ಜಗತ್ತಿನ ಬಲಿಷ್ಠ ಸೇನೆ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

ಜಗತ್ತಿನ ಬಲಿಷ್ಠ ಸೇನೆಗಳ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನದಲ್ಲಿದೆ ಎಂದು ಮಿಲಿಟರಿ ಡೈರೆಕ್ಟ್ ವರದಿ ಹೇಳಿದೆ.

ಮಿಲಿಟರಿ ಡೈರೆಕ್ಟ್ ಎಂಬ ವೆಬ್ಸೈಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಪ್ರಕಾರ 61 ಅಂಕಗಳೊಂದಿಗೆ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರ ಎಂದೇ ಕರೆಸಿಕೊಳ್ಳುತ್ತಿದ್ದ ಅಮೆರಿಕ ಸೇನೆ 2ನೇ ಸ್ಥಾನದಲ್ಲಿದ್ದರೆ,  ಚೀನೀ ಸೇನೆ ಅಗ್ರ ಸ್ಥಾನಕ್ಕೇರಿದೆ.

ಜಗತ್ತಿನ ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ ಎಂದು ಮಿಲಿಟರಿ ಡೈರೆಕ್ಟ್ ವರದಿ ಹೇಳಿದೆ.

ಮಿಲಿಟರಿ ಡೈರೆಕ್ಟ್’ ವೆಬ್ಸೈಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಪ್ರಕಾರ ಇಷ್ಟು ದಿನ ಜಗತ್ತಿನ ಸೂಪರ್ ಪವರ್ ರಾಷ್ಟ್ರ ಎಂದೇ ಕರೆಸಿಕೊಳ್ಳುತ್ತಿದ್ದ ಅಮೆರಿಕ ಸೇನೆ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದು, ಅಚ್ಚರಿ ಬೆಳವಣಿಗೆಯಲ್ಲಿ ಚೀನಾ ಸೇನೆ ಅಗ್ರ ಸ್ಥಾನಕ್ಕೇರಿದೆ.

ಅಧ್ಯಯನದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅನುದಾನ, ಸಕ್ರಿಯ ಮತ್ತು ಸಕ್ರಿಯವಲ್ಲದ ಸೇನಾ ಸಿಬಂದಿಗಳ ಸಂಖ್ಯೆ, ವಾಯುಪಡೆ, ನೌಕಾಬಲ, ಭೂಸೇನೆ ಮತ್ತು ಪರಮಾಣು ಶಸ್ತ್ರಗಳ ಸಂಪನ್ಮೂಲ, ಸರಾಸರಿ ವೇತನ, ಆಯುಧಗಳ ತೂಕವನ್ನು ಲೆಕ್ಕ ಹಾಕಲಾಗಿದೆ ಎಂದು ಮಿಲಿಟರಿ ಡೈರೆಕ್ಟ್ ತಿಳಿಸಿದೆ. ಒಟ್ಟು 100 ಅಂಕಗಳಲ್ಲಿ 82 ಅಂಕ ಗಳಿಸಿ ಚೀನಾ 10 ಬಲಿಷ್ಟ ಸೇನೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಅಮೆರಿಕ 79 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. 69 ಅಂಕ ಪಡೆದು ರಷ್ಯಾ ಮೂರನೇ ಸ್ಥಾನದಲ್ಲಿದೆ. ಫ್ರಾನ್ಸ್(58 ಅಂಕ) ಐದನೇ ಸ್ಥಾನದಲ್ಲಿದ್ದರೆ, ಬ್ರಿಟನ್ (43 ಅಂಕ) 9ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ನೌಕಾಸೇನೆಯಲ್ಲಿ ಚೈನಾ , ವಾಯುಸೇನೆಯಲ್ಲಿ ಅಮೆರಿಕ ಹಾಗೂ ಭೂಸೇನೆಯಲ್ಲಿ ರಷ್ಯಾ ಅಗಾಧ ಸೇನೆ ಹೊಂದಿದೆ ಎಂದು  ವರದಿ ತಿಳಿಸಿದೆ. ಅಮೆರಿಕದ ಬಳಿ 14,441 ಯುದ್ಧವಿಮಾನಗಳಿದ್ದರೆ ರಷ್ಯಾದ ಬಳಿ 4,682 ಮತ್ತು ಚೀನಾದ ಬಳಿ 3,587 ಯುದ್ಧವಿಮಾನಗಳಿವೆ. ರಷ್ಯಾದ ಬಳಿ ಯುದ್ಧಟ್ಯಾಂಕ್ ಮತ್ತಿತರ ಭೂಸೇನೆಯಲ್ಲಿ ಬಳಸುವ 54,866 ವಾಹನಗಳಿದ್ದರೆ ಅಮೆರಿಕದ ಬಳಿ 50,326, ಚೀನಾದ ಬಳಿ 41,641 ವಾಹನಗಳಿವೆ. ಚೀನಾದ ಬಳಿ 406 ಯುದ್ಧನೌಕೆಗಳಿದ್ದರೆ, ರಷ್ಯಾದ ಬಳಿ 278 ಹಾಗೂ ಭಾರತ ಮತ್ತು ಅಮೆರಿಕದ ಬಳಿ 202 ಯುದ್ಧನೌಕೆಗಳಿವೆ.

