ಕೊರೋನಾ ಲಸಿಕೆ ನಿರ್ಮಾಣಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ

ಕೊರೋನಾ 2ನೇ ಅಲೆ ವ್ಯಾಪಿಸಿರುವುದರಿಂದ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಸಲುವಾಗಿ ನೆರವು ನೀಡುವಂತೆ ಭಾರತದ ಕೊರೋನಾ ಲಸಿಕೆ ನಿರ್ಮಾಣ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

ುತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಭಾರತದ ಕೊರೋನಾ ಲಸಿಕೆ ನಿರ್ಮಾಣ ಸಂಸ್ಥೆಗಳಾದ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ  ರೂ. 100 ಕೋಟಿ  ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋರಿದೆ. ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌  ಮೌಖಿಕವಾಗಿ ಬೇಡಿಕೆ ಸಲ್ಲಿಸಿದೆ.

ಪ್ರಸ್ತುತ ಭಾರತ್‌ ಬಯೋಟೆಕ್‌ ಸಂಸ್ಥೆ ಮಾಸಿಕ 40 ಲಕ್ಷ ಡೋಸ್‌ ಲಸಿಕೆ ಉತ್ಪಾದಿಸುತ್ತಿದ್ದು, ಸೀರಂ ಸಂಸ್ಥೆ 2022ರ ಮಾರ್ಚ್ ತಿಂಗಳಾಂತ್ಯಕ್ಕೆ  ಮಾಸಿಕ 10 ಕೋಟಿ ಡೋಸ್‌ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.

ಸುರಕ್ಷಾ ನಿಧಿ: ಭಾರತ ಸರ್ಕಾರ ಕೂಡಾ ಕೊರೋನಾ ಲಸಿಕೆ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಿದ್ದು, ಕನಿಷ್ಠ 5-6 ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿ, ಅದನ್ನು ಅನುಮೋದನೆ ಹಂತಕ್ಕೆ ತಲುಪಿಸಿ, ಮಾರುಕಟ್ಟೆಬಿಡುಗಡೆ ಮಾಡಲು ಪ್ರಯತ್ನಶೀಲಾವಾಗಿದೆ. ಇದಕ್ಕೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ 2020ರ ನವೆಂಬರ್‌ನಲ್ಲಿ ಕೋವಿಡ್‌ ಸುರಕ್ಷಾ ನಿಧಿ ಸ್ಥಾಪಿಸಿರುವುದನ್ನು ಇಲ್ಲಿ ಗಮನಿಸಬಹುದು.

ಈಗಾಗಲೇ 70ಕ್ಕೂ ಅಧಿಕ ದೇಶಗಳಿಗೆ ಲಸಿಕೆ ವಿತರಿಸಿದ ಹೆಮ್ಮೆ ಭಾರತಕ್ಕಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪ ಬಂಗಾಳ: 85 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿದ ಟಿಎಂಸಿ

Mon Mar 29 , 2021
ಪಶ್ಚಿಮ ಬಂಗಾಳದ ಚುನಾವಣೆ ನಡೆಯುತ್ತಿದ್ದು, ಆಢಳಿತದಲ್ಲಿರುವ  ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹತಾಶೆಯ ಇನ್ನೊಂದು ಮಗ್ಗುಲು ತಲಪಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ವಿರೋಧಿ ಪಕ್ಷ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ, ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ 85 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿದ್ದಾರೆ. ಬಿಜೆಪಿ ನಾಯಕ ಗೋಪಾಲ್ ಮಜುಂದಾರ್ ಅವರ 85 ವರ್ಷದ ತಾಯಿ ಶೋವಾ ಮಜುಂದಾರ್ ಅವರು ತೃಣಮೂಲ ಕಾಂಗ್ರೆಸ್ ಗೂಂಡಾಗಳು ನಡೆಸಿದ ಹಲ್ಲೆಯಿಂದಾಗಿ ಇಂದು ಸೋಮವಾರ […]