ಏ. 21 ರಿಂದ ಪ್ರಾರಂಭಗೊಳ್ಳಲಿದೆ ಸಂಸ್ಕೃತ ಭಾರತಿಯ ‘ಗೇಹೇ ಗೇಹೇ ರಾಮಾಯಣಮ್’ ಎಂಬ ರಾಮಾಯಣ ಪಾರಾಯಣ ಅಭಿಯಾನ.

ಬೆಂಗಳೂರು: ಮನೆಮನೆಗೆ ಸರಳ ಸಂಸ್ಕೃತ ಸಂಭಾಷಣೆಯನ್ನು ತಲುಪಿಸುತ್ತಿರುವ ‘ಸಂಸ್ಕೃತ ಭಾರತಿ’ಯ  ನೇತೃತ್ವದಲ್ಲಿ ‘ಗೇಹೇ ಗೇಹೇ ರಾಮಾಯಣಮ್” ಎಂಬ ನಿತ್ಯ ರಾಮಾಯಣ ಪಾರಾಯಣ ಅಭಿಯಾನ ನಡೆಯಲಿದೆ. ಈ ಅಭಿಯಾನವು ಏಪ್ರಿಲ್ 21ರಂದು ಭಾರತದಾದ್ಯಂತ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಕೃತ ಭಾರತಿ ತಿಳಿಸಿದೆ.

ಪ್ರಭು ಶ್ರೀ ರಾಮಚಂದ್ರನು ನಮ್ಮೆಲ್ಲರ ಆರಾಧ್ಯದೈವ. ಶ್ರೀರಾಮಮಂದಿರವು ನಮ್ಮ ಕಾಲದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವುದು  ನಿಜವಾಗಿಯೂ ನಮ್ಮ ಪುಣ್ಯ. ರೋಮರೋಮಗಳಲ್ಲಿ ರಾಮಭಕ್ತಿಯನ್ನು ಮೆರೆಯುತ್ತಾ ಆ  ಶ್ರೇಷ್ಠ ಕಾರ್ಯಕ್ಕಾಗಿ ನಿಧಿಯನ್ನು ಸಮರ್ಪಿಸಿ ಧನ್ಯರಾಗಿದ್ದೇವೆ. 

ಈಗ ಮಂದಿರವು ನಿರ್ಮಾಣವಾಗುತ್ತಿರುವಾಗ ನಾವು ಮನೆಯಲ್ಲೇ ಕುಳಿತು ಏನು ಮಾಬಹುದು? ಎನ್ನುವ ಪ್ರಶ್ನೆಗೆ ಒಂದೇ ಒಂದು ಶ್ರೇಷ್ಠ ಉತ್ತರ,

ನಿತ್ಯ ರಾಮಾಯಣ ಪಾರಾಯಣ – ಅಂತಹ ಪಾರಾಯಣ ಮನೆ ಮನೆಗಳಲ್ಲೂ ಆಗಬೇಕು. ಅದಕ್ಕಾಗಿ  ಸಂಸ್ಕೃತಭಾರತಿಯು “ಗೇಹೇ ಗೇಹೇ ರಾಮಾಯಣಮ್”  ಎನ್ನುವ ಈ ಮಹತ್ತಮವಾದ ಯೋಜನೆಯನ್ನು ಸಂಕಲ್ಪಿಸಿದೆ… 

ಈ ಯೋಜನೆಯ ಕೆಲವು ಮುಖ್ಯ ಬಿಂದುಗಳು ಇಂತಿವೆ:

