ದಿನಗೂಲಿ ನೌಕರನ ಪತ್ನಿ ಈಗ ಪ. ಬಂಗಾಳದ ಶಾಸಕಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿದೆ. ಹಲವು ಅಚ್ಚರಿ, ವಿಶೇಷತೆಗಳನ್ನು ಕಾಣಬಹುದಾಗಿದೆ. ಈ ಬಾರಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋತರು, ಆದರೆ ಟಿಎಂಸಿ ಅಭೂತಪೂರ್ವ ಯಶಸ್ಸು ಕಂಡಿತು. ಕೇವಲ 3 ಶಾಸಕರಿದ್ದ ಬಿಜೆಪಿ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ 77 ಶಾಸಕರನ್ನುಶಾಸನಸಭೆಗೆ ಕಳುಹಿಸಿದ್ದು ಕಡಮೆಯೇನಲ್ಲ.

ಈ ಮಧ್ಯೆ ಓರ್ವ ಮಹಿಳಾ ಅಭ್ಯರ್ಥಿ ಜಯ ಗಳಿಸಿರುವುದು ವಿಶೇಷ ಸುದ್ದಿಯಾಗಿದೆ. ಅದು ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ, ಇವರ ಗೆಲುವು ಐತಿಹಾಸಿಕ ಎಂದು ಬಂಗಾಳದ ಮಾತ್ರವಲ್ಲ ಇಡೀ ದೇಶದ  ಜನ ಬಣ್ಣಿಸುತ್ತಿದ್ದಾರೆ. ಚಂದನಾ ಬೌರಿ, ರಾಜಕೀಯ ಕುಟುಂಬಕ್ಕೆ ಸೇರಿದವರಲ್ಲ. ಶ್ರೀಮಂತ ಮನೆತನದವರೂ ಅಲ್ಲ. ಅವರ ಪತಿ ಕೂಲಿ ಕಾರ್ಮಿಕ.

ಸಾಲ್ಟೋರಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದ ಚಂದನಾ ಅವರು ಟಿಎಂಸಿ ನಾಯಕ ಸಂತೋಷ್ ಕುಮಾರ್ ಮೊಂಡಲ್ ವಿರುದ್ಧ ಸ್ಪರ್ಧಿಸಿ 4ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

30 ವರ್ಷದ ಚಂದನಾರ ಪತಿ ಕಲ್ಲು ಕೆಲಸ ಮಾಡುವ ದಿನಗೂಲಿ ನೌಕರ. ಮೂರು ಮಕ್ಕಳ ತಾಯಿ. ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ. ಇದರಿಂದಲೇ ಬಂದ ಹಣದಿಂದ ಕೂಡಿಟ್ಟು ಸಂಸಾರ ನಡೆಸುತ್ತಿದ್ದಾರೆ.

ಚುನಾವಣಾ ಅಫಿಡವಿತ್ ಪ್ರಕಾರ ಚಂದಾ ಅವರ ಒಟ್ಟು ಆಸ್ತಿ ಮೊತ್ತ ಕೇವಲ 31,985 ರೂಪಾಯಿ (31 ಸಾವಿರದ 985 ರೂಪಾಯಿ) ಹಾಗೂ ತಮ್ಮ ಪತಿಯ ಆಸ್ತಿಯ ಮೊತ್ತ 30,311 ರೂಪಾಯಿ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ವಾಕ್ಸಿನ್‌ನಂತೆಯೇ ಯಶಸ್ವಿ ಭಾರತದ ರಾಜತಾಂತ್ರಿಕತೆ

Wed May 5 , 2021
ಸಾಲು ಸಾಲಾಗಿ ದೇಶಗಳು ಭಾರತದ ಬೆನ್ನಿಗೆ ನಿಲ್ಲಲು ಮುಂದೆ ಬರುತ್ತಿವೆ. ಈಗ ಭಾರತ ಜಗತ್ತಿನಲ್ಲಿ ಏಕಾಂಗಿಯಲ್ಲ. ಕೆಲವೇ ದಿನಗಳ ಹಿಂದೆ ಭಾರತಕ್ಕೆ ಕೊರೊನಾ ವಾಕ್ಸಿನ್‌ ತಯಾರಿಕೆಗೆ ಅತ್ಯಗತ್ಯ ಕಚ್ಚಾವಸ್ತುಗಳನ್ನು ಪೂರೈಸಲು ತಾನು ಅವಕಾಶ ಮಾಡಿಕೊಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋಬೈಡೆನ್‌ ಹೇಳಿಕೆಯಿತ್ತರು. ಅವರ ಆ ಹೇಳಿಕೆಗೆ ಭಾರತ ಅಳುಮುಂಜಿಯ ಪ್ರತಿಕ್ರಿಯೆಯನ್ನು ನೀಡಲಿಲ್ಲ. ʼಅಯ್ಯೋ ಕಾಪಾಡಿ ನೀವಲ್ಲದಿದ್ದರೆ ನಮಗಾರು ಗತಿʼ ಎಂದು ಕೆಂಗೆಡಲಿಲ್ಲ. ಏಕೆಂದರೆ ಇದೀಗ ಜಗತ್ತು ಕಾಣುತ್ತಿರುವುದು ಬದಲಾದ ಭಾರತವನ್ನು. […]