ಅಮೆರಿಕ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ನಲ್ಲಿ ವಾರ್ಷಿಕ 732 ಬಿಲಿಯನ್ ಡಾಲರ್ ಅನುದಾನ ಮೀಸಲಿಡುತ್ತದೆ. ಅನುದಾನ ಮೀಸಲಿಡುವ ವಿಶ್ವದ ಪ್ರಮುಖ ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು ವಾರ್ಷಿಕವಾಗಿ 261 ಬಿಲಿಯನ್ ಡಾಲರ್ ಬಜೆಟ್ ನಲ್ಲಿ ಮೀಸಲಿಟ್ಟರೆ, ಮೂರನೇ ಸ್ಥಾನದಲ್ಲಿರುವ ಭಾರತ 71 ಬಿಲಿಯನ್ ಡಾಲರ್ ಅನುದಾನ ಮೀಸಲಿಡುತ್ತದೆ ಎಂದಿದೆ ವರದಿ. 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಎಬಿಪಿಎಸ್ ಆಶಯದ ಹಿನ್ನೆಲೆಯಲ್ಲಿ ಸಾಮಾಜಿಕ ಪರಿವರ್ತನೆಯ ವೈಚಾರಿಕ ನೆಲೆಗಳು

Mon Mar 22 , 2021
ಶ್ರೀ. ದತ್ತಾತ್ರೇಯ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ರಾಸ್ವಸಂದ) ಸರಕಾರ್ಯವಾಹರಾಗಿ ಚುನಾಯಿತರಾಗಿದ್ದಾರೆ.  ಸರಕಾರ್ಯವಾಹರೆಂದರೆ ಪ್ರಧಾನ ಕಾರ್ಯದರ್ಶಿ ಎನ್ನಬಹುದು. ಈ ಜವಾಬ್ದಾರಿಯು ಕಾರ್ಯತತ್ಪರ ಮುಖ್ಯಸ್ಥರ ಮಟ್ಟದ್ದಾಗಿದೆ.  ಸರಸಂಘಚಾಲಕರ ನೇತೃತ್ವ-ಮಾರ್ಗದರ್ಶನಗಳಲ್ಲಿ ಈ ಜವಾಬ್ದಾರಿಯುನ್ನು ನಿರ್ವಹಿಸಲಾಗುತ್ತದೆ.  ನೂತನ ಜವಾಬ್ದಾರಿ ಸ್ವೀಕರಿಸಿದ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ (ಅಭಾಪ್ರಸ ಅಥವಾ ಎಬಿಪಿಎಸ್) 2021ರ ಸಾಲಿನ ನಿರ್ಣಯಗಳೆರಡನ್ನೂ ವಿವರಿಸಿದ ನಂತರ, ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಯು “ಕಾರ್ಯವಿಸ್ತರಣೆ, ಸಾಮಾಜಿಕ ಪರಿವರ್ತನೆ, ಮತ್ತು […]