ಚುನಾವಣೋತ್ತರ ಹಿಂಸಾಚಾರ-ಹತ್ಯೆಗಳ ಸಮೀಕ್ಷೆಗೆ 4 ಜನರ ಉನ್ನತ ಮಟ್ಟದ ಸಮಿತಿಯನ್ನು ಪಶ್ಚಿಮ ಬಂಗಾಳಕ್ಕೆ ಕಳಹಿಸಿದ ಕೇಂದ್ರ ಗೃಹ ಇಲಾಖೆ

ನವದೆಹಲಿ: ಚುನಾವಣೋತ್ತರ ಹಿಂಸಾಚಾರ-ಹತ್ಯೆಗಳ ಸಮೀಕ್ಷೆ ನಡೆಸಲು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ 4 ಜನರ ತಂಡವನ್ನು ಬಂಗಾಳಕ್ಕೆ ಕಳುಹಿಸಿದ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಕಳುಹಿಸಿದೆ.

ಇತ್ತ ಪಶ್ಚಿಮ ಬಂಗಾಲದ ರಾಜ್ಯಪಾಲರಾದ ಜಗದೀಪ್ ಧಂಕರ್  ಅವರು, ನನಗೆ ಹಿಂಸಾಚಾರದ ವರದಿ ನೀಡದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರಿಗಳನ್ನು ತಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲು ಕೇಂದ್ರ ಗೃಹ ಸಚಿವಾಲಯವು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸೂಚಿಸಿತ್ತು. ಸಮಯ ವ್ಯರ್ಥ ಮಾಡದೇ ಶೀಘ್ರದಲ್ಲೇ ವರದಿ ಸಲ್ಲಿಸಿ, ವಿಫಲವಾದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಗೃಹ ಸಚಿವಾಲಯ ಪತ್ರ ಬರೆದು ಎಚ್ಚರಿಕೆ ನೀಡಿದೆ. ನಿಮ್ಮ ರಾಜ್ಯದಲ್ಲಿ ಹಿಂಸಾಚಾರಗಳು ಇನ್ನೂ ನಿಂತಿಲ್ಲ. ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಕೇಂದ್ರ ಗೃಹ ಇಲಾಖೆಯ  ಯಾವುದೇ ಪತ್ರಗಳಿಗೆ ಪ್ರತಿಕ್ರಿಯಿಸದೇ ಒಕ್ಕೂಟ ವ್ಯವಸ್ಥೆಗೆ ಸವಾಲೆಸೆಯುವಂತಹ ಚಟುವಟಿಕೆಗೆ ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿದೆ.

ಮೇ 2ರಂದು ಚುನಾವಣಾ ಫಲಿತಾಂಶ ಬಂದ ನಂತರದಲ್ಲಿ ಬಂಗಾಳದ ಹಲವು ಕಡೆಗಳಲ್ಲಿ 15ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಅನೇಕ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಷದ ಅನೇಕ ಕಾರ್ಯಕರ್ತರ ಮನೆ ಮತ್ತು ಅಂಗಡಿಗಳು ಧ್ವಂಸವಾಗಿವೆ. ಮಮತಾ ಬ್ಯಾನರ್ಜಿ ಸೋಲು ಮತ್ತು ತೃಣಮೂಲ ಕಾಂಗ್ರೆಸ್​ ಗೆಲುವನ್ನು ಹಿಂಸೆ ಮತ್ತು ರಕ್ತದಿಂದ ಆಚರಿಸಲು ಟಿಎಂಸಿ ಪ್ರಾರಂಭಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಟಿಎಂಸಿ ದೌರ್ಜನ್ಯ ಖಂಡಿಸಿ ಬಂಗಾಳಕ್ಕೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮೇ 5ರಂದು ಪಶ್ಚಿಮ ಬಂಗಾಳಕ್ಕೆ  ಭೇಟಿ ನೀಡಿ ಹಿಂಸಾಚಾರಕ್ಕೆ ಒಳಗಾದ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಬದಲಾಗುತ್ತಿರುವ ವಿಶ್ವದ ವ್ಯಾಕ್ಸಿನ್ ವಿಚಾರಧಾರೆ - ಇದು ಔದಾರ್ಯವಲ್ಲ, ಎಕನಾಮಿಕ್ಸ್!

Fri May 7 , 2021
ಅಲೆ ಅಲೆಗಳಲ್ಲಿ ಭೀಕರವಾಗುತ್ತ ಸಾಗಿರುವ ಕರೋನಾ ಕಾಲಘಟ್ಟದಲ್ಲಿ ಅಮೆರಿಕದ ಒಂದು ನಿಲವು ತುಸು ಅಚ್ಚರಿ ಉಂಟುಮಾಡುವಂತಿದೆ. ಲಸಿಕೆಗಳನ್ನು ಹಕ್ಕುಸ್ವಾಮ್ಯ ಮುಕ್ತವಾಗಿಸುವುದಕ್ಕೆ ತನ್ನದೂ ಅನುಮೋದನೆ ಇದೆ ಅಂತ ಬಿಡೆನ್ ಆಡಳಿತ ವಿಶ್ವ ಆರೋಗ್ಯ ಸಂಸ್ಥೆಗೆ ಹೇಳಿದೆ. ಭಾರತದಂಥ ದೇಶಗಳು ಕೊರೊನಾಗೆ ಸಂಬಂಧಿಸಿದ ಲಸಿಕೆಗಳು ಪೆಟೆಂಟ್ ಮುಕ್ತವಾಗಿರಬೇಕು ಅಂತ ತುಂಬ ಪ್ರಾರಂಭದಲ್ಲೇ ಹೇಳಿತ್ತು. ಅರ್ಥಾತ್, ಲಸಿಕೆಯ ರೆಸಿಪಿ ಎಲ್ಲರಿಗೂ ತಿಳಿಯುವಂತೆ, ಸಂಸಾಧನಗಳಿರುವ ಬೇರೆ ದೇಶಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ಪಾದಿಸಿಕೊಳ್ಳಲು ಅನುವಾಗುವಂತಿರುವ ವ್ಯವಸ್ಥೆ. […]