ಕಾಶ್ಮೀರದಿಂದ ಹೊರದಬ್ಬಲ್ಪಟ್ಟ 3800 ಮಂದಿಗೆ ಕಾಶ್ಮೀರದಲ್ಲಿ ಪುನರ್ವಸತಿ

೯೦ರ ದಶಕದಲ್ಲಿ ಕಾಶ್ಮೀರದ ಕಣಿವೆಯಿಂದ ಹೊರದಬ್ಬಲ್ಪಟ್ಟವರ ಪೈಕಿ ಸುಮಾರು ೩,೮೦೦ ಜನರು ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಮಂತ್ರಿಗಳ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ನೀಡಲಾದ ಉದ್ಯೋಗವನ್ನು ಪಡೆದುಕೊಂಡು ಕಣಿವೆಗೆ ಮರಳಿದ್ದಾರೆ. 370ನೇ ವಿಧಿಯ ರದ್ದಿನ ನಂತರ 570 ವಲಸೆ ಕಾರ್ಮಿಕರು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಮರಳಿದ್ದು ಅಂತವರ ಪ್ರಮಾಣ ಗಣನೀಯವಾಗಿ ಏರುತ್ತಿದೆ, 2021ರಲ್ಲಿ ಸುಮಾರು 2 ಸಾವಿರ ಜನರು ಮರಳುವ ನಿರೀಕ್ಷೆಯಿದೆ. ಮುಸ್ಲಿಂ ಮೂಲಭೂತವಾದಿಗಳ ದಬ್ಬಾಳಿಕೆಯ ಕಾರಣದಿಂದ ೧೯೯೦ರ ದಶಕದಲ್ಲಿ 44,167 ಕುಟುಂಬಗಳು ಕಾಶ್ಮೀರ ಕಣಿವೆಯ ತಮ್ಮ ಮನೆಮಠಗಳನ್ನು ತ್ಯಜಿಸಿ ಪಲಾಯನ ಗೈದಿದ್ದವು, ಇವುಗಳ ಪೈಕಿ 39,782 ಹಿಂದೂ ಕುಟುಂಬಗಳು. ಇನ್ನೊಂದು ಪ್ರಮುಕ ಬೆಳವಣಿಗೆಯಲ್ಲಿ ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಕಳೆದ 16 ವರ್ಷಗಳ ದಾಖಲೆಯನ್ನು ಮುರಿದಿದೆ ಸರ್ಕಾರದ ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಯೋಧ್ಯೆಯಲ್ಲಿ ಪುನರುಜ್ಜೀವನಗೊಳ್ಳಲಿದೆ ರಾಮಾಯಣ ಕಾಲದ 5 ಜಲಮೂಲಗಳು

Fri Mar 26 , 2021
ಉತ್ತರ ಪ್ರದೇಶ: ಅಯೋಧ್ಯೆಯಲ್ಲಿರುವ ರಾಮಾಯಣ ಕಾಲದ 5 ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಕೇಂದ್ರ  ಜಲಶಕ್ತಿ ಇಲಾಖೆ ಮುಂದಾಗಿದೆ. ಅಯೋಧ್ಯೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಸ್ವಚ್ಛ ಗಂಗಾ ಯೋಜನೆಯ ಭಾಗವಾಗಿ ಅಯೋಧ್ಯೆಗೆ 10 ಕೋಟಿ ರೂ.ಯನ್ನು ತೆಗೆದಿರಿಸಿದೆ. ಇದರ ಮೂಲಕ ಅಯೋಧ್ಯೆಯಲ್ಲಿ5 ಜಲಮೂಲಗಳನ್ನು ಪುನರುಜ್ಜೀವನ, ಸಾರ್ವಜನಿಕ ಕಲಾ ಯೋಜನೆ ಮುಂತಾದವುಗಳು  ಸಮುದಾಯ ಸಹಬಾಗಿತ್ವದಲ್ಲಿ ನಡೆಯಲಿದೆ. ಇದು 18 ತಿಂಗಳ ಯೋಜನೆಯಾಗಿದೆ ಎಂದು  ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ. ಅಯೋಧ್ಯೆಯ ಅಭಿವೃದ್ಧಿ […]