ನಮ್ಮ ನಡುವಿನ ಅಸಾಮಾನ್ಯ ಸಾಧಕರನ್ನು ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ

ದೆಹಲಿ: ನಮ್ಮ ನಡುವೆ ಇರುವ ಅಸಾಮಾನ್ಯ ಸಾಧಕರನ್ನು ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಮನವಿ ಮಾಡಿದ್ಧಾರೆ.

ಭಾರತವು ಅನೇಕ ಪ್ರತಿಭಾವಂತ ವ್ಯಕ್ತಿಗಳನ್ನು ಹೊಂದಿದೆ. ಅವರು ಅಸಾಧಾರಣ ಕೆಲಸವನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳು ಹೊರಜಗತ್ತಿಗೆ ಅಥವಾ ದೆಹಲಿಯ ವರೆಗೆ ತಲಪುವುದಿಲ್ಲ. ಅಂತಹ ಸ್ಪೂರ್ತಿದಾಯಕ ಅಸಾಮಾನ್ಯ ಸಾಧಕರು ನಿಮಗೆ ತಿಳಿದಿದ್ದಾರೆ? ನೀವು ಅವರನ್ನು #PeoplesPadma ಹ್ಯಾಶ್ ಟ್ಯಾಗ್ ಬಳಸಿ ನಾಮನಿರ್ದೇಶನ ಮಾಡಬಹುದು. ಸೆಪ್ಟೆಂಬರ್ 15 ರವರೆಗೆ ನಾಮನಿರ್ದೇಶನ ತೆರೆದಿರುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಜನವರಿಯಲ್ಲಿ ವರ್ಷದ ತನ್ನ ಮೊದಲ ‘ಮನ್ ಕಿ ಬಾತ್’ ಭಾಷಣದಲ್ಲಿ ಪಿಎಂ ಮೋದಿ ನಿಸ್ವಾರ್ಥವಾಗಿ ಕೆಲಸ ಮಾಡುವ ಎಲೆಮರೆಯ ಪ್ರತಿಭೆಗಳ ಬಗ್ಗೆ ತಿಳಿದುಕೊಳ್ಳಿ ಎಂದು ದೇಶದ ಜನರನ್ನು ಒತ್ತಾಯಿಸಿದ್ದರು.

ಜನರು ನಾಮ ನಿರ್ದೇಶನ ಮಾಡುವುದಕ್ಕಾಗಿ ಪದ್ಮ ಅವಾರ್ಡ್ಸ್ ವೆಬ್‌ಸೈಟ್‌ನ ಲಿಂಕ್ ಅನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಪದ್ಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಅಥವಾ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ನಾಮನಿರ್ದೇಶನ ಮಾಡಬಯಸುವವರು ಈ ಲಿಂಕ್ ಮೂಲಕ ಸಾಧಕರ ಹೆಸರನ್ನು ಸೂಚಿಸಬಹುದು: https://padmaawards.gov.in.

ಅರ್ಜಿಯನ್ನು ಯಾವ ರೂಪದಲ್ಲಿ ನೀಡಬೇಕೆಂದು ಸರ್ಕಾರ ಸೂಚಿಸಿದೆ. ನಾಮನಿರ್ದೇಶನ ಮಾಡುವ ಜನರು ನಿರೂಪಣಾ ರೂಪದಲ್ಲಿ ಉಲ್ಲೇಖವನ್ನು ಪೋಸ್ಟ್ ಮಾಡಬೇಕು. ಶಿಫಾರಸು ಮಾಡಿದ ವ್ಯಕ್ತಿಯ ಸಾಧನೆಗಳು / ಸೇವೆಯನ್ನು ಉಲ್ಲೇಖಿಸರುವ ಬರಹದ ನಿಗದಿತ ಪದ ಮಿತಿಯ 800 ಪದಗಳ ಒಳಗೆ ಇರಬೇಕು.

ಪದ್ಮ ಪ್ರಶಸ್ತಿಗಳು – ಪದ್ಮವಿಭೂಷಣ್, ಪದ್ಮಭೂಷಣ್ ಮತ್ತು ಪದ್ಮಶ್ರೀ – ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸೇರಿವೆ. ಈ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಯಿತು, ಮತ್ತು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ಔಷಧ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ವ್ಯಾಪಾರ ಮತ್ತು ಉದ್ಯಮ,ನಾಗರಿಕ ಸೇವೆಯಂತಹ ದೇಶದ ಗರಿಮೆ ಹೆಚ್ಚಿಸುವ ಎಲ್ಲಾ ಕ್ಷೇತ್ರಗಳಲ್ಲಿ / ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು / ಸೇವೆಗಾಗಿ ನೀಡಲಾಗುತ್ತದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮಾನವೀಯತೆಗೆ ಬೆಲೆಯಿಲ್ಲದೆ ಗೂಂಡಾಗಿರಿಯಿಂದ ವಿರೋಧಿಗಳನ್ನು ಮಂಡಿಯೂರುವಂತೆ ಮಾಡುವುದು, ಭಯೋತ್ಪಾದನೆ; ಪ್ರಜಾಪ್ರಭುತ್ವವಲ್ಲ!

Sat Jul 17 , 2021
ಸಿಟಿಜೆನ್ಸ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆಯು ಚುನಾವಣೋತ್ತರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಘೋರ ಹಿಂಸಾಚಾರದ ಕುರಿತಾಗಿ ಕಾಲ್ ಫಾರ್ ಜಸ್ಟಿಸ್ ಎಂಬ ನಾಗರಿಕ ಸಮಾಜದ ಸತ್ಯ ಶೋಧನಾ ವರದಿಯನ್ನು ಆಧರಿಸಿ ಆಲೈನ್ ಚರ್ಚೆಯನ್ನು ಇಂದು ನಡೆಸಿತ್ತು. ಬಂಗಾಳದಲ್ಲಿ ಇತ್ತೀಚಿಗೆ ಚುನಾವಣೆ ಮುಗಿದ ನಂತರ, ಫಲಿತಾಂಶ ಹೊರಬೀಳುವ ಗಂಟೆಗಳೊಳಗೆ ಹಿಂಸಾಚಾರ ಭುಗಿಲೆದ್ದಿತು. ಯಾವ ಹಿಂಸಾಚಾರವೂ ನಡೆದೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾದಿಸಿದ್ದರು. ಆದರೆ ಸೈದ್ಧಾಂತಿಕವಾಗಿ ತಮ್ಮಿಂದ […]