ಚುನಾವಣಾ ಕರ್ತವ್ಯ ತಪ್ಪಿಸಿಕೊಳ್ಳಲು ಅನಾರೋಗ್ಯದ ಮೆಡಿಕಲ್‌ ಸರ್ಟಿಫಿಕೇಟ್ ಕೊಟ್ಟವರಿಗೆ ಈಗ ಅದೇ ಸರ್ಟಿಫಿಕೇಟ್ ಆಧಾರದಲ್ಲಿ ಕೆಲಸದಿಂದಲೇ ಬಿಡುಗಡೆಗೊಳ್ಳಬೇಕಾದ ಪ್ರಸಂಗ

ಅಸ್ಸಾಂ, ಮಾರ್ಚ್ 17: ಸುಳ್ಳು ಅನಾರೋಗ್ಯದ ವೈದ್ಯಕೀಯ ಸರ್ಟಿಫಿಕೇಟ್ ನೀಡಿ ಚುನಾವಣಾ ಕೆಲಸ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ 17 ಮಂದಿ ಇದೀಗ ಅದೇ ಸರ್ಟಿಫೀಕೇಟ್ ಆಧಾರದಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹೌದು, ಈ ಘಟನೆ ನಡೆದದ್ದು ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾದ ಅಸ್ಸಾಂನಲ್ಲಿ.  ಇದೇ ಮಾರ್ಚ್ 27ರಿಂದ 3 ಹಂತಗಳಲ್ಲಿ ಅಸ್ಸಾಂನ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣಾ ಕರ್ತವ್ಯಕ್ಕೆ ಸರ್ಕಾರೀ ಅಧಿಕಾರಿಗಳನ್ನು ಬಳಸಿಕೊಳ್ಳುವುದು ಸಾಮಾನ್ಯ.

ಚುನಾವಣಾ ಕರ್ತವ್ಯವ್ನನು ತಪ್ಪಿಸಿಕೊಳ‍್ಳುವ ಅಸ್ಸಾಂನ  ನಲ್ಬಾರಿ ಜಿಲ್ಲೆಯ 17 ಅಧಿಕಾರಿಗಳು ಸುಳ್ಳು ಅನಾರೋಗ್ಯದ ವೈದ್ಯಕೀಯ ಸರ್ಟಿಫಿಕೇಟ್ ನೀಡಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.

ಇದೇ ಸರ್ಟಿಫಿಕೇಟ್ ಆಧಾರವಾಗಿಸಿಕೊಂಡ ಜಿಲ್ಲಾಧಿಕಾರಿ ಸರ್ಕಾರಿ ಕೆಲಸಕ್ಕೆ ಆರೋಗ್ಯ ಬಹುಮುಖ್ಯವಾಗಿದೆ.  ನೀವು ಅನಾರೋಗ್ಯ ಪೀಡಿತರಾಗಿರುವುದರಿಂದ ಸರ್ಕಾರೀ ಕೆಲಸದಲ್ಲಿ ಮುಂದುವರಿಯುವುದು ಸರಿಯಲ್ಲ. ಹೀಗಾಗಿ ವಿಆರ್ ಎಸ್ (ಸ್ವಯಂ ನಿವೃತ್ತಿ) ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ರಾಜ್ಯಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಬೆಂಗಳೂರಿನಲ್ಲಿ ೨ ದಿನಗಳ ಆರೆಸ್ಸೆಸ್ ಎಬಿಪಿಎಸ್ ಗೆ ಚಾಲನೆ RSSABPS2021 #RSSABPS

Fri Mar 19 , 2021
ಆರೆಸ್ಸೆಸ್ ನ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಂದು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಭಾರತಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು. ಕಳೆದ ಬಾರಿಯ ಎಬಿಪಿಎಸ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಯಲಿಲ್ಲ. ಕಸಾಮಾನ್ಯವಾಗಿ ಎಬಿಪಿಎಸ್ ನಲ್ಲಿ 1,500 ಪ್ರತಿನಿಧಿಗಳು ಪ್ರತಿ ವರ್ಷ ಭಾಗವಹಿಸುತ್ತಾರೆ. ಆದರೆ ಈ ವರ್ಷ 450 […]