ಇಂದಿನ ಪ್ರಮುಖ ಸುದ್ದಿಗಳು: ರೈಲ್ವೇಯಿಂದ 64,000 ಹಾಸಿಗೆ; ಡಿಆರ್ ಡಿಓದಿಂದ 500 ಆಕ್ಸಿಜನ್ ಘಟಕ; 2ಲಕ್ಷಕ್ಕೂ ಅಧಿಕ ಮಂದಿ ಡಿಸ್ಚಾರ್ಜ್

ಕೊರೋನಾ ಸೋಂಕಿತರಿಗೆ ನೆರವಾಗಲು ದಿಟ್ಟ ಹೆಜ್ಜೆಯಿಟ್ಟಿರುವ ರೈಲ್ವೆ ಸಚಿವಾಲಯವು 64 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಬಹುದಾದ 4,000 ಪ್ರತ್ಯೇಕ ಬೋಗಿಗಳನ್ನು ಒದಗಿಸಲು ಮುಂದಾಗಿದೆ. ರೈಲ್ವೇ ಇಲಾಖೆ ಈಗಾಗಲೇ ಕೊವೀಡ್ ಸೊಂಕಿತರ ಆರೈಕೆಗಾಗಿ 2900ಕ್ಕೂ ಅಧಿಕ ಹಾಸಿಗೆಗಳ ಸಾಮರ್ಥ್ಯವುಳ್ಳ 191 ಬೋಗಿಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ನೀಡಿದೆ.

ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‌ಡಿಓ) ದೇಶಾದ್ಯಂತ 500 ವೈದ್ಯಕೀಯ ಬಳಕೆಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಇದು ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಆಮ್ಲಜನಕ ಪೂರೈಕೆಗೆ ಸಹಕಾರಿಯಾಗಲಿದೆ. ಮೂರು ತಿಂಗಳೊಳಗೆ ಘಟಕಗಳು ಅಸ್ತಿತ್ವಕ್ಕೆ ಬರಲಿದ್ದು, ಪಿಎಂ ಕೇರ್ ಫಂಡ್ ಆರ್ಥಿಕ ನೆರವು ನೀಡಲಿದೆ.

ಜನರಿಗೆ ಆಕ್ಸಿಜನ್ ಸಿಗುವಂತಾಗಲು ತನ್ನ ಉತ್ಪಾದನಾ ಘಟಕ ಮುಚ್ಚಿದ ಮಾರುತಿ: ದೇಶದಲ್ಲಿ ಮೆಡಿಕಲ್ ಉಪಯೋಗಕ್ಕೆ Oxygen gas ಲಭ್ಯವಾಗುವಂತೆ ಮಾ ಡುವ ಸಲುವಾಗಿ ಮಾರುತಿ ಸುಝುಕಿ ಗುಜರಾತ್ ಮತ್ತು ಹರ್ಯಾಣದಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮುಚ್ಚಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹನುಮ ನಮ್ಮವನಮ್ಮ: ಗೊಂದಲ ಮೂಡಿಸುವ ಮುನ್ನ ಸಂಯಮವಿರಲಿ.

Thu Apr 29 , 2021
ಒಂದು ವಿವಾದದ ಆರಂಭಕ್ಕೂ ಇಂದಿನ ಶ್ರೀರಾಮನವಮಿಯ ದಿನ ಸಾಕ್ಷಿಯಾಯಿತು. ಅದು ರಾಮಭಂಟ ಹನುಮಂತನ ಜನ್ಮಸ್ಥಳದ ಕುರಿತು ಗೊಂದಲ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ ಇದಕ್ಕೆ ನಾಂದಿ ಹಾಡಿದೆ. ಶ್ರೀರಾಮ ನವಮಿಯ ದಿವಸ ನಡೆಸಿದ ಕಾರ್ಯಕ್ರಮವೊಂದರಲ್ಲಿ ತಿರುಪತಿಯ ಏಳು ಬೆಟ್ಟಗಳಲ್ಲಿ ಒಂದಾಗಿರುವ ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಘೋಷಿಸಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ವಿ ಮುರಳಿಧರ ಶರ್ಮಾ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ ಈ ವಿಷಯದ ಕುರಿತು […]