ಚೈನಾ ಅತಿಕ್ರಮಣ ಕಾಂಗ್ರೆಸ್ ನೀತಿಗಳ ಪರಿಣಾಮ: ಅರುಣಾಚಲದ ಸಂಸದ ತಪಿರ್ ಗಾವೋ ಆರೋಪ

ಭಾರತದ  ಇಂದಿನ ಸಮಸ್ಯೆಗಳಿಗೆ ಸ್ವಾತಂತ್ರ್ಯಾನಂತರ ದೇಶದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕರುಗಳ  ನೀತಿಗಳೇ ಕಾರಣ ಎಂದು ಇತಿಹಾಸ ಸ್ಪಷ್ಟವಾಗಿ ತಿಳಿಸುತ್ತದೆ. ಅಂತಹ  ಒಂದು ಸಮಸ್ಯೆ ಚೈನಾ. ಸ್ವಪ್ರತಿಷ್ಠೆಗಾಗಿ ಪ್ರಥಮ ಪ್ರಧಾನಿ ನೆಹರು ಭದ್ರತಾ ಮಂಡಳಿ ಸದಸ್ಯತ್ವ ಚೀನಾಕ್ಕೆ ಧಾರೆ ಎರೆದ ಉದಾಹರಣೆ ನಮಗೆಲ್ಲಾ ತಿಳಿದೇ ಇದೆ. ಅಂತಹದ್ದೇ ಒಂದು ಸಮಸ್ಯೆ ಅರುಣಾಚಲ ಪ್ರದೇಶದ್ದು.

ಅರುಣಾಚಲ ಪ್ರದೇಶ ಹಾಗೂ ಚೀನಾ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಚಿತ್ರಗಳಲ್ಲಿ ಸೆರೆಯಾಗಿದೆ. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ಭಾರತದ 4.5 ಕಿ. ಮೀ. ವ್ಯಾಪ್ತಿಯ ಗಡಿಯನ್ನು ಚೀನಾ ಸೇನೆ ಅತಿಕ್ರಮಿಸಿರುವ ಆರೋಪ ಕೇಳಿ ಬಂದಿದೆ. ಈ ಆರ

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೋ  ಅವರು ಇಂದಿನ ಈ ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “1980ರಿಂದಲೂ ಚೀನಾದವರು ಗಡಿಯಲ್ಲಿ ರಸ್ತೆ ಕಾಮಗಾರಿಯನ್ನು ನಡೆಸುತ್ತಲೇ ಬಂದಿದ್ದಾರೆ. ಅವರು ಲೊಂಗ್ಜುದಿಂದ ಮಾಜಾವರೆಗೂ ರಸ್ತೆ ಕಾಮಗಾರಿ ನಡೆಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅವಧಿಯಲ್ಲಿ ತವಾಂಗ್ ನಲ್ಲಿರುವ ಸಮ್ದೊರೊಂಗ್ ಚು ಕಣಿವೆಯನ್ನು ಅತಿಕ್ರಮಿಸಿಕೊಂಡಿತು. ಚೀನಾ ಲಿಬರೇಷನ್ ಆರ್ಮಿಯನ್ನು ಹಿಮ್ಮೆಟ್ಟಿರುವ ಕಾರ್ಯಾಚರಣೆ ಆರಂಭಿಸುವುದಕ್ಕೆ ಅಂದಿನ ಭಾರತೀಯ ಸೇನಾ ಮುಖ್ಯಸ್ಥರು ಅನುಮತಿ ಕೋರಿದರು.ರಾಜೀವ್ ಗಾಂಧಿಯವರು ಅಂದು ಭಾರತೀಯ ಸೇನೆಗೆ ಅನುಮತಿ ನೀಡಿರಲಿಲ್ಲ” ಎಂದಿರುವ ಅವರು ಅಂದಿನ ಕಾಂಗ್ರೆಸ್ ಸರ್ಕಾರವು ತೋರಿದ ಅಸಡ್ಡೆ ಪರಿಣಾಮದಿಂದಾಗಿ ಇಂದು ಗಡಿಯಲ್ಲಿನ ಚಿತ್ರಣವು ಬದಲಾಗುವಂತಾಗಿದೆ ಎಂದು ದೂಷಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪ್ರಜಾಪ್ರಭುತ್ವವು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ : ಭೈಯಾಜಿ ಜೋಶಿ

Thu Jan 21 , 2021
ರೈತರ ಹೋರಾಟದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ  ಭಯ್ಯಾಜಿ ಜೋಶಿ ಅವರ  ಹೇಳಿಕೆ  ಪ್ರಜಾಪ್ರಭುತ್ವ ಎರಡೂ ಕಡೆಯವರಿಗೆ ಒಂದು ಅವಕಾಶವನ್ನು ಒದಗಿಸುತ್ತದೆ.  ನಾನು ಎರಡೂ ಕಡೆಯವರು ತಮ್ಮ ನಿಲುವಿನಲ್ಲಿ ಸರಿಯಾಗಿ ಇದ್ದಾರೆ ಎಂದು ಪರಿಗಣಿಸುತ್ತೇನೆ.  ಸಂವಾದದ ಮೂಲಕ ತಾವು ಏನನ್ನು ಪಡೆಯಬಹುದು ಎಂಬುದನ್ನು ಹೋರಾಟಗಾರರು ಪರಿಗಣಿಸಬೇಕು ಮತ್ತು ಒಪ್ಪಿಕೊಳ್ಳಬೇಕು.  ಇದಕ್ಕಿಂತ ಇನ್ನೇನು ಹೆಚ್ಚಿನದನ್ನು  ನೀಡಬಹುದು ಎಂಬುದರ ಕುರಿತು ಸರ್ಕಾರ ಯೋಚಿಸಬೇಕು.  ಆಂದೋಲನಗಳು ನಡೆಯುತ್ತವೆ ಮತ್ತು ಹಾಗೆಯೇ ಅವುಗಳು ಕೊನೆಗೊಳ್ಳುತ್ತವೆ.  ಆದ್ದರಿಂದ […]