತರಿಸಿದ ವಿಶ್ವ ಹಿಂದೂ ಪರಿಷತ್ | ಕೊರೋನಾ ಸಂಕಷ್ಟ ಸಮಯದಲ್ಲಿ ಜನರ ನೆರವಿಗೆ ಧಾವಿಸಿದ ವಿಹಿಂಪ

ಬೆಂಗಳೂರು: ವಿಶ್ವ ಹಿಂದು ಪರಿಷತ್ ಇದೀಗ ಕೊರೋನಾ ಸಂಕಷ್ಟ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್  ಜನರ ನೋವು ಸಂಕಟಗಳಿಗೆ ಆಸರೆಯಾಗುವ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ.

ಇಂದು ವಿಶ್ವ ಹಿಂದೂ ಪರಿಷತ್ ನ ಬೆಂಗಳೂರಿನ ಕೇಂದ್ರ ಕಾರ್ಯಾಲಯದಿಂದ ಬೆಳಗಾವಿಗೆ  5 , ಶಿವಮೊಗ್ಗಕ್ಕೆ 2 , ಚಿತ್ರದುರ್ಗ 2, ಮಂಗಳೂರಿಗೆ 1 ಸೇರಿದಂತೆ  10 Oxygen Concentrator ಗಳನ್ನು ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜ್ ಜಿ  ಅವರು  ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ನಡೆಸಿದ ಸೇವಾಕಾರ್ಯಗಳ ವಿವರ ನೀಡಿದರು.

  • ವಿಹಿಂಪ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳನ್ನು ನೆಡೆಸಲಾಯಿತು.
  • ಮಂಗಳೂರಿನಲ್ಲಿ ಕೋವಿಡ್  ರೋಗಿಗಳಿಗೆ  ಉಚಿತ  ಆಟೋ ಸೇವೆ ಒದಗಿಸಲಾಗುತ್ತಿದೆ. ಅದಕ್ಕಾಗಿ ಸಹಾಯವಾಣಿ ಏರ್ಪಾಡು ಮಾಡಿದೆ.
  • ಮಂಗಳೂರು, ಸುರತ್ಕಲ್, ಉಪ್ಪಿನಂಗಡಿ, ಮಡಿಕೇರಿ, ಚಿತ್ರದುರ್ಗ, ಮಳವಳ್ಳಿ, ತುಮಕೂರು, ಬೆಳಗಾವಿ,  ಹುಬ್ಬಳ್ಳಿ –  ಹೀಗೆ ಹಲವಾರು ಕಡೆ  ಕೋವಿಡ್ ನಿಂದ ಮೃತಪಟ್ಟವರನ್ನು ಹಿಂದೂ ಪದ್ಧತಿಯಂತೆ  ಅಂತ್ಯಕ್ರಿಯೆ ಮಾಡಲಾಗುತ್ತಿದೆ.
  • ಶಿವಮೊಗ್ಗದಲ್ಲಿ ಅನ್ನ ಪರಬ್ರಹ್ಮ ಎನ್ನುವ ಕಾರ್ಯಕ್ರಮದಡಿ ಹಸಿದವರಿಗೆ ಪ್ರತಿದಿನ ನಗರದಾದ್ಯಂತ 1 ಸಾವಿರ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.
  • ಬೆಂಗಳೂರಿನಲ್ಲಿ ಕೋವಿಡ್ ಆಗಿ Home Isolationನಲ್ಲಿ ಇರುವವರಿಗೆ Medicin kit ವಿತರಣೆ ನಡೆಯುತ್ತಿದೆ.
  • ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆಯ ಸರಕಾರಿ ಆಸ್ಪತ್ರೆಗಳಲ್ಲಿರುಕ ರೋಗಿಗಳ ಸಂಬಂಧಿಗಳಿಗೆ ಪ್ರತಿನಿತ್ಯ 200 ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.
  • ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಸೇವಾ ಭಾರತೀಯಿಂದ 40 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರವನ್ನು ನೆಡೆಸುತ್ತಿದೆ.
  • ಚಿತ್ರದುರ್ಗದಲ್ಲಿ ವಿಹಿಂಪ ಮತ್ತು ಜೈನ್ ಸಮುದಾಯ ಒಟ್ಟಾಗಿ 12 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರ ನೆಡೆಸಲಾಗುತ್ತಿದೆ.
  • ವಿಶ್ವ ಹಿಂದೂ ಪರಿಷದ್ ಕರ್ನಾಟಕ ಕೇಂದ್ರಕಾರ್ಯಾಲಯ ಧರ್ಮಶ್ರೀಯಲ್ಲಿ ಎರಡು ದಿನಗಳ ಕಾಲ Vaccination Drive ಮಾಡಲಾಯಿತು.
  • ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷದ್, RSS, ಏಕಲ್ ವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ ಕೇರ್ ಸೆಂಟರ್ ನೆಡೆಯುತ್ತಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆ, ದಿನ 3 : ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ - ಜಗದ್ಗುರು ವಿಜಯೇಂದ್ರ ಸರಸ್ವತಿ #PositivityUnlimited

Thu May 13 , 2021
ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ :ಜಗದ್ಗುರು ವಿಜಯೇಂದ್ರ ಸರಸ್ವತಿ ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ ಎಂದು ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ ಅವರು ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸಮಾಲಿಕೆಯಲ್ಲಿ ಅವರು ಇಂದು ಮಾತನಾಡಿದರು. ಮತ್ತೊಮ್ಮೆ ಮಹಾಮಾರಿ ಕೊರೊನಾ ನಮಗೆ ತೊಂದರೆ ಕೊಡುತ್ತಿದೆ. ಈ ಸಂಕಟದಿಂದ ಮುಕ್ತಿ ಸಿಗಲು […]