ಕಾಲೇಜು ಶುಭಾರಂಭ: ತಪಸ್ ವಿದ್ಯಾರ್ಥಿಗಳೊಂದಿಗೆ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಸಂವಾದ

ಬೆಂಗಳೂರು: ಕೊರೋನಾ ನಂತರ ಇದೀಗ ಶಾಲೆ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ, ಈ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ತಿನ ವಿಶೇಷ ಶೈಕ್ಷಣಿಕ ಯೋಜನೆ ತಪಸ್ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ಅವರ ಸಂವಾದ ಕಾರ್ಯಕ್ರಮ ನಡೆಯಿತು.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗರಾಜ್ ಅವರು  ಮಹಾಪುರುಷರ ಜೀವನ ಘಟನೆಗಳನ್ನು ಓದಿ, ಅದರಿಂದ ಪ್ರೇರಣೆ ಪಡೆಯಿರಿ, ದೇಶಕ್ಕೋಸ್ಕರ ಸಮಾಜಕ್ಕೋಸ್ಕರ ಬದುಕುವ; ಅದಕ್ಕೋಸ್ಕರ ತಮ್ಮ ಜೀವನದಲ್ಲಿ ಒಂದು ಮಹಾನ್ ಸಾಧನೆ ಮಾಡುವ ಸಂಕಲ್ಪವನ್ನು ಕೈಗೊಳ್ಳಿ. ಸಮಾಜಹಿತದ ಕೆಲಸಗಳನ್ನು ಜೀವನದುದ್ದಕ್ಕೂ ಮಾಡುತ್ತಾ ಹೋಗೋಣ ಸಮಾಜಕ್ಕೆ ಶಕ್ತಿಯಾಗೋಣ. ಾನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಸಮಾಜಿಕ ಸೇವೆ, ಸಮಾಜದ ಕುರಿತು ಯೋಚಿಸುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ. ಆದರ್ಶದ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ತಪಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬನಶಂಕರಿಯ ಪ್ರಾಂಶುಪಾಲರಾದ ವಸಂತ್ ಕುಮಾರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾಲೇಜು ವಿದ್ಯಾರ್ಥಿ ಪ್ರಮುಖ್  ರಾಜೇಶ್ ಪದ್ಮಾರ್ ಅವರು ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಮರ್ಥ ಭಾರತದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ‌ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Sat Jan 2 , 2021
ಬೆಂಗಳೂರು: ಸಮರ್ಥ ಭಾರತವು ಸ್ವಾಮಿ ವಿವೇಕಾನಂದರ 158ನೇ ಜನ್ಮ ವರ್ಷದ ಪ್ರಯುಕ್ತ ರಾಜ್ಯಾದ್ಯಂತ ಜನವರಿ 12 ರಿಂದ ಜ. 26 ರವರೆಗೆ ಉತ್ತಮನಾಗು- ಉಪಕಾರಿಯಾಗು’  ಎಂಬ ಅಭಿಯಾನವನ್ನು ಕೈಗೊಂಡಿದೆ. ಈ ಅಭಿಯಾನದ ಪ್ರಯುಕ್ತ ವಿವಿಧ ರೀತಿಯ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯಲಿವೆ. ಈ ಅಭಿಯಾನದ ಪ್ರಯುಕ್ತ  ಕಾಲೇಜು ವಿದ್ಯಾರ್ಥಿಗಳಿಗಾಗಿ ‌ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ವಿಷಯ : ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಆತ್ಮನಿರ್ಭರ ಭಾರತ Samartha Bharata in association […]