ಗಿರಿನಗರದಲ್ಲಿ ರಕ್ತದಾನ ಶಿಬಿರ: 138 ಯೂನಿಟ್ ಸಂಗ್ರಹ

ಬೆಂಗಳೂರು, 7 ಫೆಬ್ರವರಿ: ಬೆಂಗಳೂರು ಮಹಾನಗರದ ಗಿರಿನಗರದಲ್ಲಿ ನಿನ್ನೆ ರಕ್ತದಾನ ಶಿಬಿರ ನಡೆಯಿತು. ಜನನಿ ಸೇವಾ ಸಂಸ್ಥೆ, ಸಂಸ್ಕೃತ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಜತೆಗೂಡಿ ಆಯೋಜಿಸಿದ್ದ ಈ ಶಿಬಿರದಲ್ಲಿ 138 ಜನ ದಾನಿಗಳು ರಕ್ತದಾನ ಮಾಡಿದರು. ರಾಷ್ಟ್ರೋತ್ಥಾನ ರಕ್ತನಿಧಿ ರಕ್ತ ಸಂಗ್ರಹಿಸಿತು.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ರಾಷ್ಟ್ರೋತ್ಥಾನ ರಕ್ತನಿಧಿಯಂತಹ ಸಂಸ್ಥೆಗಳು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಬ್ಲಡ್ ಟ್ರಾನ್ಸ್ ಫ್ಯೂಶನ್ ಮಾಡಲು ರಾಷ್ಟ್ರೋತ್ಥಾನ ರಕ್ತನಿಧಿ ಪ್ರಾರಂಭಿಸಿರುವ ಸಂರಕ್ಷಾ ಪ್ರಕಲ್ಪದಿಂದ ನೂರಾರು ಮಕ್ಕಳು ಪ್ರಯೋಜನ ಪಡೆಯುತ್ತಿದ್ದು, ಇಂತಹ ಕೆಲಸಕ್ಕೆ ತಮ್ಮ ಸಹಕಾರ ಸದಾ ಇರಲಿದೆ ಎಂದರು.

ಆರೆಸ್ಸೆಸ್ ನ ಬೆಂಗಳೂರು ದಕ್ಷಿಣ ವಿಭಾಗದ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ ಮಾತನಾಡಿ ಕೋವಿಡ್ 19 ರ ಸಂದರ್ಭದಲ್ಲಿ ಎಲ್ಲೆಡೆ ಲಾಕ್ ಡೌನ್ ಇದ್ದರೂ ಆರೆಸ್ಸೆಸ್ಸಿನ ಸ್ವಯಂಸೇವಕರು ರಾಜ್ಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ತುರ್ತು ಅಗತ್ಯವಿರುವ ರೋಗಿಗಳಿಗೆ ರಕ್ತ ಸಿಗುವಂತೆ ನೋಡಿಕೊಂಡಿದ್ದಾರೆ. ಸಂಘದ ಶಾಖೆಯಲ್ಲಿನ ಸಂಸ್ಕಾರದಿಂದಾಗಿ ಸ್ವಯಂಸೇವಕರು ಸಮಾಜಸೇವೆಗೆ ಸದಾ ಸಿದ್ಧರಾಗಿರುತ್ತಾರೆ. ಮನೆಪಾಠ, ಭಜನೆ, ಸ್ಲಮ್ ಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ, ಮಕ್ಕಳಿಗಾಗಿ ಜೋಳಿಗೆ ಪುಸ್ತಕಾಲಯ ಮೊದಲಾದ ಪ್ರಕಲ್ಪಗಳನ್ನು ಸಂಘದ ಸ್ವಯಂಸೇವಕರು ನಡೆಸುತ್ತದ್ದಾರೆ. ಆರೆಸ್ಸೆಸ್ ಎನ್ನುವುದು ಕೇವಲ ಒಂದು ಸಂಸ್ಥೆಯಲ್ಲ. ಅದೊಂದು ಸಮಾಜಸೇವೆಯ ಆಂದೋಲನ. ಈ ಆಂದೋಲನದಲ್ಲಿ ಸಂಪೂರ್ಣ ಸಮಾಜ ಭಾಗವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್, ಸಂಸ್ಕೃತ ಭಾರತಿಯ ಸಂಘಟನಾ ಕಾರ್ಯದರ್ಶಿ ನಾಗರಾಜ್, ಜನನಿ ಸೇವಾ ಸಂಸ್ಥೆಯ ರಾಘವೇಂದ್ರ ಹಂದೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

1178 ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಗೆ ಕೇಂದ್ರ ಸರಕಾರ ಸೂಚನೆ

Mon Feb 8 , 2021
ಭಾರತದ ವಿರುದ್ಧಅಪಪ್ರಚಾರ ಮಾಡುವ ಹಾಗೂ ದೇಶವಿರೋಧಿ ಹೇಳಿಕೆ ನೀಡುವ 1178 ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಖಲಿಸ್ತಾನ ಹೋರಾಟಗಾರರರು ಸೇರಿದಂತೆ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ ಕೆಲಸ ಮಾಡುತ್ತಿರುವುದು ಇದೀಗ  ಬಯಲಾಗಿದೆ. ಈ ದೇಶವಿರೋಧಿ ಶಕ್ತಿಗಳು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಮಾನ ಮಾಡುವ  ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಲುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ 1178 ಪಾಕಿಸ್ತಾನಿ, ಖಲಿಸ್ತಾನಿ ಟ್ವಿಟ್ಟರ್ ಖಾತೆಗಳನ್ನು […]