ಚೀನಾ ಯೋಜನೆಯನ್ನು ರದ್ದುಗೊಳಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ: ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಆಸ್ಟ್ರೇಲಿಯಾ ಸರ್ಕಾರವು ಚೀನಾದೊಂದಿಗೆ ಮಾಡಿಕೊಂಡಿದ್ದ ಮೂಲಸೌಲಭ್ಯ ಅಭಿವೃದ್ಧಿ ಒಪ್ಪಂದಗಳನ್ನು  ರದ್ದುಗೊಳಿಸಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು ಚೀನಾದೊಂದಿಗೆ ‘ಬೆಲ್ಟ್‌ ಆ್ಯಂಡ್‌ ರೋಡ್‌‘ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗೆ 2018 ಮತ್ತು 2019ರಲ್ಲಿ ಸಹಿ ಹಾಕಿತ್ತು. 1999ರಲ್ಲಿ ಸಿರಿಯಾ ಮತ್ತು 2004ರಲ್ಲಿ ಇರಾನ್ ಜತೆಗೂ ವಿಕ್ಟೋರಿಯಾ ರಾಜ್ಯದ  ಶಿಕ್ಷಣ ಇಲಾಖೆಯು ಒಪ್ಪಂದ ಮಾಡಿಕೊಂಡಿತ್ತು. ಹೊಸ ಕಾನೂನುಗಳ ಅಡಿಯಲ್ಲಿ ಈ ನಾಲ್ಕೂ ಒಪ್ಪಂದಗಳು ರಾಷ್ಟ್ರೀಯ ಹಿತಾಸಕ್ತಿಗೆ ಭಂಗ ತರುತ್ತವೆ ಎಂಬ ನೆಲೆಯಲ್ಲಿ ಅವುಗಳನ್ನು ರದ್ದುಪಡಿಸಲಾಗಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್‌ ಪೈನೆ ತಿಳಿಸಿದ್ದಾರೆ.

ಈ ನಿರ್ಧಾರಕ್ಕೆ  ಚೀನಾ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾ–ಆಸ್ಟ್ರೇಲಿಯಾ ಸಂಬಂಧ ಸುಧಾರಣೆಗೆ ಅಸ್ಟ್ರೇಲಿಯಾ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ಆಸ್ಟ್ರೇಲಿಯಾದ ಚೀನಾದ ರಾಯಭಾರ ಕಚೇರಿಯ ಆಕ್ಷೇಪ ವ್ಯಕ್ತಪಡಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಯೋಧ್ಯೆಯಲ್ಲಿ ಅತ್ಯಾಧುನಿಕ ಆಮ್ಲಜನಕ ಘಟಕ ತೆರೆಯಲು ಮುಂದಾದ ರಾಮ ಜನ್ಮಭೂಮಿ ಟ್ರಸ್ಟ್

Thu Apr 22 , 2021
ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ದೇವಾಲಯದ ನಿರ್ಮಾಣಕ್ಕಾಗಿ ಮತ್ತು ಅಯೋಧ್ಯಾ ಪ್ರದೇಶದ ಅಭಿವೃದ್ಧಿಗೆ ಕೆಲಸ ಮಾಡುವ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ  ಟ್ರಸ್ಟ್, ಕರೋನಾ ಸೋಂಕಿತ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿದೆ. 55 ಲಕ್ಷ ರೂ ವೆಚ್ಚದಲ್ಲಿ ಅಯೋಧ್ಯೆಯ ದಶರಥ ವೈದ್ಯಕೀಯ ಕಾಲೇಜಿನಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುವುದಾಗಿ ಟ್ರಸ್ಟ್ ಘೋಷಿಸಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರು ಮಾತನಾಡಿ, […]