 • ಇದು ಒಂದು ವರ್ಷದ ಯೋಜನೆ. 
 • ಸಮಗ್ರ ದೇಶದಲ್ಲಿ, ಶ್ರೀರಾಮನವಮಿಯ ದಿನವೇ (ಏಪ್ರಿಲ್ 21) ಸಾವಿರಾರು ಜನರು ಪಾರಾಯಣವನ್ನು ಪ್ರಾರಂಭಿಸಲಿದ್ದಾರೆ.
 • ನಮ್ಮ ಮನೆಯಲ್ಲೇ  ನಮ್ಮ ಅನುಕೂಲವಾದ ಸಮಯದಲ್ಲಿ ಪ್ರತಿದಿನವೂ ಶ್ರೀಮದ್ ವಾಲ್ಮೀಕಿರಾಮಾಯಣದ ಎರಡು ಸರ್ಗಗಳನ್ನು ಪಠಿಸುವುದು. ಅಷ್ಟೇ… 
 • ರಾಮಾಯಣದಲ್ಲಿ ಒಟ್ಟು  648 ಸರ್ಗಗಳು ಇರುವುದರಿಂದ ಪ್ರತಿದಿನವೂ ಎರಡು ಸರ್ಗಗಳಂತೆ ಓದಿದರೆ 324 ದಿನಗಳಲ್ಲಿ ಪೂರ್ಣ ಶ್ರೀಮದ್ವಾಲ್ಮೀಕಿರಾಮಾಯಣದ ಪಾರಾಯಣವಾಗುತ್ತದೆ. ಅದಕ್ಕಾಗಿಯೇ ಒಂದು ವರ್ಷದ ಅವಧಿ. 
 • ಪ್ರತಿದಿನವೂ ಎರಡು ಸರ್ಗಗಳನ್ನು ಓದುವಾಗ, ಗ್ರಂಥದಲ್ಲೇ ಇರುವ ಹಾಗೆ, ಮೊದಲು ಆದಿಮಂಗಳ ಶ್ಲೋಕಗಳನ್ನು, ಕೊನೆಯಲ್ಲಿ ಅಂತ್ಯಮಂಗಳಶ್ಲೋಕಗಳನ್ನು ಓದುವುದು.
 • ಹತ್ತು ಹದಿನೈದು ಜನರು ಸೇರಿ WhatsApp ಗಣಗಳನ್ನು ಮಾಡಿಕೊಂಡು, ಇಡೀ ವರ್ಷ ಉತ್ಸಾಹದಿಂದ ಶ್ರೀ ರಾಮಾಯಣ ಪಾರಾಯಣ ಯಜ್ಞವನ್ನು ಮುನ್ನೆಡೆಸಬಹುದು. 
 • ವಿಶೇಷ ಸಲಹೆ ಸೂಚನೆ ಮಾರ್ಗದರ್ಶನಕ್ಕಾಗಿ ಆಸಕ್ತರು, ಈ https://forms.gle/hEDe7Qqe2SUyRyLM9 ಲಿಂಕ್ ಮೂಲಕ ನೋಂದಾಯಿಸಬಹುದು. (ನೋಂದಾಯಿಸಲು ಕೊನೆಯ ದಿನಾಂಕ – 21.04.2021)

ಪಾರಾಯಣಕ್ಕೆ ಬಳಸಬಹುದಾದ ಗ್ರಂಥಗಳು :

 1. ಗೀತಾ ಪ್ರೆಸ್  ಗೋರಖ್ ಪುರದ ರಾಮಾಯಣ
 2. ಶ್ರೀ ರಂಗನಾಥಶರ್ಮರ ವ್ಯಾಖ್ಯಾನವಿರುವ ರಾಮಾಯಣ
 3. ಭಾರತದರ್ಶನ ಪ್ರಕಾಶನದ ರಾಮಾಯಣ
 4. IIT Kanpur ಅವರ online ರಾಮಾಯಣ ವೂ ಲಭ್ಯ  https://www.valmiki.iitk.ac.in 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

1. +91 77601 83607

2. +91 99451 68920

3. +91 95352 80590

ramayanaparayanam@samskritabharatidk.com

॥ ಜಯತು ಜಯತು ಶ್ರೀ ರಾಮಚಂದ್ರಃ 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಎಸ್. ಎಲ್. ಭೈರಪ್ಪ ಅವರ ಅಭಿನಂದನ ಸಂಪುಟವನ್ನು ಹೊರತಂದ ಉತ್ಥಾನ ಮಾಸಪತ್ರಿಕೆ

Tue Apr 20 , 2021
ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಎಸ್. ಎಲ್. ಭೈರಪ್ಪ ಅವರ ಅಭಿನಂದನ ಸಂಪುಟವನ್ನು ಹೊರತರುತ್ತಿದೆ. ಇದೇ ಏಪ್ರಿಲ್ 28ಕ್ಕೆ ಈ ಸಂಚಿಕೆ ಬಿಡುಗಡೆಗೊಳ್ಳಲಿದೆ. ನಾಡೋಜ ಎಸ್.ಆರ್. ರಾಮಸ್ವಾಮಿ, ಶತಾವಧಾನಿ ಆರ್.ಗಣೇಶ್, ಪ್ರೋ. ಎಲ್.ವಿ. ಶಾಂತಕುಮಾರಿ, ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ, ಸಂದೀಪ್ ಬಾಲಕೃಷ್ಣ ಮುಂತಾದವರು ಎಸ್.ಎಲ್. ಭೈರಪ್ಪನವರ ಕಾದಂಬರಿಲೋಕದ ವಿವಿಧ ಆಯಾಮಗಳನ್ನು ಪರಿಚಯಿಸಿದ್ಧಾರೆ. ನಿಮ್ಮ ಪ್ರತಿಯನ್ನು ಕಾಯ್ದಿರಿಸಲು ಇಂದು (ಏ.20) ಕೊನೆಯ ದಿನ. ಸಂಪರ್ಕ: 080-26612730 email facebook twitter google+ […]