ನಕ್ಸಲರಿಂದ ಸೆರೆಯಲ್ಲಿರುವ ಯೋಧ ರಾಕೇಶ್ವರ್ ಸಿಂಗ್ ಅವರ ಫೋಟೋ ಬಿಡುಗಡೆ

ಮಾವೋವಾದಿ ನಕ್ಸಲರು ತಮ್ಮ ಸೆರೆಯಲ್ಲಿರುವ ಸಿಆರ್‌ಪಿಎಫ್‌ ಯೋಧ ರಾಕೇಶ್ವರ್ ಸಿಂಗ್ ಮನ್ಹಾ  ಅವರ ಫೋಟೋವನ್ನು ಸ್ಥಳೀಯ ಪತ್ರಕರ್ತನ ಮೂಲಕ ಬಿಡುಗಡೆ ಮಾಡಿದ್ದಾರೆ.

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಭಾರತದ ಹೆಮ್ಮೆಯ 24 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 31 ಮಂದಿ ಯೋಧರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ಧಾರೆ.

ಇನ್ನೊಂದು ಕಡೆ ಸಿಆರ್‌ಪಿಎಫ್‌ ಯೋಧ ರಾಕೇಶ್ವರ್ ಸಿಂಗ್ ಮನ್ಹಾ ಅವರು ನಾಪತ್ತೆಯಾಗಿದ್ದು, ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಶಂಕಿಸಲಾಗಿತ್ತು. ಇದೀಗ ಇಂದು ಬೆಳಗ್ಗೆ ನಕ್ಸಲರು ಸ್ಥಳೀಯ ಪತ್ರಕರ್ತರ ಮೂಲಕ ಯೋಧ ರಾಕೇಶ‍್ವರ್ ಅವರ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಛತ್ತೀಸ್‌ಗಡದ ಬಿಜಾಪುರದ ಗ್ರಾಮದಲ್ಲಿ ಭಾರೀ ಸಂಖ್ಯೆಯ ನಕ್ಸಲರು ಇರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸೂಕ್ತ ಕಾರ್ಯತಂತ್ರ ರೂಪಿಸಿ ಸಿಆರ್ ಪಿಎಫ್ ತಂಡವು ಕಾರ್ಯಾಚರಣೆ ನಡೆಸಿತ್ತು.ಈ ಕಾರ್ಯಾಚರಣೆಗೆ ಕೋಬ್ರಾ ಬೆಟಾಲಿಯನ್, ಡಿಆರ್‌ಜಿ, ಬಸ್ತಾರಿಯಾ ಬೆಟಾಲಿಯನ್ ಹಾಗೂ ಎಸ್‌ಟಿಎಫ್‌ ಕೂಡಾ ಸಾಥ್ ನೀಡಿದ್ದವು. ಈ ಕಾರ್ಯಾಚರಣೆಯಲ್ಲಿ ಸುಮಾರು 450 ಮಂದಿ ಯೋಧರು ಭಾಗಿಯಾಗಿದ್ದರು.

ಆದರೆ ಕಾರ್ಯಾಚರಣೆ ಮುಗಿಸಿ ಹಿಂದಿರುಗುವ ವೇಳೆ ಸುಮಾರು 750 ನಕ್ಸಲರು ತಂಡ ಅತ್ಯಂತ ಸುಸಜ್ಜಿತವಾದ ಆಯುಧಗಳೊಂದಿಗೆ 4500 ಮಂದಿ ಸಿಆರ್ ಪಿಎಫ್ ಮೇಲೆ ಗುಂಡಿನ ಮಳೆಗರೆಯಿತು.

ಇದಕ್ಕೆ ತಕ್ಕಪ್ರತ್ಯುತ್ತರ ನೀಡಿದ ಸಿಆರ್‌ಪಿಎಫ್ 28 ರಿಂದ 30 ಮಂದಿಯನ್ನು ನಕ್ಸಲ್ ಭಯೋತ್ಪಾದಕರನ್ನು ಕೊಂದು ಹಾಕಿತ್ತು. ಮತ್ತು ನಕ್ಸಲರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ.

ಈ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ಲೋಪ ಆಗಿಲ್ಲ ಎಂದು ಸಿಆರ್‌ಪಿಎಫ್‌ ಸ್ಪಷ್ಟಪಡಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸ್ವಯಂಸೇವಕರ ಅಕ್ಷಯ ವಿಶ್ವಾಸದ ಮೂಲ ಈ ‘ಅಂತರೀಕ್ಷಣೆ’

Wed Apr 7 , 2021
ಕೆಲವೇ ವರ್ಷಗಳ ಹಿಂದಿನವರೆಗೂ ಸಮಾಜದ ಒಂದು ವರ್ಗದಲ್ಲಿ ಹತಾಶೆ ಮಡುಗಟ್ಟಿಬಿಟ್ಟಿತ್ತು. ತಮ್ಮ ಕೂಗನ್ನು ಕೇಳಿಸಿಕೊಳ್ಳುವವರೇ ಇಲ್ಲವಲ್ಲ ಎಂಬ ಅಸಹಾಯಕತೆಯಿಂದ ಅವರು ಕೊರಗುತ್ತಿದ್ದರು. ಈ ದೇಶದಲ್ಲಿ ಬಹುಸಂಖ್ಯಾತರಾಗಿದ್ದೂ ನಮ್ಮ ಆಶಯಗಳಿಗೆ ಕಿವಿಯಾಗುವವರೇ ಇಲ್ಲವೆಂಬ ಅಸಮಾಧಾನವು ಜ್ವಾಲೆಯಾಗಿ ಉರಿಯುತ್ತಿತ್ತು. ತಮ್ಮ ಈ ಕನಸುಗಳನ್ನೇ ಬಂಡವಾಳವಾಗಿಸಿಕೊಂಡ ರಾಜಕೀಯ ಪಕ್ಷವೊಂದು ‘ನಾವು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿಯೇ ತೀರುತ್ತೇವೆ’ ಎಂದು ಪ್ರತಿ ಚುನಾವಣೆಯಲ್ಲೂ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಆಸೆ ಹುಟ್ಟಿಸುತ್ತಿತ್ತು. ಅದೆಷ್ಟೋ ಸಂಘರ್ಷ, ಅದೆಷ್ಟೋ […]